ಈ ದೇಶ ಬಿಜೆಪಿಯ ಆಸ್ತಿ ಅಲ್ಲ..ಎಂದು ಸಿದ್ದರಾಮಯ್ಯ ಕಿಡಿ...

ಯೋಗಿ ಆದಿತ್ಯನಾಥ ಸರ್ಕಾರ ಕಾನೂನು ಸುವ್ಯವಸ್ಥೆ ಹಾಳು ಮಾಡಿದ್ದಾರೆ, ಎಂದು‌ ಮಾಜಿ ಸಿಎಂ ಸಿದ್ದರಾಮಯ್ಯ ಇಂದು ಬೆಳಗಾವಿಯಲ್ಲಿ ಕಿಡಿಕಾರಿದ್ದಾರೆ. ಜಂಗಲ್ ರಾಜ್ಯದಲ್ಲಿ ಕಾನೂನು ಇಲ್ಲ, ಪೊಲೀಸರು ಸರ್ವಾಧಿಕಾರಿ ರೀತಿಯಲ್ಲಿ ವರ್ತನೆ ಮಾಡ್ತಿದ್ದಾರೆ ಸಂತ್ರಸ್ತೆ ಹೆಣ್ಣು ಮಗಳ ಮನೆಗೆ ಹೋಗಿ ಸಾಂತ್ವನ ಹೇಳಲು ಹೋಗುತ್ತಿದ್ದರು, 


ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ, ಆದರೆ‌ ಪೋಲಿಸರು ಹೋಗಲು ರಾಹುಲ್ ಗಾಂಧಿ ಅವರನ್ನ  ಪೊಲೀಸರು ಬಿಡಲಿಲ್ಲ , ಈ ದೇಶ ಬಿಜೆಪಿ ಆಸ್ತಿ ಅಲ್ಲ, ಯೋಗಿ ಆದಿತ್ಯನಾತನ ಆಸ್ತಿಅಲ್ಲ, ಎಂದು ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಯೋಗಿಯ ವಿರುದ್ಧ ಕಿಡಿ ಕಾರಿದ್ದಾರೆ...

ಮುಖ್ಯಮಂತ್ರಿ ಸೂಚನೆಯಂತೆ ಪೊಲೀಸರು ರಾಹುಲ್ ಗಾಂಧಿ ತಡೆ ಹಿಡಿದಿದ್ದಾರೆ ಯೋಗಿ ಆದಿತ್ಯನಾತ್ ಸಿಎಂ ಆಗಿ ಮುಂದುವರೆಯಬಾರದು ಕೂಡಲೇ ರಾಜೀನಾಮೆ ನೀಡಬೇಕು, ಯೋಗಿನೋ ಆತ ರೋಗಿನೋ ಗೊತ್ತಿಲ್ಲ, ಎಂದು ಸಿದ್ರಾಮಯ್ಯ ಲೇವಡಿ ಮಾಡಿದ್ದಾರೆ..
ಈ ದೇಶ ಬಿಜೆಪಿಯ ಆಸ್ತಿ ಅಲ್ಲ..ಎಂದು ಸಿದ್ದರಾಮಯ್ಯ ಕಿಡಿ... ಈ ದೇಶ ಬಿಜೆಪಿಯ ಆಸ್ತಿ ಅಲ್ಲ..ಎಂದು ಸಿದ್ದರಾಮಯ್ಯ ಕಿಡಿ... Reviewed by News10Karnataka Admin on October 02, 2020 Rating: 5

No comments:

Powered by Blogger.