ಮಹಿಳಾ ಕಾಂಗ್ರೆಸ್ ಪ್ರತಿಭಟನೆಮಾಡದ ತಪ್ಪಿಗೆ ಶಿಕ್ಷೆ ಏಕೆ ಲಕ್ಷ್ಮಿ ಹೆಬ್ಬಾಳಕರ್ ಪ್ರಶ್ನೆ...


ಬೆಂಗಳೂರು : ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಕುಸುಮ ಹೆಚ್ ರವರು ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿದ್ದಾರೆಂದು ಪೋಲಿಸರು ಎಫ್ ಐ ಆರ್ ಹಾಕಿರುವುದನ್ನು ಖಂಡಿಸಿ  ರಾಜರಾಜೇಶ್ವರಿ ನಗರ  ಠಾಣೆಯ ಎದುರು ಕರ್ನಾಟಕ ಮಹಿಳಾ ಕಾಂಗ್ರೆಸ್  ಬೃಹತ್ ಪ್ರತಿಭಟನೆ ನಡೆಸಿತು.

ಮಾಡದ ತಪ್ಪಿಗೆ ಕುಸುಮಾವರ ಮೇಲೆ ಪೋಲಿಸ್ ಎಫ್ ಐ ಆರ್ (FIR) ಹಾಕಿರುವುದು ಖಂಡನೀಯ. ಕೂಡಲೇ ಎಫ್ ಐ ಆರ್ ನ್ನು ಹಿಂಪಡೆಯಬೇಕು ಎಂದು ಕಾಂಗ್ರೆಸ್ ವಕ್ತಾರರಾಗಿರುವ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಆಗ್ರಹಿಸಿದರು.

ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ, ಸೌಮ್ಯ ರೆಡ್ಡಿ, ಉಮಾಶ್ರೀ, ಮಹಿಳಾ ಕಾಂಗ್ರೆಸ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಮಹಿಳಾ ಕಾಂಗ್ರೆಸ್ ಪ್ರತಿಭಟನೆಮಾಡದ ತಪ್ಪಿಗೆ ಶಿಕ್ಷೆ ಏಕೆ ಲಕ್ಷ್ಮಿ ಹೆಬ್ಬಾಳಕರ್ ಪ್ರಶ್ನೆ... ಮಹಿಳಾ ಕಾಂಗ್ರೆಸ್ ಪ್ರತಿಭಟನೆಮಾಡದ ತಪ್ಪಿಗೆ ಶಿಕ್ಷೆ ಏಕೆ ಲಕ್ಷ್ಮಿ ಹೆಬ್ಬಾಳಕರ್  ಪ್ರಶ್ನೆ... Reviewed by News10Karnataka Admin on October 16, 2020 Rating: 5

No comments:

Powered by Blogger.