.

ಪತ್ರಕರ್ತ ರವಿ ಬೆಳಗೆರೆ ಬಗ್ಗೆ ನಿಮಗೆಷ್ಟೂ ಗೊತ್ತು...? ಇಲ್ಲಿದೆ ಪುಲ್‌ ಡಿಟೇಲ್..!!!👇

ಹಿರಿಯ ಪತ್ರಕರ್ತ ರವಿ ಬೆಳಗೆರೆ 62 ಶುಕ್ರವಾರ ನವೆಂಬರ್ 13, 2020 ನಿಧನರಾಗಿದ್ದಾರೆ. ಹಾಯ್ ಬೆಂಗಳೂರ್ ವಾರಪತ್ರಿಕೆ ಹಾಗೂ ಓ ಮನಸೇ ಪಾಕ್ಷಿಕದ ಸಂಪಾದಕರಾಗಿದ್ದ ಅವರು ಪ್ರಾರ್ಥನಾ ಹೆಸರಿನ ಶಾಲೆ ನಡೆಸುತ್ತಿದ್ದರು. 60 ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದ ರವಿ ಬೆಳಗೆರೆ ಅವರು ಕಥೆಗಾರರಾಗಿ, ಟೀವಿಗಳಲ್ಲಿ ಕಾರ್ಯಕ್ರಮ ನಿರೂಪಕರಾಗಿಯೂ ಅಷ್ಟೇ ಜನಪ್ರಿಯವಾಗಿ ಬೆಳೆದವರು..


ಕಳೆದ ಇಪ್ಪತ್ತೈದು ವರ್ಷಗಳಲ್ಲಿ ಕರ್ನಾಟಕದ ಪತ್ರಿಕೋದ್ಯಮದಲ್ಲಿ ಪ್ರತ್ಯೇಕವಾದ ಸ್ಥಾನ ಪಡೆದ ವ್ಯಕ್ತಿ ರವಿ ಬೆಳಗೆರೆ. ಇತ್ತೀಚಿನ ವರ್ಷಗಳಲ್ಲಿ ಯೂಟ್ಯೂಬ್ ನಲ್ಲೂ ಚಾನೆಲ್ ಆರಂಭಿಸಿದ್ದ ಅವರಿಗೆ ಅದರಲ್ಲೂ ಜನಪ್ರಿಯತೆ ದಕ್ಕಿತ್ತು. "ನಾನು ಗಣಿತದಲ್ಲಿ ದಡ್ಡ ಇರಬಹುದು, ಎಕನಾಮಿಕ್ಸ್ ನಲ್ಲಿ ಅಲ್ಲ," ಎಂಬುದು ಅವರು ಆಗಾಗ ಹೇಳುತ್ತಿದ್ದ ಮಾತು.ಗಳು ಕೂಡಾ ನೆನಪಾಗುತ್ತೆ‌‌‌...ರವಿ ವಿಕ್ಷಕರಿಗೆ...


ಕನ್ನಡ ಪತ್ರಿಕೋದ್ಯಮದಲ್ಲಿ ಪಿ.ಲಂಕೇಶ್ ವಾರಪತ್ರಿಕೆ ಒಂದು ಮೈಲುಗಲ್ಲು ಎಂದು ಪರಿಗಣಿಸಲಾಗುತ್ತದೆ. ಆ ನಂತರ ಭಿನ್ನ ಹಾದಿಯಲ್ಲಿ ಓದುಗರನ್ನು ತಲುಪಲು ಯತ್ನಿಸಿ, ಯಶಸ್ಸು ಕಂಡಿದ್ದವರು ರವಿ ಬೆಳಗೆರೆ. ಕಾರ್ಗಿಲ್ ಯುದ್ಧ, ಗುಜರಾತ್ ಭೂಕಂಪ, ಅಫ್ಗಾನಿಸ್ತಾನದ ಯುದ್ಧ ಭೂಮಿ ಹಾಗೂ ಈಚಿನ ಪುಲ್ವಾಮಾ ತನಕ ಕನ್ನಡದ ಓದುಗರಿಗೆ ದೇಶ- ವಿದೇಶದ ಅತ್ಯಂತ ಸವಾಲಿನ ವರದಿ- ಸುದ್ದಿಯನ್ನು ನೀಡಿದ್ದರು..
ರವಿ ಬೆಳಗೆರೆ ಹುಟ್ಟಿದ್ದು ಮಾರ್ಚ್ 15, 1958. ತಾಯಿ ಬೆಳಗೆರೆ ಪಾರ್ವತಮ್ಮ ಹಾಗೂ ಸ್ವತಃ ರವಿ ಬೆಳಗೆರೆ ಅವರೇ ಹೇಳಿಕೊಂಡಂತೆ ತಂದೆ- ಕನ್ನಡದ ಹೆಸರಾಂತ ಸಾಹಿತಿ ಬೀಚಿ. ಚಿತ್ರದುರ್ಗದ ಚಳ್ಳಕೆರೆ, ತುಮಕೂರು, ಬಳ್ಳಾರಿ, ಧಾರವಾಡ ಹೀಗೆ ವಿವಿಧೆಡೆಗಳಲ್ಲಿ ವಿದ್ಯಾಭ್ಯಾಸ ಮಾಡಿದ ಅವರು ಬಳ್ಳಾರಿಯಲ್ಲಿ ಉಪನ್ಯಾಸಕರಾಗಿಯೂ ಇದ್ದರು ಅಲ್ಲಿ ಬಳ್ಳಾರಿ ಪತ್ರಿಕೆ ಎಂದು ಸ್ವಂತ ಪತ್ರಿಕೆ ಕೂಡ ಇತ್ತು. ಸಂಯುಕ್ತ ಕರ್ನಾಟಕ, ಲಂಕೇಶ್ ಪತ್ರಿಕೆ, ಈ ಸಂಜೆ ಸೇರಿದಂತೆ ವಿವಿಧ ಪತ್ರಿಕೆಗಳಿಗೆ ಕೆಲಸ ಮಾಡಿದ ಅವರು, 1995ರ ಸೆಪ್ಟೆಂಬರ್ 25ನೇ ತಾರೀಕು ಹಾಯ್ ಬೆಂಗಳೂರ್ ವಾರಪತ್ರಿಕೆ ಆರಂಭಿಸಿದರು. ಆ ನಂತರ ಅವರು ಟ್ರೆಂಡ್ ಸೆಟ್ಟರ್ ಆದರು. ಆ ಮೇಲೆ ಓ ಮನಸೇ ಪಾಕ್ಷಿಕ ಮಾಡಿದರುಪತ್ರಕರ್ತ ರವಿ ಬೆಳಗೆರೆ ಬಗ್ಗೆ ನಿಮಗೆಷ್ಟೂ ಗೊತ್ತು...? ಇಲ್ಲಿದೆ ಪುಲ್‌ ಡಿಟೇಲ್..!!!👇 ಪತ್ರಕರ್ತ ರವಿ ಬೆಳಗೆರೆ ಬಗ್ಗೆ ನಿಮಗೆಷ್ಟೂ ಗೊತ್ತು...? ಇಲ್ಲಿದೆ ಪುಲ್‌ ಡಿಟೇಲ್..!!!👇 Reviewed by News10Karnataka Admin on November 12, 2020 Rating: 5

No comments:

Powered by Blogger.