.

ಧಾರವಾಡದ ಕೇಂದ್ರಿಯ ವೃತ್ತ ಜುಬ್ಲಿ ಸರ್ಕಲ್ ಈಗ ಕತ್ತಲೆಯ ವೃತ್ತ..!

 ಧಾರವಾಡ

ಧಾರವಾಡದ ಕೇಂದ್ರೀಯ ವೃತ್ತವಾಗಿರುವ ಜುಬ್ಲಿ ಸರ್ಕಲ್ ಬೆಳಕಿಲ್ಲದೇ, ಈಗ ಕತ್ತಲೆಯ ವೃತ್ತವಾಗಿದೆ.ಹೌದು ವೀಕ್ಷಕರೇ, ಧಾರವಾಡದ ಮುಖ್ಯ ವೃತ್ತವಾಗಿರುವ ಜುಬ್ಲಿ ಸರ್ಕಲ್ ನಲ್ಲಿ ಸುಮಾರು 6 ತಿಂಗಳಿನಿಂದ ವಿದ್ಯುತ್ ದೀಪಗಳು ಕೆಲಸ ಮಾಡುತ್ತಿಲ್ಲ,ಸರ್ಕಲ್ ನಲ್ಲಿ ಪ್ರತಿ ನಿತ್ಯ ವಾಹನಗಳು ಸಂಚಾರಿಸುತ್ತವೆ.ಜುಬ್ಲಿ ಸರ್ಕಲ್ ರಾತ್ರಿ ಅದ್ರೇ ಸಾಕು ಬೆಳಕಿಲ್ಲದೇ ವಾಹನಗಳು ಸಂಚಾರಿಸುತ್ತಿವೆ.
ಆಟೋ ಚಾಲಕರು,ಸಂಚಾರಿ ಪೋಲಿಸರು ತಮ್ಮ‌ ಜೀವವನ್ನು ಲೆಕ್ಕಿಸದೇ ಕತ್ತಲಿನಲ್ಲೆ ಜನರ ಸೇವೆ ಮಾಡುತ್ತಿದ್ದಾರೆ.ಸುಮಾರು ಆರು ತಿಂಗಳಾದರು ಕರ್ನಾಟಕದ 2 ನೇ ಅತೀ ದೊಡ್ಡ ಮಹಾನಗರ ಪಾಲಿಕೆ ಎನ್ನಿಸಿಕೊಂಡಿರುವ,ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ನಿರ್ಲಕ್ಷ್ಯಯಾಗಿದೆ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಈ ಕುರಿತು ಕ್ರಮ ಕೈಗೊಳ್ಳಬೇಕೆಂದು ಆಟೋ ಚಾಲಕರೊಬ್ಬರು ಮನವಿ ಮಾಡಿಕೊಂಡಿದ್ದಾರೆ.
ಇನ್ನದಾರೂ ಜುಬ್ಲಿ ಸರ್ಕಲ್ ಕತ್ತಲೆಯಿಂದ ಬೆಳಕಿಗೆ ಬರುತ್ತಾ...ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತರಾ..ಎಂದು ಕಾದುನೊಡಬೇಕಾಗಿದೆ.


ಬ್ಯೂರೋ ರೀಪೋರ್ಟ್, ನ್ಯೂಸ್ 10 ಕರ್ನಾಟಕ,ಧಾರವಾಡಧಾರವಾಡದ ಕೇಂದ್ರಿಯ ವೃತ್ತ ಜುಬ್ಲಿ ಸರ್ಕಲ್ ಈಗ ಕತ್ತಲೆಯ ವೃತ್ತ..! ಧಾರವಾಡದ ಕೇಂದ್ರಿಯ ವೃತ್ತ ಜುಬ್ಲಿ ಸರ್ಕಲ್ ಈಗ ಕತ್ತಲೆಯ ವೃತ್ತ..! Reviewed by News10Karnataka Admin on November 19, 2020 Rating: 5

No comments:

Powered by Blogger.