.

ಧಾರವಾಡ ಜಿಲ್ಲೆಗೆ ನೂತನ ಎಸ್ಪಿಯಾಗಿ ಪಿ, ಕೃಷ್ಣಕಾಂತ ಅಧಿಕಾರ ಸ್ವಿಕಾರ..

*ಧಾರವಾಡ ಜಿಲ್ಲೆಗೆ ನೂತನ ಎಸ್ಪಿಯಾಗಿ ಪಿ, ಕೃಷ್ಣಕಾಂತ ಅಧಿಕಾರ ಸ್ವಿಕಾರ*

 ಧಾರವಾಡ :ಧಾರವಾಡ ಜಿಲ್ಲೆಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಪಿ ಕೃಷ್ಣಕಾಂತ ಅವರು ಅಧಿಕಾರವನ್ನ ವಹಿಸಿಕ್ಕೊಂಡಿದ್ದಾರೆ..ಹಿಂದಿನ‌ ಎಸ್‌ಪಿ ಯಾಗಿದ್ದ ವರ್ತಿಕಾ ಕಟಿಯಾರ ಅವರು1 ವರ್ಷ 2 ತಿಂಗಳು ಕೆಲಸ ಮಾಡಿದ್ದಾರೆ. ಈ ಅವಧಿಯಲ್ಲಿ ನನಗೆ ಸಹಕಾರ ನೀಡಿದ ಜಿಲ್ಲೆಯ ಜನತೆಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ನಿರ್ಗಮಿತ ಎಸ್ಪಿ ವರ್ತಿಕಾ ಕಟಿಯಾರ್ ಹೇಳಿದ್ದಾರೆ..

ಧಾರವಾಡದ ಡಿಎಆರ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ಪೊಲೀಸ್ ಹುತಾತ್ಮ ದಿನಾಚರಣೆ ನಂತರ ಅವರು ಮಾಧ್ಯಮದವರೊಂದಿಗೆ ಮಾತನಾಡಿದ್ದಾರೆ ಧಾರವಾಡ ಜಿಲ್ಲೆಯಲ್ಲಿ ಇದು ನಾನು ಆಚರಣೆ ಮಾಡುತ್ತಿರುವ ಕೊನೆಯ ಪೊಲೀಸ್ ಹುತಾತ್ಮ ದಿನಾಚರಣೆಯಾಗಿದೆ. ಮುಂದೆ ಬರುವ ಎಸ್ಪಿ ಕೂಡ ಸಾಕಷ್ಟು ಅನುಭವ ಉಳ್ಳವರಾಗಿದ್ದಾರೆ. ಅವರಿಂದಲೂ ಉತ್ತಮ ಕಾರ್ಯಗಳಾಗಲಿವೆ ನನಗೆ ಕೊಟ್ಟ ಸಹಕಾರವನ್ನ ಅವರಿಗೂ ಕೊಡಿ ಎಂದು ವರ್ತಿಕಾ ಕಟಿಯಾರ ಹೇಳಿದ್ದಾರೆ..
ಕೊರೊನಾದಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಮ್ಮ ಪೊಲೀಸರು ಹಾಗೂ ಜಿಲ್ಲೆಯ ಜನತೆ ನನಗೆ ಸಾಕಷ್ಟು ಸಹಕಾರ ನೀಡಿದ್ದಾರೆ. ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ನಾನು ಕೆಲಸ ಮಾಡಿದ್ದು, ನನಗೆ ಖುಷಿ ಕೊಟ್ಟಿದೆ ಎಂದು ಧಾರವಾಡ ಜಿಲ್ಲೆ ಜನತೆಯನ್ನ ಹೊಗಳಿ ಕ್ಕೊಂಡಾಡಿದ್ದಾರೆ..
ಧಾರವಾಡ ಜಿಲ್ಲೆಗೆ ನೂತನ ಎಸ್ಪಿಯಾಗಿ ಪಿ, ಕೃಷ್ಣಕಾಂತ ಅಧಿಕಾರ ಸ್ವಿಕಾರ.. ಧಾರವಾಡ ಜಿಲ್ಲೆಗೆ ನೂತನ ಎಸ್ಪಿಯಾಗಿ ಪಿ, ಕೃಷ್ಣಕಾಂತ ಅಧಿಕಾರ ಸ್ವಿಕಾರ.. Reviewed by News10Karnataka Admin on October 21, 2020 Rating: 5

No comments:

Powered by Blogger.