.

ಆ ಶಾಸಕಿ‌ ಮಕ್ಕಳ‌ ಶಿಕ್ಷಣಕ್ಕಾಗಿ ಮಾಡಿದ್ದೆನೂ ಗೊತ್ತಾ...?

ಬಡಾಲ ಅಂಕಲಗಿ ಶಾಲೆಗೆ 4 ಹೆಚ್ಚುವರಿ ಕೊಠಡಿ
ಗ್ರಾಮಸ್ಥರ ಬೇಡಿಕೆಗೆ ಸ್ಪಂದಿಸಿದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್


ಬೆಳಗಾವಿ : ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಬಡಾಲ ಅಂಕಲಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ 4 ಹೆಚ್ಚವರಿ ಕೊಠಡಿಗಳನ್ನು ಮಂಜೂರು ಮಾಡಿಸಿದ್ದಾರೆ.

ಕ್ಷೇತ್ರದಲ್ಲಿ ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವ ಲಕ್ಷ್ಮಿ ಹೆಬ್ಬಾಳಕರ್, ಗ್ರಾಮಸ್ಥರ ಬೇಡಿಕೆಯಂತೆ ಪ್ರಸ್ತಾವನೆ ಸಿದ್ಧಪಡಿಸಿ ಕೊಠಡಿ ಮಂಜೂರು ಮಾಡಿಸಿದ್ದಾರೆ. ಶನಿವಾರ  ಹೆಚ್ಚುವರಿ ಕೊಠಡಿಗಳ ಕಟ್ಟಡ ಕಾಮಗಾರಿಗೆ ಸ್ಥಳೀಯ ಜನಪ್ರತಿನಿಧಿಗಳು ಅಧಿಕೃತವಾಗಿ ಚಾಲನೆಯನ್ನು ನೀಡಿದರು.


ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಎಸ್ ಡಿ ಎಂ ಸಿ ಅಧ್ಯಕ್ಷ ಬಸವರಾಜ ಎಸ್ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ ಸಿ ಪಾಟೀಲ, ರಾಮನಗೌಡ ಪಾಟೀಲ, ಸುರೇಶ ಇಟಗಿ, ಸಿದ್ದಪ್ಪ ಚಾಪಗಾಂವಿ, ಪಡೆಪ್ಪ ಅರಳಿಕಟ್ಟಿ, ವಿಠ್ಠಲ ಅರ್ಜುನವಾಡಿ, ಶಂಕರ ಚಾಪಗಾಂವಿ, ಅಶೋಕ ಚಾಪಗಾಂವಿ, ಶ್ರೀಕಾಂತ ಮಧುಬರಮಣ್ಣವರ, ಬಸನಗೌಡ ಪಾಟೀಲ, ಸಿದ್ದನಗೌಡ ಪಾಟೀಲ, ಮಂಜುನಾಥ ಅಕ್ಕನವರ, ಶಿವರಾಯಿ ಚಾಪಗಾಂವಿ, ರಾಮನಗೌಡ ಪಾಟೀಲ, ಶಾಲಾ ಸಿಬ್ಬಂದಿ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಆ ಶಾಸಕಿ‌ ಮಕ್ಕಳ‌ ಶಿಕ್ಷಣಕ್ಕಾಗಿ ಮಾಡಿದ್ದೆನೂ ಗೊತ್ತಾ...? ಆ ಶಾಸಕಿ‌ ಮಕ್ಕಳ‌ ಶಿಕ್ಷಣಕ್ಕಾಗಿ ಮಾಡಿದ್ದೆನೂ ಗೊತ್ತಾ...? Reviewed by News10Karnataka Admin on November 21, 2020 Rating: 5

No comments:

Powered by Blogger.