.

ಅಂತೂ ಇಂತೂ ಬೆಳಗಾವಿ_ಧಾರವಾಡ ರೈಲು ಮಾರ್ಗ ಶಿಘ್ರದಲ್ಲಿ ಆರಂಭ..ಒಂದೆ ಗಂಟೆಯಲ್ಲಿ ಬೆಳಗಾವಿ ಟು ಧಾರವಾಡ...

ಬೆಳಗಾವಿ : ಈ ಭಾಗದ ಜನರ ಬಹು ದಿನಗಳ ಬೇಡಿಕೆಯಾಗಿದ್ದ ಬೆಳಗಾವಿ-ಧಾರವಾಡ ನೂತನ ರೈಲು ಮಾರ್ಗವನ್ನ ಮಂಜೂರು ಮಾಡಿಸುವ ಮೂಲಕ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಬಂಪರ್ ಕೊಡುಗೆ ನೀಡಿದ್ದಾರೆ. ಅಂದಾಜು 1 ಸಾವಿರ ಕೋಟಿ ರೂಪಾಯಿಗಳ ಯೋಜನೆ ಇದಾಗಿದ್ದು ಕೇಂದ್ರ ಸರ್ಕಾರ ಶೇ 50 ರಷ್ಟು ಹಾಗೂ ಶೇ 50 ರಷ್ಟು ಹಣವನ್ನ ರಾಜ್ಯ ಸರ್ಕಾರ ಭರಿಸಲಿದೆ. 
ಬೆಳಗಾವಿ-ದೇಸೂರ-ಕರವಿನಕೊಪ್ಪ-ಹಿರೇಬಾಗೇವಾಡಿ-ಎಂ.ಕೆ.ಹುಬ್ಬಳ್ಳಿ-ಹೂಲಿಕಟ್ಟಿ-ಕಿತ್ತೂರ-ತೇಗೂರ-ಮಮ್ಮಿಗಟ್ಟಿ-ಕ್ಯಾರಕೊಪ್ಪ-ಧಾರವಾಡ ತಲುಪಲಿದೆ. 
ಬೆಳಗಾವಿ-ಧಾರವಾಡ ಮಧ್ಯೆ 9 ರೈಲ್ವೆ ನಿಲ್ದಾಣಗಳು ಬರಲಿದ್ದು ಕೇವಲ 1 ಗಂಟೆ ಅವಧಿಯ ಪ್ರಯಾಣ ಮಾರ್ಗ ಇದಾಗಲಿದೆ. ಇದರಿಂದ ಬೆಳಗಾವಿ-ಧಾರವಾಡ ರೈಲ್ವೆ ಸಾರಿಗೆಯಲ್ಲಿ 3 ಗಂಟೆಗಳ ಪ್ರಯಾಣದ ಅವಧಿ ಉಳಿಯಲಿದ್ದು ಈ ಯೋಜನೆಯಿಂದ ಕೈಗಾರಿಕೆ ಸೇರಿದಂತೆ ವಿವಿಧ ವಲಯಗಳ‌ ಬೆಳವಣಿಗೆಗೆ ಅನುಕೂಲವಾಗಲಿದೆ.
ಅಂತೂ ಇಂತೂ ಬೆಳಗಾವಿ_ಧಾರವಾಡ ರೈಲು ಮಾರ್ಗ ಶಿಘ್ರದಲ್ಲಿ ಆರಂಭ..ಒಂದೆ ಗಂಟೆಯಲ್ಲಿ ಬೆಳಗಾವಿ ಟು ಧಾರವಾಡ... ಅಂತೂ ಇಂತೂ ಬೆಳಗಾವಿ_ಧಾರವಾಡ ರೈಲು ಮಾರ್ಗ ಶಿಘ್ರದಲ್ಲಿ ಆರಂಭ..ಒಂದೆ ಗಂಟೆಯಲ್ಲಿ ಬೆಳಗಾವಿ ಟು ಧಾರವಾಡ... Reviewed by News10Karnataka Admin on September 07, 2020 Rating: 5

No comments:

Powered by Blogger.