.

*ಮಹಿಳೆಯನ್ನ ಎಳೆದಾಡಿದ ಬಿಜೆಪಿ ಕಾರ್ಯಕರ್ತರು*

 ನಿನ್ನೆ ನಡೆದ ಮಹಾಲಿಂಗಪುರ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ನಡೆದ ಚುಣಾವಣೆಯಲ್ಲಿ ಶಾಸಕ ಸಿದ್ದು ಸವದಿ ಅವರು ಮಹಿಳೆಯನ್ನ ಎಳೆದಾಡಿದ  ವಿಡಿಯೋ ಈಗ ಪುಲ್ ವೈರಲ್ ಆಗಿದೆ,

ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ತಾಲ್ಲೂಕಿನ ಮಹಾಲಿಂಗಪುರ ಪುರಸಭೆಯ ಚುಣಾವಣೆ ಇದು.ತೇರದಾಳ ಕ್ಷೇತ್ರದ ಶಾಸಕ ಸಿದ್ದು ಸವದಿ ನೇತೃತ್ವದಲ್ಲಿ ಸದಸ್ಯೆಯರನ್ನ ಎಳೆದಾಡಿದ ವಿಡಿಯೋ ಚರ್ಚೆಗೆ ಗ್ರಾಮಸವಾಗಿದೆ.ಸದ್ಯ

ತೇರದಾಳ ಶಾಸಕರ ನಡೆಗೆ ಜನಸಾಮಾನ್ಯರ ಆಕ್ರೋಶ ಹೊರ ಹಾಕುತ್ತಿದ್ದಾರೆ. ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಧ್ಯೆ ವಾಗ್ವಾದ,ಕೈ ಕೈ ಮಿಲಾಯಿಸಿದ್ದ ಕಾರ್ಯಕರ್ತರು ಒಬ್ಬರಿಗೊಬ್ಬರು ಎಳೆದಾಡುಕ್ಕೊಂಡಿದ್ದಾರೆ.ಸ್ಥಳದಲ್ಲಿ ಮಹಾಲಿಂಗಪುರ ಪೊಲೀಸರು ಹಾಜರಿದ್ರು ಪರಿಸ್ತಿತಿಯನ್ನ ತಿಳಿಗೊಳಿಸಲು ಹರಸಾಹ ಪಡಬೇಕಾಯಿತು..ಬಳಿಕ ಪರಿಸ್ಥಿತಿ ತಿಳಿಗೊಳಿಸಲು ಲಾಠಿ ಚಾರ್ಜನ್ನ ಮಾಡಲಾಗಿದೆ..ಬಾಗಲಕೋಟೆ ಜಿಲ್ಲೆಯ ಮಹಲಿಂಗಪುರ ಪಟ್ಟಣದಲ್ಲಿ ಪರಿಸ್ಥಿತಿ ಸದ್ಯ ಉದ್ವಿಗ್ನವಾಗಿತ್ತು.. 23 ಸದಸ್ಯಬಲದ ಪುರಸಭೆಯಲ್ಲಿ ಬಿಜೆಪಿ- 13 , ಕಾಂಗ್ರೆಸ್-10 ಸದಸ್ಯರು ಆಯ್ಕೆ ಆಗಿತ್ತು,  ಶಾಸಕ ಸಿದ್ದು ಸವದಿ,ಪಿಸಿ ಗದ್ದಿಗೌಡರ ಮತ ಚಲಾವಣೆ ಮಾಡಿದ್ದರು..ಆದರೆ 3 ಜನ ಬಿಜೆಪಿ ಸದಸ್ಯರು ಕಾಂಗ್ರೆಸ್ ಗೆ ಬೆಂಬಲ ನೀಡಲು ಮುಂದಾದಾಗ ಗಲಾಟೆ ನಡೆದಿದೆ...ತೇರದಾಳ ಶಾಸಕ ಸಿದ್ದು ಸವದಿ ಸಮ್ಮುಖದಲ್ಲೇ ಸದಸ್ಯೆಯರನ್ನು ಎಳೆದಾಡಿದ್ದಾರೆ ಬಿಜೆಪಿ ಸದಸ್ಯರು

ಕೊನೆಗೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿ ಕಾಂಗ್ರೆಸ್ ಮಧ್ಯೆ ತಲಾ 12ಮತ ಸಮಬಲವಾಗಿದೆ..ಬಳಿಕ ಟಾಸ್ ಮೂಲಕ ಅಧ್ಯಕ್ಷೆ ಉಪಾಧ್ಯಕ್ಷ ಆಯ್ಕೆ ಮಾಡಲಾಗಿದೆ..


ಒಟ್ಟಿನಲ್ಲಿ ಶಾಸಕರು ಈ ರೀತಿಯಾಗಿ ಮಹಿಳಾ ಸದ್ಯರೊಬ್ಬರನ್ನ ಎಳೆದಾಡಿ ತಮ್ಮ‌ನಡತೆಯನ್ನ ತೋರಿಸಿಕ್ಕೊಟ್ಟಿದ್ದಾರೆ..ಶಿಸ್ತಿನ ಪಕ್ಷದ ಶಿಸ್ತು ಇದೆನಾ ಎಂದು ಪ್ರಜ್ಞಾವಂತರ ಪ್ರಶ್ನೆಯಾಗಿದೆ..


*ಮಹಿಳೆಯನ್ನ ಎಳೆದಾಡಿದ ಬಿಜೆಪಿ ಕಾರ್ಯಕರ್ತರು* *ಮಹಿಳೆಯನ್ನ ಎಳೆದಾಡಿದ ಬಿಜೆಪಿ ಕಾರ್ಯಕರ್ತರು* Reviewed by News10Karnataka Admin on November 10, 2020 Rating: 5

No comments:

Powered by Blogger.