.

ಗಡಿಭಾಗದಲ್ಲಿ ಗಣಿತೋತ್ಸವ...ಮಾದರಿಯಾದ ಶಾಲೆ...

ಗಡಿಭಾಗದಲ್ಲಿ ಗಣಿತೋತ್ಸವ..

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಓಬಳಾಪುರ ಒಂದು ಚಿಕ್ಕ ಗ್ರಾಮ ಇದು ಆಂಧ್ರದ ಗಡಿ ಗ್ರಾಮವಾಗಿದ್ದು,ಕೃಷಿ, ಸಾಮಾಜಿಕ, ಆರ್ಥಿಕ, ರಾಜಕೀಯ,ಕ್ರೀಡೆ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ತನ್ನದೇ ಆದ ವೈಶಿಷ್ಟ್ಯಗಳನ್ನು ಹೊಂದಿದೆ. ಶೈಕ್ಷಣಿಕ ಸಾಧನೆಗಳಲ್ಲಿ ಇಡೀ ಜಿಲ್ಲೆಗೆ ಹೆಸರಾಗಿರುವ ಈ ಗ್ರಾಮದ ಸರ್ಕಾರಿ ಪ್ರೌಢಶಾಲೆಯು ಮಕ್ಕಳಿಗೆ ಸೂಕ್ತ ಶಿಕ್ಷಣವನ್ನು ಒದಗಿಸುವಲ್ಲಿ ಯಾವತ್ತೂ ಹಿಂದೆ ಬಿದ್ದಿಲ್ಲ ನೊಡ್ರಿ..


ಶಿಕ್ಷಣದ ವಿವಿಧ ಅಧಿಕಾರಿಗಳಿಂದ ಪ್ರಶಂಸೆಗೊಳಗಾಗಿರುವ ಈ ಪ್ರೌಢಶಾಲೆಯ ವೈಶಿಷ್ಟ್ಯವೆಂದರೆ ಸುಸಜ್ಜಿತವಾದ ಗಣಿತ ಮತ್ತು ವಿಜ್ಞಾನ ಪ್ರಯೋಗಾಲಯಗಳು ಶಿಕ್ಷಕರ ಹಾಗೂ ಹಿರಿಯ ವಿದ್ಯಾರ್ಥಿಗಳ ಪರಿಶ್ರಮದಿಂದ ಮೈದಳೆದಿರುವ ಈ ಪ್ರಯೋಗಾಲಯಗಳು ನಿಜಕ್ಕೂ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿವೆ ವಿಜ್ಞಾನ ಪ್ರಯೋಗಾಲಯಗಳು ಶಾಲೆಗಳಲ್ಲಿರುವುದು ಸಹಜವಾದರೂ ಗಣಿತ ಪ್ರಯೋಗಾಲಯಗಳು ಅತಿವಿರಳ.ಅಂತಹದರಲ್ಲಿ ಈ ಪ್ರೌಢಶಾಲೆಯಲ್ಲಿನ ಗಣಿತ ಪ್ರಯೋಗಾಲಯವು ಈಡೀ ಜಿಲ್ಲೆಯಲ್ಲಿಯೇ ಮೊಟ್ಟಮೊದಲಿಗೆ ಉದ್ಘಾಟನೆಗೊಂಡು ಅಧಿಕಾರಿಗಳ ಹುಬ್ಬೇರಿಸುವಂತೆ ಮಾಡಿದೆ..


ಗಡಿನಾಡಿನ ಓಬಳಾಪುರದ ಸರ್ಕಾರಿ ಪ್ರೌಢಶಾಲೆಯ *ಶ್ರೀನಿವಾಸ ರಾಮಾನುಜನ್* ಗಣಿತ ಪ್ರಯೋಗಾಲಯದ ವಿವರ ವನ್ನ ನೋಡೋದಾದ್ರೆ..
1.ಸಮಸ್ಯೆಗಳನ್ನು ಸ್ವಾನುಭವದಿಂದ  ಪ್ರಾಯೋಗಿಕವಾಗಿಮಕ್ಕಳೇ ಬಿಡಿಸಬಹುದಾದ ಮಾದರಿಗಳು,
2.ಗಣಿತದ ಮೂಲ ಪರಿಕಲ್ಪನೆಗಳನ್ನು ಕಲಿಯಬಹುದಾದ ಮಾದರಿಗಳು,
3.ಸೂತ್ರಗಳ ಚಾರ್ಟ್ ಗಳು,
4.ಗಣಿತಶಾಸ್ತ್ರಜ್ಞರ ಪೋಸ್ಟರ್ ಗಳು,
5.ವೃತ್ತಗಳ ಪರಿಕಲ್ಪನೆಗಳು,ತ್ರಿಕೋನ ಗಳ ಪರಿಕಲ್ಪನೆಗಳು,ಘನಾಕೃತಿಗಳ ಪರಿಕಲ್ಪನೆಗಳು,ಬಹುಭುಜಾಕೃತಿಗಳ ಪರಿಕಲ್ಪನೆಗಳು,ತ್ರಿಕೋನಮಿತಿಯ ಪರಿಕಲ್ಪನೆಗಳು,ಶ್ರೇಢಿಗಳ ಪರಿಕಲ್ಪನೆ ಗಳು,ವರ್ಗಸಮೀಕರಣದ ಪರಿಕಲ್ಪನೆಗಳು ಮುಂತಾದವುಗಳಿಗೆ ಸಂಬಂಧಿಸಿದ ಮಾದರಿಗಳಿವೆ..
6.ಸ್ಮಾರ್ಟ್ ಕ್ಲಾಸ್, ಜಿಯೋಬೋರ್ಡ್,ಮ್ಯಾಗ್ನೆಟಿಕ್ ಬೋರ್ಡ್, ಪಿ.ಪಿ.ಟಿ.ಪ್ರೆಸೆಂಟೇಷನ್ ವ್ಯವಸ್ಥೆ ಇದೆ..


ಒಟ್ಟಿನಲ್ಲಿ  ವಿದ್ಯಾರ್ಥಿಗಳು ‌ತಂಬಾ ಖುಷಿಯಿಂದ ಗಣಿತ ಮಾದರಿಗಳನ್ನು ತಾವೇ ಪ್ರದರ್ಶಿಸುತ್ತಾ ಗಣಿತದ ಪರಿಕಲ್ಪನೆಗಳನ್ನು ತಿಳಿಯುವ ಪರಿಯೇ ಪ್ರಶಂಸೆಗೆ ಕಾರಣವಾಗಿದೆ..ಒಟ್ಟಿನಲ್ಲಿ ಗಡಿಬಾಗದಲ್ಲೂ ಶಿಕ್ಷಕರು ಇಂತಹ ಕೆಲಸವನ್ನ ಮಾಡುತ್ತಿರುವುದು ಸ್ವಾಗತಾರ್ಹವಾಗಿದೆ.....
ಗಡಿಭಾಗದಲ್ಲಿ ಗಣಿತೋತ್ಸವ...ಮಾದರಿಯಾದ ಶಾಲೆ... ಗಡಿಭಾಗದಲ್ಲಿ ಗಣಿತೋತ್ಸವ...ಮಾದರಿಯಾದ ಶಾಲೆ... Reviewed by News10Karnataka Admin on September 29, 2020 Rating: 5

No comments:

Powered by Blogger.