.

ಡಿಕೆ ಶಿವಕುಮಾರ್,ಡಿಕೆ ಸುರೇಶ್ ಮನೆ ಮೇಲೆ ಸಿಬಿಐ ರೇಡ್ : ಕನಕಪುರ ಬಂಡೆಗೆ ಸಿಬಿಐ ಬಿಗ್ ಶಾಕ್.....ಕೆಪಿಸಿಸಿ ಅಧ್ಯಕ್ಷ, ಟ್ರಬಲ್ ಶೂಟರ್ ಡಿ ಕೆ ಶಿವಕುಮಾರಗೆ ಮತ್ತೊಂದು ಸಂಕಷ್ಟ  ಬಂದೊದಗಿದೆ,. ಡಿ ಕೆ ಶಿವಕುಮಾರ ಮನೆ ಮೇಲೆ ಇಂದು ಬೆಳ್ಳಂ ಬೆಳಿಗ್ಗೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.

ಡಿ ಕೆ ಶಿವಕುಮಾರ್ ಅವರ ಸದಾಶಿವ ನಗರದ ಮನೆ ಸೇರಿದಂತೆ ಕನಕಪುರದಲ್ಲಿ ಕೂಡಾ ದಾಳಿ ಮಾಡಿ ಪರಿಶೀಲನೆ ನಡೆಸುತ್ತಿದ್ದಾರೆ. ಡಿ ಕೆ ಶಿವಕುಮಾರ್ ಅವರ ಸಹೋದರ ಸಂಸದರಾದ ಡಿ ಕೆ ಸುರೇಶ್ ಮನೆಗೂ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದ್ದು,.ಅಲ್ಲದೇ ಈ ಹಿಂದೆ ಇಡಿ ಕೂಡ ಇವರನ್ನ ಬಂಧಿಸಿ ವಿಚಾರಣೆ ನಡೆಸಿತ್ತು.ನಂತರ ಬೇಲ್ ಮೇಲೆ  ಹೊರ ಬಂದಿದ್ದ ಡಿ ಕೆ ಶಿವಕುಮಾರಗೆ ಇಂದು ಸಿಬಿಐ ಶಾಕ್ ನೀಡಿದೆ.ಇದಕ್ಕೂ ಮೊದಲು ಸಿಬಿಐ ವಿಚಾರಣೆಗೆ ಬರುವ ಮೊದಲು ಹೈಕೋರ್ಟ್ ನಲ್ಲಿ ವಿಚಾರಣೆಗೆ ವಿಚಾರಣೆ ರದ್ದು ಕೋರಿ ಅರ್ಜಿ ಸಲ್ಲಿಸಲಾಗಿತ್ತು.ಆ ಅರ್ಜಿಯನ್ನ ಹೈಕೋರ್ಟ್ ವಜಾಗೊಳಿಸಿತ್ತು..ಅನುಮತಿ ದೊರತ ಕೂಡಲೇ ಇಂದು ಬೆಳಂಬೆಳಗ್ಗೆ ಸಿಬಿಐ ಡಿ ಕೆ ಬ್ರದರ್ ಮನೆ ಮೇಲೆ ದಾಳಿ ನಡೆಸಿದ್ದಾರೆ....

ಸಿಬಿಐನ ಬೆಂಗಳೂರು ವಿಭಾಗದ ಪೊಲೀಸರು ಈ ದಾಳಿ ನಡೆಸಿದ್ದು, ಡಿಕೆ ಸಹೋದರರಿಗೆ ಸೇರಿದ ಹಲವು ಕಡೆ ದಾಳಿ ನಡೆಸಿದ್ದಾರೆ. ಇಂದು ಬೆಳಿಗ್ಗೆ ಆರು ಗಂಟೆಗೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.

ಒಟ್ಟಿನಲ್ಲಿ ಸದ್ಯ ಸಿಬಿಐ ಅಧಿಕಾರಿಗಳು ಡಿಕೆ ಸುರೇಶ ಮತ್ತು ಡಿಕೆ ಶಿವಕುಮಾರ ಮೇಲೆ ದಾಳಿ ಮಾಡಿ ಹಲವು ದಾಖಲೆಗಳನ್ನ ಪರಿಶಿಲನೆ ಮಾಡುತ್ತಿದ್ದಾರೆ...
ಡಿಕೆ ಶಿವಕುಮಾರ್,ಡಿಕೆ ಸುರೇಶ್ ಮನೆ ಮೇಲೆ ಸಿಬಿಐ ರೇಡ್ : ಕನಕಪುರ ಬಂಡೆಗೆ ಸಿಬಿಐ ಬಿಗ್ ಶಾಕ್..... ಡಿಕೆ ಶಿವಕುಮಾರ್,ಡಿಕೆ ಸುರೇಶ್ ಮನೆ ಮೇಲೆ ಸಿಬಿಐ ರೇಡ್ : ಕನಕಪುರ ಬಂಡೆಗೆ ಸಿಬಿಐ ಬಿಗ್ ಶಾಕ್..... Reviewed by News10Karnataka Admin on October 04, 2020 Rating: 5

No comments:

Powered by Blogger.