.

ಧಾರವಾಡ ಜಿಪಂ ಸಿಇಓ ಆಗಿ ಡಾ.ಸುಶೀಲಾ ಬಿ. ಅಧಿಕಾರ ಸ್ವೀಕಾರ...


ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಡಾ.ಸುಶೀಲಾ ಬಿ. ನಿನ್ನೆ ಶುಕ್ರವಾರ ಸಂಜೆ ಅಧಿಕಾರಸ್ವೀಕರಿಸಿದ್ದಾರೆ. ಇಲ್ಲಿಂದ ವರ್ಗಾವಣೆಗೊಂಡಿರುವ ಡಾ.ಬಿ.ಸಿ.ಸತೀಶ ಅವರು ಅಧಿಕಾರ ಹಸ್ತಾಂತರಿಸಿದ್ದಾರೆ ಹೈದರಾಬಾದಿನ ಗಾಂಧೀ ಮೆಡಿಕಲ್ ಕಾಲೇಜಿನಿಂದ ವೈದ್ಯಕೀಯ ಪದವಿ ಪಡೆದಿರುವ ಡಾ.ಸುಶೀಲಾ ಅವರು, ಕೆಲಕಾಲ ವೈದ್ಯಕೀಯ ವೃತ್ತಿ ನಡೆಸಿ ನಂತರ 2013 ರ ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಭಾರತೀಯ ರೇಲ್ವೆ ಸಿಬ್ಬಂದಿ ಸೇವೆ ( IRPS) ಗೆ ಅರ್ಹತೆ ಪಡೆದರು. ಪುನಃ 2015 ರ ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಭಾರತೀಯ ಆಡಳಿತ ಸೇವೆ ( ಐಎಎಸ್) ಕರ್ನಾಟಕ ಕೇಡರ್ ಗೆ ಆಯ್ಕೆಯಾದರು.

ರಾಯಚೂರಿನಲ್ಲಿ ಜಿಲ್ಲಾ ತರಬೇತಿ, ಸೇಡಂ ಹಾಗೂ ಕಲಬುರ್ಗಿಯಲ್ಲಿ ಉಪವಿಭಾಗಾಧಿಕಾರಿಯಾಗಿ , ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಉಪಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ಇದೀಗ ಬಡ್ತಿಯೊಂದಿಗೆ ಧಾರವಾಡ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯ ನಿರ್ವಾಹಕ ಹುದ್ದೆ ಸ್ವೀಕರಿಸಿದ್ದಾರೆ.
ಧಾರವಾಡ ಜಿಪಂ ಸಿಇಓ ಆಗಿ ಡಾ.ಸುಶೀಲಾ ಬಿ. ಅಧಿಕಾರ ಸ್ವೀಕಾರ... ಧಾರವಾಡ ಜಿಪಂ ಸಿಇಓ ಆಗಿ ಡಾ.ಸುಶೀಲಾ ಬಿ. ಅಧಿಕಾರ ಸ್ವೀಕಾರ... Reviewed by News10Karnataka Admin on October 09, 2020 Rating: 5

No comments:

Powered by Blogger.