.

ಆ ರೈತರು ಕಬ್ಬಿನ ಬಾಕಿ ಬಿಲ್ ಗಾಗಿ ಮಾಡಿದ್ದೆನೂ ಗೊತ್ತಾ...?

ಪಕ್ಷಾತೀತ ಸಂಘಟನೆಗಳು, ರೈತ ಸಂಘ ಹಾಗೂ ಸಾಮೂಹಿಕ ನಾಯಕತ್ವದಲ್ಲಿ ಇಂದು ಕಿತ್ತೂರು ತಾಲೂಕಿನ ಮಲಪ್ರಭಾ ಸಹಕಾರಿ ಸಕ್ಕರೆ ಕಾರಖಾನೆಗೆ  ಸಾವಿರಾರು ರೈತ ಭಾಂದವರಿಂದ ಬೃಹತ್ ಪ್ರತಿಭಟನೆ ಮಾಡಿದ್ದಾರೆ, ನೂರಾರು ರೈತ ಹೋರಾಟಗಾರರು ಮೆರವಣಿಗೆ ಮುಖಾಂತರ ಬಂದು ಕಾರಖಾನೆ ಆಡಳಿತ ಕಛೇರಿಗೆ ಮುತ್ತಿಗೆ ಹಾಕಿ ಸಂಜೆವರೆಗೆ ಗಂಟೆಯವರೆಗೆ ಹೋರಾಟ ಮಾಡಿದ್ದಾರೆ..
ಮಲಪ್ರಭಾ ಸಕ್ಕರೆ ಖಾರ್ಕಾನೆಯವರು ರೈತರಿಗೆ ಸರಿಯಾಗಿ ಕಬ್ಬಿನ ಬಾಕಿ ಬಿಲ್ ನೀಡುತ್ತಿಲ್ಲ ಎಂದು ರೈತರು ಆಕ್ರೋಶವನ್ನ ಹೊರ ಹಾಕಿದ್ದಾರೆ...


ರೈತ ಹೋರಾಟಕ್ಕೆ ಮನಿದ ಬೆಳಗಾವಿ ಮಾನ್ಯ ಜಿಲ್ಲಾಧಿಕಾರಿಗಳು ಸಂಜೆ ಸ್ಥಳಕ್ಕೆ ಆಗಮಿಸಿ ರೈತರ ಮನವಿ ಸ್ವೀಕರಿಸಿ ಮಾತನಾಡಿ ನಾನು ಖಂಡಿತವಾಗಿಯೂ ಒಂದು ತಿಂಗಳ ಒಳಗೆ ಬಾಕಿ ಇರುವ 30 ಕೋಟಿ ರೈತರ ಕಬ್ಬಿಣ ಬಿಲ್ ನ್ನು ರೈತರ ಖಾತೆಗಳಿಗೆ ಜಮಾ ಮಾಡುತ್ತೇನೆ ಅಂತಾ ಭರವಸೆ ಕೊಟ್ಟಿದ್ದಾರೆ..ಬಳಿಕ ಮಾನ್ಯ ಜಿಲ್ಲಾಧಿಕಾರಿಗಳ ಭರವಸೆಯ ಮೇರೆಗೆ ಧರಣಿಯನ್ನು ರೈತರು ಕೈ ಬಿಟ್ಟಿದ್ದಾರೆ..


ಹೋರಾಟದ ದಿವ್ಯ ಸಾನಿದ್ಯವನ್ನು ಕಿತ್ತೂರಿನ ರಾಜ ಗುರು ಸಂಸ್ಥಾನದ ಕಲ್ಮಠದ ಶ್ರೀ ಮಡಿವಾಳ ರಾಜಯೋಂದ್ರ ಪೂಜ್ಯರು ಹಾಗೂ ನಿಚ್ಚಣಕಿ 
ಶ್ರಿ ಮಡಿವಾಳೇಶ್ವರ ಮಠದ ಪೂಜ್ಯರು ವಹಿಸಿ  ಮಾತನಾಡಿ ರೈತ ಹೋರಾಟಕ್ಕೆ ಬೆಂಬಲ ನೀಡಿದ್ದರು.ರೈತ ಮುಖಂಡರಾದ ಶ್ರೀ ಅಶೋಕ ಯಮಕನಮರಡಿ, ಜೈಯಶ್ರೀ ಗುರುವಣ್ಣವರ, ರಾಘವೇಂದ್ರ ನಾಯಿಕ , ಪಾಟೀಲ,ಅಬ್ದುಲ ಮುಲ್ಲಾ, ವಿಜಯಕುಮಾರ ಶಿಂಧೆ,ಸಾವಂತ ಕಿರಬಣ್ಣವರ,ಪುಂಡಲೀಕ ನೀರಲಕಟ್ಟಿ,ಸೋಮಲಿಂಗಪ್ಪ ಹಾರುಗೊಪ್ಪ,ಮಕಬೂಲ ಸನದಿ,ಆನಂದ ಹುಚ್ಚಗೌಡ್ರ, ಅಜ್ಜಪ್ಪ ಹಿರೇಮಠ,ಮಡಿವಾಳಯ್ಯ ಗುರುವೈನವರ,ಸಾವಂತ ಸಂಗ್ರೇಸಕೊಪ್ಪ,
ಅದೃಶ ತುರಮರಿ,ಸಂತೋಷ ಲಕ್ಕುಂಡಿ, ಸಮೀರ ಜಕಾತಿ ಹಾಗೂ ಅನೇಕ ಮುಖಂಡರು ಭಾಗವಹಿಸಿದ್ದರು..

ಸಾಮಾಜಿಕ ಹೋರಾಟಗಾರ  ಶ್ರೀ ಹಬೀಬ ಶಿಲೇದಾರ ಭಾಗವಹಿಸಿ  ಕಾರಖಾನೆಯವರು ರೈತರಿಗೆ ನೀಡಬೇಕಾದ ಮಾಹಿತಿಯನ್ನು ನೀಡಿ ಬಾಕಿ ಬಿಲ್ ನೀಡುವಂತೆ ಒತ್ತಾಯ ಮಾಡಿದ್ದಾರೆ..
ಆ ರೈತರು ಕಬ್ಬಿನ ಬಾಕಿ ಬಿಲ್ ಗಾಗಿ ಮಾಡಿದ್ದೆನೂ ಗೊತ್ತಾ...? ಆ ರೈತರು ಕಬ್ಬಿನ ಬಾಕಿ ಬಿಲ್ ಗಾಗಿ ಮಾಡಿದ್ದೆನೂ ಗೊತ್ತಾ...? Reviewed by News10Karnataka Admin on September 07, 2020 Rating: 5

No comments:

Powered by Blogger.