ನಕಲಿ ವೈದ್ಯನ ಮನೆ ಹಾಗೂ ಔಷಧಿ ಅಂಗಡಿ ಮೇಲೆ ಅಧಿಕಾರಿಗಳು ದಾಳಿ ಮಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಕೋನಸಾಗರದಲ್ಲಿ ನಡೆದಿದೆ.. ಆಂಧ್ರಪ್ರದೇಶದ ಮೂಲದ ಸುರೇಶ್ ಎಂಬ ವ್ಯಕ್ತಿ ಹಲವಾರು ದಿನಗಳಿಂದ ಈ ಭಾಗದಲ್ಲಿ ತಾನು ವೈದ್ಯನೆಂದು ಸುಳ್ಳು ಹೇಳಿಕೊಂಡು ಚಿಕಿತ್ಸೆ ನೀಡುತ್ತಿದ್ದ.ಅಲ್ಲದೇ ತನ್ನ ಮನೆಯೊಳಗೆ ಸ್ವತಃ ಕ್ಲಿನಿಕ್ ಹಾಗೂ ಔಷಧ ಅಂಗಡಿ ಸಹ ಇಟ್ಟಿದ್ದನು.
ಹಾಗಾಗಿ ಖಚಿತ ಮಾಹಿತಿಯ ಮೇರೆಗೆ ಮೊಳಕಾಲ್ಮೂರು ತಹಶಿಲ್ದಾರ್ ಮಲ್ಲಿಕಾರ್ಜುನ ಹಾಗೂ ತಾಲೂಕು ವೈದ್ಯಾಧಿಕಾರಿ ಸುಧಾಮಣಿಯವರ ತಂಡ ದಾಳಿ ನಡೆಸಿದ್ದು,ಅಪಾರ ಪ್ರಮಾಣದ ವಿವಿಧ ಕಂಪನಿಗಳ ಮಾತ್ರೆ ಹಾಗೂ ಇಂಜಕ್ಷನ್ ಸಿರೆಂಜ್ ಔಷಧಿಗಳನ್ನ ಜಪ್ತಿ ಮಾಡಿದ್ದಾರೆ.
ಅಲ್ಲದೆ ಈ ಸುರೇಶನ ವಿರುದ್ದ ಈಗಾಗಲೇ ಮೊಳಕಾಲ್ಮೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಿಸಿಕ್ಕೊಂಡು ತನಿಖೆ ನಡೆಸುತ್ತಿದ್ದಾರೆ..
ನಕಲಿ ವೈದ್ಯನಿಗೆ ತಹಶಿಲ್ದಾರ ಕೊಟ್ಟ ಶಾಕಿಂಗ್ ಎನ್ ಗೊತ್ತಾ..?
Reviewed by News10Karnataka Admin
on
October 15, 2020
Rating:

No comments: