ಧಾರವಾಡ : ಕಳ್ಳತನ ಕೇಸ್ ನಲ್ಲಿ ಬಾಗಿಯಾಗಿದ್ದ ಇರಾನಿ ಗ್ಯಾಂಗ್ ಕಳ್ಳರನ್ನ ಬೆಂಗಳೂರಿನ ಕಾಮಾಕ್ಷಿ ಪಾಳ್ಯ ಪೋಲಿಸರು ವಿಚಾರಣೆಗೆ ಅಂತ ಬಂದಾಗ ಪೋಲಿಸರ ಮೆಲೆ ಹಲ್ಲೆ ಮಾಡಿದ್ದಾರೆ.
ನಗರದ ಲೈನ್ ಬಜಾರ ಹನಮಂತರ ದೇವಸ್ಥಾನದ ಪಕ್ಕ, ಶಾಪ್ ಎದುರುಗಡೆ ಗಲಾಟೆ ನಡೆದಿದೆ ಬೆಂಗಳೂರು ಪೊಲೀಸರು ಮತ್ತು ಕಳ್ಳರ ನಡುವೆ ಮಾರಾಮಾರಿ ಯಾಗಿದ್ದು ಪರಿಸ್ಥಿತಿ ವಿಕೋಪಕ್ಕೆ ಹೋಗಿ
ಇರಾನಿ ಗ್ಯಾಂಗ್ ನ 6 ಜನ ಕಳ್ಳರಿಂದ ಬೆಂಗಳೂರು ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ..
ಬಿಯರ್ ಬಾಟಲಿಯಿಂದ ಹೊಡೆದು ಹಲ್ಲೆ ಮಾಡಿರೋ ಇರಾನಿ ಗ್ಯಾಂಗ್ ನವರು ಹಲ್ಲೆ ಮಾಡಿದ್ದಲ್ಲದೇ ತಮಗೆ ತಾವೇ ಬಿಯರ್ ಬಾಟಲಿಯಿಂದ ಇರಿದುಕೊಂಡ ಕಳ್ಳರು ಸದ್ಯ ಒರ್ವನನ್ನ ವಶಕ್ಕೆ ಪಡೆದುಕ್ಕೊಂಡಿದ್ದಾರೆ.ಇನ್ನುಳಿದ 5 ಜನರಿಗಾಗಿ ಪೋಲಿಸರು ಹುಡುಕಾಟವನ್ನ ನಡೆಸುತ್ತಿದ್ದಾರೆ..ಧಾರವಾಡ ಶಹರ ಪೋಲಿಸರು..
ಇನ್ನು ಸ್ಥಳಕ್ಕೆ ಧಾರವಾಡ ಎಸಿಪಿ ಅನುಷಾ ಜಿ ಭೇಟಿ ನೀಡಿ ಪರಿಶಿಲನೆ ನಡೆಸಿ ತನಿಖೆಯನ್ನ ನಡೆಸುತ್ತಿದ್ದಾರೆ..ಬಳಿಕ ಧಾರವಾಡ ಶಹರ ಪೋಲಿಸ್ ಠಾಣೆಯ ಎದುರು ಕುಟುಂಬಸ್ಥರ ಹೈ ಡ್ರಾಮಾವನ್ನ ನಡೆಸುತ್ತಿದ್ದಾರೆ..ನಮ್ಮ ಹುಡುಗನನ್ನ ಬಿಟ್ಟು ಕಳಿಸಿ ಎಂದು ಠಾಣೆಯ ಎದುರು ಬಂದು ಕುಳತಿದ್ದಾರೆ..ಧಾರವಾಡ ಶಹರ ಪೊಲೀಸರು ತನಿಖೆಯನ್ನ ನಡೆಸುತ್ತಿದ್ದಾರೆ..
ಕಳ್ಳರನ್ನ ಹಿಡಿಯಲು ಬಂದ ಬೆಂಗಳೂರು ಪೋಲಿಸರಿಗೆ ಇರಾನಿ ಗ್ಯಾಂಗ್ ಮಾಡಿದ್ದಾದ್ರೂ ಎನು..?
Reviewed by News10Karnataka Admin
on
November 26, 2020
Rating:

No comments: