.

ಚಿಕ್ಕೋಡಿ ರಾಜ್ಯ ರಾಜಕಾರಣ ಬೆಳಗಾವಿಗೆ‌ ಶಿಪ್ಟ ಆಗುತ್ತಾ..ಪ್ರಕಾಶ ಹುಕ್ಕೇರಿ ವರ್ಸಸ್ ರಮೇಶ ಕತ್ತಿ, ಮತ್ತೆ ನಡೆಯುತ್ತಾ ಬಿಗ್‌ಪೈಟ್....

ಬೆಳಗಾವಿ ರಾಜ್ಯ ರಾಜಕಾರಣದಲ್ಲಿ ಭಾರಿ ಬದಲಾವಣೆ ಆಗೋ ಸಾದ್ಯತೆ..

ಬೆಳಗಾವಿ : ಬೆಳಗಾವಿ ಲೋಕಸಭೆಯ ಸದಸ್ಯ ದಿವಂಗತ ಸುರೇಶ ಅಂಗಡಿ‌ ಅವರ ಮರಣದ ನಂತರ ಸದ್ಯ ಬೆಳಗಾವಿ ರಾಜ್ಯ ರಾಜಕಾರಣದಲ್ಲಿ ಬದಲಾವಣೆಗಳು ಆಗು ಸಾದ್ಯತೆಗಳಿವೆ..ಬೆಳಗಾವಿ ಬೌಗೋಳಿಕವಾಗಿ   18 ವಿಧಾನಸಭಾ ಕ್ಷೆತ್ರವನ್ನ ಹೋಂದಿದೆ..ಇನ್ನು ಬೆಳಗಾವಿಯಲ್ಲಿ ಹೆಚ್ಚು ವಿಧಾನಸಭಾ ಕ್ಷೆತ್ರವನ್ನ ಗೆದ್ದಿರುವ ಪಕ್ಷ ಅಂದ್ರೆ ಬಿಜೆಪಿ ಪಕ್ಷ..ಅದರಲ್ಲೂ ರಮೇಶ ಜಾರಕಿಹೊಳಿ ಬಿಜೆಪಿ ಸೇರ್ಪಡೆಯಾದ ಮೇಲಂತೂ ಕುಂದಾನಗರಿ ಬೆಳಗಾವಿಯಲ್ಲಿ ಬರ್ಜರಿಯಾಗಿ‌ ಮುನ್ನುಗ್ಗುತ್ತಿದೆ..ಜೊತೆಗೆ ರಮೇಶ ಜಾರಕಿಹೊಳಿ ನೆತೃತ್ವದಲ್ಲಿ ಸದ್ಯ ಬೆಳಗಾವಿಯಲ್ಲಿ ಬಿಜೆಪಿ ಪಕ್ಷವನ್ನು ಸಂಘಟಿಸಲಾಗುತ್ತಿದೆ...

ಸದ್ಯ ದಿ.ಸುರೇಶ ಅಂಗಡಿ‌ ಮರಣದ ನಂತರ ಬೆಳಗಾವಿ ಲೋಕಸಭಾ ಕ್ಷೆತ್ರದ ಟಿಕೆಟ್ ಯಾರಿಗೆ ಕೊಡಬೇಕು ಎಂದು ಬಿಜೆಪಿ ಹೈ ಕಮಾಂಡಗೆ ತಲೆ ನೋವಾಗಿದೆ..ಯಾಕೆಂದ್ರೆ ಬೆಳಗಾವಿಯಲ್ಲಿ ಕತ್ತಿ‌ ಸಹೋದರರು ಕೂಡಾ ಅಷ್ಟೆ ಪ್ರಭಲ ಶಾಲಿಯಾಗಿದ್ದಾರೆ..ಆದರೆ ಕಳೆದ ಭಾರಿ ಲೋಕಸಭಾ ಚುಣಾವಣೆಯಲ್ಲಿ ಚಿಕ್ಕೋಡಿಯಲ್ಲಿ ಮಾಜಿ ಸಂಸದ ರಮೇಶ ಕತ್ತಿಗೆ ಟಿಕೆಟ್ ಕೈ ತಪ್ಪಿದ ಹಿನ್ನಲೆ ಕತ್ತಿ ಸಹೋದರರು ಬೇಸರಗೊಂಡಿದ್ದರು, ಆದರೆ ಸದ್ಯ ಬೆಳಗಾವಿ ಲೋಕಸಭೆಗೆ ಟಿಕೆಟ್ ಗಾಗಿ ರಮೇಶ ಕತ್ತಿ ಕೂಡಾ ಒಬ್ರಾಗಿದ್ದಾರೆ..ಒಂದು ಕಡೆ ಅಂಗಡಿ ಅವರ ಕುಟುಂಬಕ್ಕೆ‌ ಟಿಕೆಟ್ ನೀಡಬೇಕು ಎಂದು ಕೆಲ ಮುಖಂಡ ಒತ್ತಾಯವಿದೆ..ಮತ್ತೊಂದೆಡೆ ಪ್ರಮುಖ ಒಳೊಳಗೆ ಎಂ ಪಿ ಖುರ್ಚಿಗಾಗಿ ಟವೆಲ ಹಾಕ್ತಾ ಇದಾರೆ..
ಒಟ್ಟಿನಲ್ಲಿ ಬೆಳಗಾವಿಯಲ್ಲಿ ಬಿಜೆಪಿ ಇಂದ ಬಿ ಜೆಪಿ ಯಿಂದ ಟಿಕೆಟ್ ಗಾಗಿ ಲಾಬಿ ನಡಿತಾ ಇದೆ..ಮತ್ತೊಂದಡೆ ಮಾಜಿ ಹಿರಿಯ ಕಾಂಗ್ರೆಸ್ ಸಂಸದರಾದ ಪ್ರಕಾಶ ಹುಕ್ಕೇರಿ ಕೂಡಾ ಕಾಂಗ್ರೆಸ್ ನಿಂದ ನಿಲ್ಲುವ ಸಾದ್ಯತೆಗಳಿವೆ..ಸದ್ಯ ಬೆಳಗಾವಿಯಲ್ಲಿ ಲೋಕಸಭೆಗೆ ನಿಲ್ಲೋ ಕಾಂಗ್ರೆಸ್ ಟಿಕೆಟ್ ನಲ್ಲಿ ಇವರು ಮುಂಚೂಣಿಯಲ್ಲಿದ್ದಾರೆ...

ಒಟ್ಟಿನಲ್ಲಿ ಚಿಕ್ಕೋಡಿ ರಾಜ್ಯಕಾರಣ ಬೆಳಗಾವಿಗೆ ಶಿಪ್ಟ ಆಗಲಿದೆಯಾ, ಚಿಕ್ಕೋಡಿ ಲೋಕಸಭೆಯಲ್ಲಿ ಸೋತ ಅಭ್ಯರ್ಥಿಗಳಿಗೆ ಎರಡು ರಾಷ್ಟ್ರೀಯ ಪಕ್ಷಗಳು ಬೆಳಗಾವಿಯ ಲೋಕಸಭೆಗೆ ನಿಲ್ಲಸ್ಥಾರಾ ಎಂಬುದು ಚರ್ಚೆಯಲ್ಲಿದೆ...
ಚಿಕ್ಕೋಡಿ ರಾಜ್ಯ ರಾಜಕಾರಣ ಬೆಳಗಾವಿಗೆ‌ ಶಿಪ್ಟ ಆಗುತ್ತಾ..ಪ್ರಕಾಶ ಹುಕ್ಕೇರಿ ವರ್ಸಸ್ ರಮೇಶ ಕತ್ತಿ, ಮತ್ತೆ ನಡೆಯುತ್ತಾ ಬಿಗ್‌ಪೈಟ್.... ಚಿಕ್ಕೋಡಿ ರಾಜ್ಯ ರಾಜಕಾರಣ ಬೆಳಗಾವಿಗೆ‌ ಶಿಪ್ಟ ಆಗುತ್ತಾ..ಪ್ರಕಾಶ ಹುಕ್ಕೇರಿ  ವರ್ಸಸ್ ರಮೇಶ ಕತ್ತಿ, ಮತ್ತೆ ನಡೆಯುತ್ತಾ ಬಿಗ್‌ಪೈಟ್.... Reviewed by News10Karnataka Admin on October 12, 2020 Rating: 5

No comments:

Powered by Blogger.