.

ಕಿತ್ತೂರು ಕೋಟೆಯ ಮೇಲೆ ಬ್ರಿಟಿಷರ ಆಕ್ರಮಣ ಹೇಗಿತ್ತು, ಅದಕ್ಕೆ ಚನ್ನಮ್ಮಾಜಿ ಮಾಡಿದ ಪ್ಲಾನ್ ಎನಿತ್ತು ಗೊತ್ತಾ...?   News 10 Karnataka


Do Not Copy This Story Without News 10 Karnataka Permission(Copyright © 2020 News 10 Karnataka All Right Reseved)
                               


News 10 Karnataka

 ಕಿತ್ತೂರು ಕೋಟೆಯ ಮೇಲೆ ಬ್ರಿಟಿಷರ ಆಕ್ರಮಣ ಹೇಗಿತ್ತು, ಅದಕ್ಕೆ ಚನ್ನಮ್ಮಾಜಿ ಮಾಡಿದ ಪ್ಲಾನ್ ಎನಿತ್ತು ಗೊತ್ತಾ...?
ಚನ್ನಮ್ಮನ ನಾಡು ಕಿತ್ತೂರ ಕೊಟೆಯ ಮೇಲೆ ಬ್ರಿಟಿಷರ್ ಆಕ್ರಮಣ ಹೆಗಿತ್ತು ಗೊತ್ತಾ....

 ಕಿತ್ತೂರಿನ ಕೋಟೆಯ ಮೇಲೆ ಬ್ರಿಟಿಷರು ಮಾಡಬಹುದಾದ ಆಕ್ರಮಣವನ್ನು ತಪ್ಪಿಸಲು ಚೆನ್ನಮ್ಮ ಥ್ಯಾಕರೆಗೆ, ಮನ್ರೋನಿಗೆ ಹಾಗೂ ಚಾಪ್ಲಿನ್ನನಿಗೂ ಸಹ ಸಂಧಾನಕ್ಕಾಗಿ ಪತ್ರ ಬರೆದಿದ್ದಳು ತಾಯಿ ಚನ್ನಮ್ಮ  ಮುಂದಾಲೋಚನೆಯಿಂದ ಕೊಲ್ಲಾಪುರ ಮೊದಲಾದ ನೆರೆಯ ಸಂಸ್ಥಾನಗಳಿಗೆ ಸಹಾಯ ಕೋರಿ ಪತ್ರವ್ಯವಹಾರ ಕೂಡಾ ಮಾಡಿದ್ದಳು , ಇಷ್ಟಾದ್ರೂ ಕೆಂಪು ಪಿರಂಗಿಗಳು ಮಾತ್ರ..

1824 ಅಕ್ಟೋಬರ್ 21 ರಂದು ಥ್ಯಾಕರೆ ಕಿತ್ತೂರಿಗೆ ಬಂದ್ದಿದ್ದನು,  ಮೂರನೆಯ ದಿನ ಅಂದರೆ ಅಕ್ಟೋಬರ  23 ರಂದು ಕೋಟೆಯ ಮೇಲೆ ತೋಪು ಹಾರಿಸಲು ತನ್ನ ಸೈನ್ಯಕ್ಕೆ ಅಪ್ಪಣೆ ಕೊಟ್ಟದ್ದನು, ಆದರೆ  ಥಟ್ಟನೆ ತೆಗೆದ ಕೋಟೆಯ ಬಾಗಿಲಿನಿಂದ ಸಾವಿರಾರು ಜನ ಕಿತ್ತೂರಿನ ವೀರರು ಸರದಾರ ಗುರುಸಿದ್ದಪ್ಪನವರ ಮುಂದಾಳತ್ವದಲ್ಲಿ ಥ್ಯಾಕರೆಯ ಸೈನ್ಯದ ಮೆಲೆ ಮುಗಿಬಿದ್ದು ಹೋರಾಟವನ್ನ ನಡೆಸಿದ್ದರು, ತಾಯಿ ಚೆನ್ನಮ್ಮ ರಾಣಿಯ ಅಂಗರಕ್ಷಕನಾಗಿದ್ದ ಅಮಟೂರು ಬಾಳಪ್ಪನ ಗುಂಡಿಗೆ ಥ್ಯಾಕರೆ ಬಲಿಯಾಗಿ ಹೊಗ್ತಾನೆ ನೋಡಿ ಬಳಿಕ ಸ್ಟೀವನ್ಸನ್ ಹಾಗೂ ಈಲಿಯಟ್ ಇಬ್ಬರನ್ನ ವಶಕ್ಕೆ ಪಡೆದುಕ್ಕೊಳ್ಳಲಾಗುತ್ತೆ,  ಈ ವಿಜಯೋತ್ಸವವನ್ನು ಕರ್ನಾಟಕ ಸರ್ಕಾರ ಕಿತ್ತೂರು ಉತ್ಸವ ಅನ್ನುವ ಹೆಸರಿನಲ್ಲಿ ಆಚರಣೆಗೆ ಜಾರಿಗೆ ತಂದಿದೆ. ಪ್ರತಿ ವರ್ಷವೂ ಸರ್ಕಾರವೇ ಆಚರಣೆ ಕಿತ್ತೂರು ಉತ್ಸವದ ಮೂಲಕ ಆಚರಣೆ ಮಾಡುತ್ತಲೆ ಬಂದಿದೆ...ದೇಶದ್ರೋಹಿಗಳಾದ ಕನ್ನೂರು ವೀರಪ್ಪ, ಸರದಾರ ಮಲ್ಲಪ್ಪ ಅವರೂ ಬಲಿಯಾಗಿ ಹೊಗಿದ್ದರು,  ಚೆನ್ನಮ್ಮನಿಗೆ ಹಾಗೂ ಬ್ರಿಟಿಷರಿಗೆ ಮತ್ತೆ ಪತ್ರ ವ್ಯವಹಾರ ನಡೆಯುತ್ತದೆ. 1824 ಡಿಸೆಂಬರ್ 2 ರಂದು ಸ್ಟೀವನ್ಸನ್ ಹಾಗು ಈಲಿಯಟ್ ಇವರ ಬಿಡುಗಡೆಯಾಗುತ್ತದೆ. ಆದರೆ ಮಾತಿಗೆ ತಪ್ಪಿದ ಬ್ರಿಟಿಷರು ಮತ್ತೆ ಡಿಸೆಂಬರ್ 2 ರಂದು ಅಪಾರ ಸೈನ್ಯದೊಂದಿಗೆ ಕೋಟೆಗೆ ಮುತ್ತಿಗೆ ಹಾಕಿ ಕೋಟೆಯನ್ನು ಒಡೆಯಲು ಪ್ರಾರಂಭಿಸುತ್ತಾರೆ. ಅಲ್ಲೆ ನೋಡಿ ಕೆಂಪು ಪಿರಂಗಿಗಳು ಮತ್ತೆ ಎಡವಟ್ಟು ಮಾಡಿಕ್ಕೊಂಡಿದ್ದು,


ಡಿಸೆಂಬರ್  4 ರಂದು ಸರದಾರ ಗುರುಸಿದ್ದಪ್ಪ ಸೆರೆಯಾಗುತ್ತಾನೆ, ಡಿಸೆಂಬರ್ 5 ರಂದು ಚೆನ್ನಮ್ಮ ತನ್ನ ಸೊಸೆಯರಾದ ವೀರಮ್ಮ ಮತ್ತು ಜಾನಕಿಬಾಯಿಯರ ಜೊತೆಗೆ ಕೈದಿಯಾಗುತ್ತಾಳೆ. ಡಿಸೆಂಬರ್12 ರಂದು ಚೆನ್ನಮ್ಮ ಹಾಗು ವೀರಮ್ಮರನ್ನು ಬೈಲಹೊಂಗಲಕ್ಕೆ ಒಯ್ಯಲಾಗುತ್ತದೆ. ಅಲ್ಲಿ 4 ವರ್ಷಗಳವರೆಗೆ ಸೆರೆಯಾಳಾಗಿ ಉಳಿದ ಚೆನ್ನಮ್ಮ 1829 ಫೆಬ್ರುವರಿ 2 ರಂದು ನಿಧನ ಹೊಂದುತ್ತಾಳೆ ತಾಯಿ ಚನ್ನಮ್ಮಾಜಿ...ಮುಂದೆ ಮೇ 20 ರಂದು ಜಾನಕಿಬಾಯಿ ನಿಧನಳಾಗುತ್ತಾಳೆ. ಆದರೆ ದೇಶ ನಿಷ್ಠರ ಹೋರಾಟ ನಿಂತಿರುವುದಿಲ್ಲ. ಕಾಳಗದಲ್ಲಿ ಸೆರೆ ಸಿಕ್ಕು ಆ ಮೇಲೆ ಬಿಡುಗಡೆಯಾದ ಸಂಗೊಳ್ಳಿ ರಾಯಣ್ಣ 1829 ರಲ್ಲಿ ಹೋರಾಟ ಮುಂದುವರೆಸುತ್ತಾನೆ. ಇವನ ಹೋರಾಟಕ್ಕೆ ನೆರವು ನೀಡುತ್ತಿರುವ ಸಂಶಯದ ಮೇಲೆ ವೀರಮ್ಮನನ್ನು ಬ್ರಿಟಿಷರು ಮೊದಲು ಕುಸುಗಲ್ಲಿಗೆ, ಆ ಬಳಿಕ ಬೇರೊಂದು ಸ್ಥಳಕ್ಕೆ ಒಯ್ಯುತ್ತಾರೆ.


ಇತ್ತ ರಾಯಣ್ಣನ ಹೋರಾಟ ಮುಂದುವರೆದಿರುತ್ತದೆ.ವಿಶ್ವಾಸದ್ರೋಹಿಗಳು ಇವನ ಸಂಗಡಿಗರಂತೆ ನಟಿಸುತ್ತ 1830 ಫೆಬ್ರುವರಿಯಲ್ಲಿ ಇವನನ್ನು ಬ್ರಿಟಿಷರಿಗೆ ಹಿಡಿದು ಕೊಡುತ್ತಾರೆ. ಕಂಪನಿ ಸರಕಾರ ಈ ಕಾರ್ಯಕ್ಕಾಗಿ ಲಿಂಗನಗೌಡ ಮತ್ತು ವೆಂಕನಗೌಡರಿಗೆ 300 ರೂಪಾಯಿ ಬಹುಮಾನ ಕೊಡುತ್ತದೆ. ಮೇ 1830 ರಲ್ಲಿ ದತ್ತುಪುತ್ರ ಶಿವಲಿಂಗಪ್ಪ ಹಾಗು ಇತರ 400 ಜನರು ಬ್ರಿಟಿಷರಿಗೆ ಸ್ವಯಂ ಸೆರೆಯಾಗುತ್ತಾರೆ. ಜುಲೈ 1830 ರಂದು ವೀರಮ್ಮ ಸೆರೆಮನೆಯಲ್ಲಿ ಮರಣಹೊಂದುತ್ತಾಳೆ. ವಿಷ ತೆಗೆದುಕೊಂಡು ಮರಣ ಹೊಂದಿದಳೆಂದೂ, ಇಂಗ್ಲಿಷರೆ ವಿಷ ಹಾಕಿ ಕೊಂದರೆಂದೂ ಪ್ರತೀತಿವಾಗಿ ಉಳಿದಿದೆ,. 1831 ಜನೆವರಿ 26 ರಂದು ಸಂಗೊಳ್ಳಿ ರಾಯಣ್ಣನನ್ನು ನಂದಗಡದಲ್ಲಿ ಗಲ್ಲಿಗೇರಿಸಲಾಗುತ್ತದೆ......


News 10 Karnataka                                                            WATCH  FULL VIDEO 


Do Not Copy This Story Without News 10 Karnataka Permission(Copyright © 2020 News 10 Karnataka All Right Reseved)


Contact:
newstenkarnataka@gmail.com

or
*Follow Us On Website*
https://www.news10karnataka.com/

*Join On Whatsapp Group-02*
https://chat.whatsapp.com/GlSnqAAMtNW8jFoGm3ul2y


ಕಿತ್ತೂರು ಕೋಟೆಯ ಮೇಲೆ ಬ್ರಿಟಿಷರ ಆಕ್ರಮಣ ಹೇಗಿತ್ತು, ಅದಕ್ಕೆ ಚನ್ನಮ್ಮಾಜಿ ಮಾಡಿದ ಪ್ಲಾನ್ ಎನಿತ್ತು ಗೊತ್ತಾ...? ಕಿತ್ತೂರು ಕೋಟೆಯ ಮೇಲೆ ಬ್ರಿಟಿಷರ ಆಕ್ರಮಣ ಹೇಗಿತ್ತು, ಅದಕ್ಕೆ ಚನ್ನಮ್ಮಾಜಿ ಮಾಡಿದ ಪ್ಲಾನ್ ಎನಿತ್ತು ಗೊತ್ತಾ...? Reviewed by News10Karnataka Admin on October 27, 2020 Rating: 5

No comments:

Powered by Blogger.