.

ನಾಸಿರ್ ಭಾಗವಾನ್ ಬೆಂಬಲಕ್ಕೆ ನಿಂತ ಉದ್ಯಮಿ ಹಬೀಬ್ ಶಿಲೆದಾರ...

ರಂಗೇರುತ್ತಿರುವ ರಾಣಿ ಶುಗರ್ ಚುನಾವಣೆ

15 ಸ್ಥಾನಗಳಿಗೆ 37 ಅಭ್ಯರ್ಥಿಗಳು

ನಾಸೀರ ಬಾಗವಾನ್ ಪೆನಲ್‍ಗೆ ಭಾರಿ ಬೆಂಬಲ

ರೈತರಿಗೆ, ಕಾರ್ಮಿಕರಿಗೆ ಭರವಸೆ ನೀಡಿದ ಉದ್ಯಮಿ

ಬಾಗವಾನ್ ಬಂದರೆ ಬವಣೆ ದೂರ..

ಚನ್ನಮ್ಮನ ಕಿತ್ತೂರು ತಾಲೂಕಿನ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಕೆ ಮಾಡಿರುವ ಬೆಳೆಗಾರರಿಗೆ ಬಾಕಿ ಬಿಲ್ ನೀಡುವುದು ಹಾಗೂ ಕಾರ್ಮಿಕರಿಗೆ ಸಂಬಳ ನೀಡಿ ಪರಿಹಾರ ಒದಗಿಸಲಾಗುವುದು ಎಂದು ರೈತ ಹಿತರಕ್ಷಣಾ ಪೆನಲ್ ಮುಖಂಡತ್ವ ವಹಿಸಿರುವ ಉದ್ಯಮಿ ನಾಸೀರ ಬಾಗವಾನ್  ಭರವಸೆ ಕೊಟ್ಟಿದ್ದಾರೆ.. 
ರಾಣಿ ಶುಗರ್ ಚುನಾವಣೆ ನಿಮಿತ್ತ ಸಮೀಪದ ಅಂಬಡಗಟ್ಟಿ ಗ್ರಾಮದ ಸತೀಶಣ್ಣಾ ಕಲ್ಯಾಣ ಮಂಟಪದಲ್ಲಿ  ಆಯೋಜಿಸಿದ್ದ ರೈತ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಕಾರ್ಖಾನೆಯ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಶಕ್ತಿಮೀರಿ ಪ್ರಯತ್ನಿಸಲಾಗುವುದು
ಕಳೆದ ಹಂಗಾಮಿನಲ್ಲಿ ಕಬ್ಬು ಪೂರೈಕೆ ಮಾಡಿರುವ ರೈತರಿಗೆ ರೂ. 27 ಕೋಟಿ ಬಾಕಿ ಹಣ ನೀಡಬೇಕು. ಕಾರ್ಖಾನೆ ಮೇಲೆ 97 ಕೋಟಿ ಸಾಲವಿದೆ. 8 ತಿಂಗಳಿಂದ ದುಡಿಯುವ ಕಾರ್ಮಿಕರಿಗೆ ವೇತನ ಪಾವತಿ ಮಾಡಿಲ್ಲ. ಇವೆಲ್ಲ ಜವಾಬ್ದಾರಿಯನ್ನು ನೀಗಿಸಿ ಪ್ರಸಕ್ತ ಸಾಲಿನ ಕಬ್ಬು ಅರೆಯುವ ಹಂಗಾಮು ಯಶಸ್ವಿಗೊಳಿಸುವ ಜವಾಬ್ದಾರಿ ಇದೆ..
ಬಳಿಕ ಸಮಾಜ ಸೇವಕ ಹಬೀಬ್ ಶಿಲೇದಾರ ಮಾತನಾಡಿ ಕಾರ್ಖಾನೆಯನ್ನು ಯಾರು ಬದುಕಿಸುತ್ತಾರೆಯೊ ವಿಚಾರಿಸಿ ಅವರಿಗೆ ಮತ ನೀಡಿ ಆಯ್ಕೆ ಮಾಡಬೇಕು ಎಂದು ಕೋರಿದ್ದಾರೆ ಸಮಾಜ ಸೇವಕ ಹಬೀಬ್ ಶಿಲೇದಾರ ಕ್ಷೇತ್ರದಲ್ಲಿ ಸಾಕಷ್ಟು ಜನ ಸೇವೆ ಮಾಡಿದ್ದಾರೆ. ಇಂತಹ ವ್ಯಕ್ತಿ ಬಾಗವಾನ್ ಅವರ ಪೆನಲ್ ಗೆ ಬೆಂಬಲವಾಗಿ ನಿಂತ್ತಿದ್ದಾರೆ ಅಂದರೆ ಅದು ನಾಸೀರ್ ಬಾಗವಾನ ಅವರೆ ಮತ್ತಷ್ಟು ಆನೆ ಬಲ ಬಂದತೆ ಎಂದು ಇಲ್ಲಿಯ ರೈತರು ಹೇಳುತ್ತಿದ್ಧಾರೆ....
ನಾಸಿರ್ ಭಾಗವಾನ್ ಬೆಂಬಲಕ್ಕೆ ನಿಂತ ಉದ್ಯಮಿ ಹಬೀಬ್ ಶಿಲೆದಾರ... ನಾಸಿರ್ ಭಾಗವಾನ್ ಬೆಂಬಲಕ್ಕೆ ನಿಂತ ಉದ್ಯಮಿ ಹಬೀಬ್ ಶಿಲೆದಾರ... Reviewed by News10Karnataka Admin on October 11, 2020 Rating: 5

No comments:

Powered by Blogger.