.

ಸಿಎಂ ಆಗ್ತಾರಂತೆ ಬಸನಗೌಡ ಪಾಟೀಲ ಯತ್ನಾಳ, ಯಡತಾಕಾಕ ಹಚ್ತಾರಂತೆ ಯತ್ನಾಳ....ಸಿಎಂ ಯಡಿಯೂರಪ್ಪ ಇನ್ನ ಬಾಳ್ ಇರಲ್ಲಂತ್ರಿ ಸಿಎಂ ಖುರ್ಚಿ ಮ್ಯಾಲ....

ಉತ್ತರ ಕರ್ನಾಟಕದವರೇ ಮುಂದಿನ ಸಿಎಂ ಆಗೋ ಇಂಗಿತವನ್ನ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಹೊರಹಾಕಿದ್ದಾರೆ , ಸಿಎಂ ಯಡಿಯೂರಪ್ಪ ವಿರುದ್ಧ ಮತ್ತೇ ಯತ್ನಾಳ ವಾಗ್ದಾಳಿ ನಡೆಸಿದ್ದಾರೆ ವಿಜಯಪುರದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಿಡಿಕಾರಿದ್ದಾರೆ...ಸ್ಥಳಿಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕೇಂದ್ರ ಸರ್ಕಾರಕ್ಕೆ ಸಿಎಂ ಯಡಿಯೂರಪ್ಪ ಬಗ್ಗೆ ಸಾಕಾಗಿ ಹೋಗಿದ್ದಾರೆ ಯಡಿಯೂರಪ್ಪ ಇನ್ನು  ಸಿಎಂ ಆಗಿ ಬಹಳ ದಿನ ಇರೋದಿಲ್ಲ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. ಉತ್ತರ ಕರ್ನಾಟಕದವರೇ 100 ಶಾಸಕರನ್ನು ಗೆಲ್ಲಿಸಿ ವಿಧಾನ ಸೌಧಕ್ಕೆ ಜನತೆ ಕಳುಹಿಸಿ ಕೊಡುತ್ತಾರೆ, 


ಆದರೆ ಉಳಿದ ಭಾಗದಲ್ಲಿ ಕೇವಲ 15 ಶಾಸಕರು ಬಿಜೆಪಿಯಿಂದ ಗೆದ್ದು ಅವರಲ್ಲೆ ಒಬ್ಬರು ಸಿಎಂ ಆಗ್ತಾರೆ..ಅಂದ್ರೆ ಹೆಂಗೆ, ಮುಂದಿನ ಬಾರೀ ಉತ್ತರ ಕರ್ನಾಟಕದವೇ ಸಿಎಂ ಆಗೋದು ಪಕ್ಕಾ ಜೊತೆಗೆ ಉತ್ತರ ಕರ್ನಾಟಕದವರೇ ಸಿಎಂ ಮಾಡುವ ಭರವಸೆಯನ್ನು ಪ್ರಧಾನಿ ಮೋದಿ ಭರವಸೆ ನೀಡಿದ್ದಾರೆ ಈಗಾಗಲೇ ನನಗೆ ಹಾಗೂ ಸಿಎಂ ಜಗಳ ಶುರುವಾಗಿದೆ ನನ್ನ ಮತಕ್ಷೇತ್ರದ 125 ಕೋಟಿ ಅನುಮಾನ ಕಡಿತದಲ್ಲಿ ಒಂದು ಬಾರಿ ಸಿಎಂ ವಿರುದ್ಧ ಜಗಳ ಆಗಿದೆ..ಹೀಗಾಗಿ ಮೋದಿಯವರಿಗೆ ಗೊತ್ತಾಗಿದೆ ಅಬ್ ಕೀ ಬಾರ್ ಉತ್ತರ ಕರ್ನಾಟಕ ಕಾ ಸಿಎಂ" ಮಾಡಬೇಕು ಅಂತಾ ಮುಂದೆ ಒಂದು ದಿನ ಬೆಂಗಳೂರಿನವರು ವಿಜಯಪುರಕ್ಕೆ ಯಡತಾಕೋ ಹಾಗೇ ಮಾಡ್ತೀನಿ ನೋಡಿ ಎಂದು ಆಕ್ರೊಶವನ್ನ ಹೊರಹಾಕಿದ್ದಾರೆ. ಈಗ ನಾವು ಬೆಂಗಳೂರಿನ ಅವರ ಮನೆಗೆ ಹೋಗಿ ನಿಲ್ತಿವಲ್ಲ, ಹಾಗೇ ಮುಂದಿನ ದಿನಗಳಲ್ಲಿ ಅವರು ಬಿಜಾಪುರಕ್ಕೆ ಬಂದು ನಿಲ್ಲೋ ಹಾಗೆ ಮಾಡುವೆ ಎಂದು ಯತ್ನಾಳ್ ಸಿಎಂ ಯಡಿಯೂರಪ್ಪ ವಿರುದ್ದ ಕಿಡಿಕಾರಿದ್ದಾರೆ.
ಸಿಎಂ ಆಗ್ತಾರಂತೆ ಬಸನಗೌಡ ಪಾಟೀಲ ಯತ್ನಾಳ, ಯಡತಾಕಾಕ ಹಚ್ತಾರಂತೆ ಯತ್ನಾಳ....ಸಿಎಂ ಯಡಿಯೂರಪ್ಪ ಇನ್ನ ಬಾಳ್ ಇರಲ್ಲಂತ್ರಿ ಸಿಎಂ ಖುರ್ಚಿ ಮ್ಯಾಲ.... ಸಿಎಂ ಆಗ್ತಾರಂತೆ ಬಸನಗೌಡ ಪಾಟೀಲ ಯತ್ನಾಳ, ಯಡತಾಕಾಕ ಹಚ್ತಾರಂತೆ ಯತ್ನಾಳ....ಸಿಎಂ ಯಡಿಯೂರಪ್ಪ ಇನ್ನ ಬಾಳ್ ಇರಲ್ಲಂತ್ರಿ ಸಿಎಂ ಖುರ್ಚಿ ಮ್ಯಾಲ.... Reviewed by News10Karnataka Admin on October 20, 2020 Rating: 5

No comments:

Powered by Blogger.