.

ಸಿಡಿಲಿಗೆ ರೈತ ಮಹಿಳೆಯರು ಬಲಿ, ಇಷ್ಟೆಲ್ಲ ಆದ್ರೂ ಸವದತ್ತಿ ಶಾಸಕ ಹೋಗಿ ಮಾಡಿದ್ದೆನೂ ಗೊತ್ತಾ..?

ಮಳೆಯ ಅಬ್ಬರಕ್ಕೆ ಒಂದಡೆ ಮನೆಮಠಗಳನ್ನ ಕಳೆದುಕ್ಕೊಂಡರೆ ಇನ್ನೊಂದಡೆ ಸಿಡಿಲಿನ ಅಬ್ಬರಕ್ಕೆ ಇಬ್ಬರು ರೈತ ಮಹಿಳೆಯರು ಪ್ರಾಣವನ್ನ ಕಳೆದುಕ್ಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಚಿಕ್ಕ ಉಳ್ಳಿಗೇರಿ ಗ್ರಾಮದಲ್ಲಿ ಇಂದು ಸಂಜೆ ನಡೆದಿದೆ . ಇನ್ನೂ ಓರ್ವಳ ಗೆ ಗಂಭೀರ ಗಾಯವಾಗಿದ್ದು, ಸಮೀಪದ ಇನಾಂಹೊಂಗಲ ಗ್ರಾಮದ ಆಸ್ಪತ್ರೆಯಲ್ಲಿ  ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. 
ಹೊಲದಲ್ಲಿ ಕೆಲಸ ಮಾಡುವ ವೇಳೆ ಸಿಡಿಲು ಬಡಿದಿದ್ದು,ತಕ್ಷಣ ಆಸ್ಪತ್ರೆಗೆ ದಾಖಲಿಸುವ ಮಾರ್ಗಮಧ್ಯದಲ್ಲಿ ಇಬ್ಬರು ಮಹಿಳೆಯರು ಸಾವನ್ನಪ್ರಿದ್ರೆ ಓರ್ವಳಿಗೆ ಗಂಭೀರ ಗಾಯಗಳಾಗಿವೆ. ಮೃತರರಾದ ಭಾಗವ್ವ ಕಡಕೋಳ, ಯಲ್ಲವ್ವಾ  ಇಂಚಲ, ಗುರುತಿಸಲಾಗಿದ್ದು,ಗಾಯಾಳು ಆದ ರೇಣವ್ವಾ  ಮೂಗಬಸವ ಎಂದು ಗುರುತಿಸಲಾಗಿದೆ..
 ಸ್ಥಳಕ್ಕೆ  ಸವದತ್ತಿ ಶಾಸಕ ಆನಂದ ಮಾಮನಿ ಹಾಗೂ ಸಿಪಿಐ,ಪಿಎಸ್ಐ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ...ಈ ಕುರಿತು ಸವದತ್ತಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ಕೂಡಾ  ದಾಖಲಾಗಿದೆ...ಸಿಡಿಲಿಗೆ ರೈತ ಮಹಿಳೆಯರು ಬಲಿ, ಇಷ್ಟೆಲ್ಲ ಆದ್ರೂ ಸವದತ್ತಿ ಶಾಸಕ ಹೋಗಿ ಮಾಡಿದ್ದೆನೂ ಗೊತ್ತಾ..? ಸಿಡಿಲಿಗೆ ರೈತ ಮಹಿಳೆಯರು ಬಲಿ, ಇಷ್ಟೆಲ್ಲ ಆದ್ರೂ ಸವದತ್ತಿ ಶಾಸಕ ಹೋಗಿ ಮಾಡಿದ್ದೆನೂ ಗೊತ್ತಾ..? Reviewed by News10Karnataka Admin on October 20, 2020 Rating: 5

No comments:

Powered by Blogger.