.

ಕ್ಷೆತ್ರದ ಜನರಿಗೆ ಶಾಸಕಿ ಲಕ್ಷ್ಮಿ‌ಹೆಬ್ಬಾಳಕರ ಮಾಡಿದ್ದೆನೂ ಗೊತ್ತಾ...?

50 ಲಕ್ಷ ರೂ. ವೆಚ್ಚದಲ್ಲಿ ದೇವಸ್ಥಾನ ಜೀರ್ಣೋದ್ಧಾರ, ಯಾತ್ರಿ ನಿವಾಸ..ನಿರ್ಮಾಣ,

ಬಡಾಲ ಅಂಕಲಗಿಯಲ್ಲಿ ಸಂಭ್ರಮವೋ ಸಂಭ್ರಮ

ಬೆಳಗಾವಿ : ಬಡಾಲ ಅಂಕಲಗಿಯಲ್ಲಿ 50 ಲಕ್ಷ ರೂ ವೆಚ್ಚದಲ್ಲಿ ಗ್ರಾಮ ದೇವಿಯ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಯಾತ್ರಿ ನಿವಾಸ ನಿರ್ಮಾಣದ ಕಾಮಗಾರಿಗಳಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಚಾಲನೆ ನೀಡಿದರು..


ಪ್ರವಾಸೋದ್ಯಮ ಇಲಾಖೆಯ ಅನುದಾನದಲ್ಲಿ ಭೂಸೇನಾ ನಿಗಮ ಕಾರ್ಯಗತಗೊಳಿಸಲಿರುವ ಒಟ್ಟೂ 50 ಲಕ್ಷ ರೂ. ವೆಚ್ಚದಲ್ಲಿ ನಡೆಯಲಿರುವ ಕಾಮಗಾರಿಗಳಿಗೆ ಗ್ರಾಮಸ್ಥರ ಸಮ್ಮುಖದಲ್ಲಿ ಅಧಿಕೃತವಾಗಿ ಚಾಲನೆಯನ್ನು ನೀಡಲಾಗಿದೆ ಬೃಹತ್ ಯೋಜನೆಯನ್ನು ಗ್ರಾಮಕ್ಕೆ ಕೊಡುಗೆಯಾಗಿ ನೀಡುತ್ತಿರುವ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರನ್ನು ಗ್ರಾಮಸ್ಥರು ಮೆರವಣಿಗೆಯಲ್ಲಿ ಕರೆದೊಯ್ದರು.. ಊರಲ್ಲೆಲ್ಲ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಜನರು ಡೊಳ್ಳು ಭಾರಿಸುತ್ತ, ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.


ದೇವಸ್ಥಾನಗಳು ನಮ್ಮ ಸಂಸ್ಕ್ರತಿಯ ಪ್ರತೀಕವಾಗಿದ್ದು ಅವುಗಳನ್ನು ಬೆಳೆಸಿ ಉಳಿಸಿಕೊಂಡು ಹೋಗುವ ಕಾಯಕವನ್ನು ನಾವೆಲ್ಲ ಕೂಡಿಕೊಂಡು ಮಾಡಬೇಕಿದೆ ಇಂದಿನ ಯುವ ಪೀಳಿಗೆ  ದೇವಸ್ಥಾನಗಳಿಗೆ ತೆರಳುವುದು ಕಡಿಮೆಯಾಗಿದೆ,  ಒಳ್ಳೆಯ ಸಂಸ್ಕಾರಗಳೊಂದಿಗೆ ಪುರಾಣ, ಪ್ರವಚನ, ಭಗವದ್ಗೀತೆ ಹಾಗೂ ಇತರ ಆಧ್ಯಾತ್ಮದ ಬೀಜಗಳನ್ನು ಬಿತ್ತುವುದರೊಂದಿಗೆ  ಸಮಾಜದಲ್ಲಿ ಸುಖ, ಶಾಂತಿ, ನೆಮ್ಮದಿಯನ್ನು ಕಾಣಲು ಸಾಧ್ಯ. ಇಲ್ಲಿ ನಿರ್ಮಾಣವಾಗುತ್ತಿರುವ ದೇವಾಲಯ ಅಂತಹ ವಾತಾವರಣವನ್ನು ತರಲಿ ಎಂದು ಲಕ್ಷ್ಮಿ ಹೆಬ್ಬಾಳಕರ್ ಆಶಿಸಿದ್ದಾರೆ..

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಸಿ ಸಿ ಪಾಟೀಲ, ಸುರೇಶ ಇಟಗಿ, ಗೌಸ್ ಜಾಲಿಕೊಪ್ಪ, ಶ್ರೀಕಾಂತ ಮದುಭರಮಣ್ಣವರ, ರಾಮನಗೌಡ ಪಾಟೀಲ, ಸಿದ್ದಪ್ಪ ಚಾಪಗಾಂವ, ಪಡೆಪ್ಪ ಅರಳಿಕಟ್ಟಿ, ಅರ್ಜುನ ಅರ್ಜುನವಾಡಿ, ಪ್ರಕಾಶ ಬೆಳಗಾವಿ, ಸೋಮನಗೌಡ ಪಾಟೀಲ, ವಿಠ್ಠಲ ಅರ್ಜುನವಾಡಿ, ರಾಮಪ್ಪ ಕೊಳೆಪ್ಪನವರ, ಶಂಕರ ಚಾಪಗಾಂವ, ರಾಮಪ್ಪ ಶೀಗಿಹಳ್ಳಿ ಮುಂತಾದವರು ಉಪಸ್ಥಿತರಿದ್ದರು.
ಕ್ಷೆತ್ರದ ಜನರಿಗೆ ಶಾಸಕಿ ಲಕ್ಷ್ಮಿ‌ಹೆಬ್ಬಾಳಕರ ಮಾಡಿದ್ದೆನೂ ಗೊತ್ತಾ...? ಕ್ಷೆತ್ರದ ಜನರಿಗೆ ಶಾಸಕಿ ಲಕ್ಷ್ಮಿ‌ಹೆಬ್ಬಾಳಕರ ಮಾಡಿದ್ದೆನೂ ಗೊತ್ತಾ...? Reviewed by News10Karnataka Admin on September 09, 2020 Rating: 5

No comments:

Powered by Blogger.