.

ಸವದತ್ತಿ ಯಲ್ಲಮ್ಮ‌ ದೇವಿಯ ದರ್ಶನ ಒಂದು ತಿಂಗಳು ವಿಸ್ತರಣೆ 2021 ಕ್ಕಾದ್ರು ದರ್ಶನ ಸಿಗುತ್ತಾ..? ಜಿಲ್ಲಾಧಿಕಾರಿ ಆದೇಶ.


ಬೆಳಗಾವಿ : ಮತ್ತೆ ಒಂದು ತಿಂಗಳ ಕಾಲ ಸವದತ್ತಿ ಎಲ್ಲಮ್ಮಾ ದೇವಿ ದೇವಸ್ಥಾನ ಬಂದ್ ಮಾಡಿ ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ಆದೇಶ ಹೊರಡಿಸಿದ್ದಾರೆ.ಕಳೆದ ಎಂಟು ತಿಂಗಳಿಂದ ದೇಶಾದ್ಯಂತ ಕೊರೊನ ಆಕ್ರಮಣ ಹಿನ್ನೆಲೆ ರಾಜ್ಯಾದ್ಯಂತ ಎಲ್ಲಾ ದೇವಸ್ಥಾನಗಳಿಗೆ ಭಕ್ತರ ಭೇಟಿ ನಿಷೇಧಿಸಲಾಗಿತ್ತು.ಅದರಂತೆ ಮಹಾರಾಷ್ಟ್ರದಲ್ಲಿ ದಿನದಿಂದ ಕೊರೊನ ಪ್ರಕರಣಗಳು ಜಾಸ್ತಿಯಾಗಿರುವ ಕಾರಣ ಬೆಳಗಾವಿ ಜಿಲ್ಲೆಯ ಸವದತ್ತಿ ಎಲ್ಲಮ್ಮಾ ದೇವಿ ದೇವಸ್ಥಾನಕ್ಕೆ ಭಕ್ತರ ಬರುವಿಕೆಯನ್ನ ನಿಷೇಧಿಸಲಾಗಿದೆ.ಸಾಮಾನ್ಯವಾಗಿ ಎಲ್ಲಮ್ಮ ದೇವಿಗೆ ರಾಜ್ಯದ ನಾನಾ ಭಾಗಗಳಿಂದ ಭಕ್ತರ ದಂಡು ಹರಿದು ಬರುತ್ತದೆ.

ಅಲ್ಲದೇ ಮಹಾರಾಷ್ಟ್ರ ಭಾಗದಿಂದ ಲಕ್ಷಾಂತರ ಭಕ್ತರು ಆಗಮಿಸುವ ಸಾಧ್ಯತೆಯಿಂದ ಕೊರೊನ ಮತ್ತೆ ಎರಡನೇ ಅವಧಿ ತನ್ನ ವ್ಯಾಪ್ತಿ ಪಸರಿಸುವ ಕಾರಣ ಜಿಲ್ಲಾಧಿಕಾರಿಗಳು ದೇವಸ್ಥಾನ ಬಂದ್ ಮಾಡಿ ಆದೇಶ ಹೊರಡಿಸಿದ್ದಾರೆ...
ಭಕ್ತರು ಇನ್ನು ಒಂದು ತಿಂಗಳವರೆಗೆ ಸಹರಿಸಬೇಕಾಗಿದೆ..ಭಕ್ತರಿಗಿಲ್ಲ ಇನ್ನು ಒಂದು ತಿಂಗಳ ದೇವಿಯ ದರ್ಶನ...
ಸವದತ್ತಿ ಯಲ್ಲಮ್ಮ‌ ದೇವಿಯ ದರ್ಶನ ಒಂದು ತಿಂಗಳು ವಿಸ್ತರಣೆ 2021 ಕ್ಕಾದ್ರು ದರ್ಶನ ಸಿಗುತ್ತಾ..? ಜಿಲ್ಲಾಧಿಕಾರಿ ಆದೇಶ. ಸವದತ್ತಿ ಯಲ್ಲಮ್ಮ‌ ದೇವಿಯ ದರ್ಶನ ಒಂದು ತಿಂಗಳು ವಿಸ್ತರಣೆ 2021 ಕ್ಕಾದ್ರು ದರ್ಶನ ಸಿಗುತ್ತಾ..? ಜಿಲ್ಲಾಧಿಕಾರಿ ಆದೇಶ. Reviewed by News10Karnataka Admin on November 30, 2020 Rating: 5

No comments:

Powered by Blogger.