.

ಬೀಮಾ ನದಿಯಲ್ಲಿ ತೆಪ್ಪದ ಮುಖಾಂತರ ಹೋಗಿ ಬೀಮಕ್ಕ‌ ಮಾಡಿದ್ದೆನೂ..ಮಾಡಿದ ಕೆಲಸ ನೋಡಿದ್ರೆ ನೀವು ಬೆಚ್ಚಿ ಬಿಳ್ತಿರಾ...?

ಭೀಕರ ಪ್ರವಾಹದಲ್ಲಿ ವಿಜಯಪುರ ಜಿಲ್ಲೆ ಅಕ್ಷರಶಹ ನಡುಗಿ ಹೋಗಿದೆ..ಆದರೂ ನಮ್ಮ‌ಗ್ರಾಮೀಣ ಮಟ್ಟದಲ್ಲಿ ಹಬ್ಬಗಳನ್ನ ಯಾವುದೆ ಕಾರಣಕ್ಕೂ ಬಿಡಲ್ಲ ಅನ್ನೊಧಕ್ಕೆ ವಿಜಯಪುರ ಜಿಲ್ಲೆಯ ಅಲ್ಮೆಲ್ ತಾಲೂಕಿನ ದೇವಣಗಾಂವ ಗ್ರಾಮದಲ್ಲಿ ಮಹಿಳೆಯೊಬ್ಬಳು ಸಾಕ್ಷಿಯಾಗಿದ್ದಾರೆ,  ಮಹಾನವಿಮಿ ಹಬ್ಬದಲ್ಲಿ ಗಟ್ಟ ಹಾಕಿದ ಹಿನ್ನೆಲೆಯಲ್ಲಿ ಮಹಿಳೆಯನ್ನು ಕೃತಕ‌  ಬೋಟನಲ್ಲಿ ಕರೆದುಕ್ಕೊಂಡು‌ ಹೋಗಿ ದೇವರಿಗೆ ದೀಪ ಹಚ್ಚಿ ಬರುತ್ತಿದ್ದಾಳೆ,

ಮುತ್ತಕ್ಕ ಗಂಗನಹಳ್ಳಿ, ಎಂಬುವಳು ತನ್ನ ಪ್ರಾಣವನ್ನೆ ಲೆಕ್ಕಿಸದೆ ಎರಡು ದಿನಗಳ ಹಿಂದೆ ಮನೆಯಲ್ಲಿ ಮಹಾನವಮಿಯ ಪ್ರಯುಕ್ತ ಘಟದ ದೀಪ ಹಾಕಿಟ್ಟಿದ್ದರು.ಮರು ದಿನವೇ ಭೀಮಾನದಿ ಪ್ರವಾಹ ಮುತ್ತಕ್ಕರ ಮನೆ ಜಲಾವೃತವಾಗಿತ್ತು ಆದರೆ  ಮನೆ ಜಲಾವೃತವಾಗಿದ್ದರೂ ನಿತ್ಯ ಕೃತಕ ಬೋಟಿನಲ್ಲಿ ಮುಳುಗಿದ್ದ ಮನೆಗೆ ತೆರಳಿ ದೀಪಕ್ಕೆ ಎಣ್ಣೆ ಹಾಕುತ್ತಿದ್ದಾಳೆ ಮುತ್ತಕ್ಕ... ಘಟ್ಟ ಸ್ಥಾಪನೆ ಮಾಡಿದ ನಂತರ ಸತತ ಒಂಭತ್ತು ದಿನಗಳ ಕಾಲ ದೀಪ ಆರದಂತೆ ನೋಡಿಕೊಳ್ಳುವ ಈ ಪದ್ದತಿ ಹಿರಿಯರಿಂದಲೂ ಬಂದಿದ್ದು, ನಾವೂ ಅದನ್ನು ಉಳಿಸಿಕೊಳ್ಳುತ್ತೇವೆಂದ ಮುತ್ತಕ್ಕ, ತನ್ನ ಪ್ರಾಣವನ್ನ‌ ಲೆಕ್ಕಿಸದೆ ಪ್ರವಾಹದ ನೀರಿನಲ್ಲಿ ತೆರಳಿ ದೀಪ ಹಚ್ಚಿ ಬಂದಿದ್ದಾಳೆ...
ದೇವರ ಮೇಲೆ ಭಾರ ಹಾಕಿ ನಿತ್ಯ ಪ್ರವಾಹದ ನೀರಲ್ಲಿ ಹೋಗಿ ಬರುತ್ತಿರುವ ಮುತ್ತಕ್ಕ,ಸಹೋದರಿ ಮುತ್ತಕ್ಕಳಿಗೆ ಸಹಾಯ ಮಾಡುತ್ತಿರುವ ಸಿದ್ದನಿಂಗ ಹಾಗೂ ರಾಜಶೇಖರ ನಿತ್ಯ ಅಕ್ಕ ಮುತ್ತಕ್ಕನನ್ನು ಕೃತನ ಬೋಟನಲ್ಲಿ ಪ್ರವಾಹದ ನೀರಲ್ಲಿ ಕರೆದುಕೊಂಡು ಹೋಗಿ ಬರುತ್ತಿದ್ದಾರೆ‌‌.ನಿಜಕ್ಕೂ ತಾವೂ ಬಿದಿಗೆ ಬಂದ್ರೂ ಚಿಂತೆ ಇಲ್ಲ, ದೇವರ ಹಬ್ಬಗಳನ್ನ, ಹಿರಿಯರ ಸಂಪ್ರದಾಯಗಳನ್ನ ನಮ್ಮ‌ ಜನ ಮಾತ್ರ ಬಿಡಲ್ಲ ನೋಡ್ರಿ...
ಬೀಮಾ ನದಿಯಲ್ಲಿ ತೆಪ್ಪದ ಮುಖಾಂತರ ಹೋಗಿ ಬೀಮಕ್ಕ‌ ಮಾಡಿದ್ದೆನೂ..ಮಾಡಿದ ಕೆಲಸ ನೋಡಿದ್ರೆ ನೀವು ಬೆಚ್ಚಿ ಬಿಳ್ತಿರಾ...? ಬೀಮಾ ನದಿಯಲ್ಲಿ ತೆಪ್ಪದ ಮುಖಾಂತರ ಹೋಗಿ ಬೀಮಕ್ಕ‌ ಮಾಡಿದ್ದೆನೂ..ಮಾಡಿದ ಕೆಲಸ ನೋಡಿದ್ರೆ ನೀವು ಬೆಚ್ಚಿ ಬಿಳ್ತಿರಾ...? Reviewed by News10Karnataka Admin on October 19, 2020 Rating: 5

No comments:

Powered by Blogger.