.

ಶಿಕ್ಷಕರ ದಿನಾಚರಣೆಗೆ ಈ ಶಿಕ್ಷನಿಗೆ ಕೊಟ್ಟ ಮಾತನ್ನ ಉಳಿಸಿಕೊಳ್ತಾರಾ ಶಿಕ್ಷಣ ಸಚಿವ ಸುರೇಶ ಕುಮಾರ.? ಇಲ್ಲಿದೆ ಪುಲ್ ಡಿಟೇಲ್...

ಧಾರವಾಡ :  ಐದು ವರ್ಷಗಳಿಂದ ಕಣ್ಣೀರಲ್ಲಿ ಕೈ ತೊಳೆಯುತ್ತಿದೆ ಧಾರವಾಡದ ಈ ಬಿಇಓ ಕುಟುಂಬಕ್ಕೆ ಕರೆ ಮಾಡಿದ ಸಚಿವ ಸುರೇಶ ಕುಮಾರ....

ಕಳೆದ ಐದು  ವರ್ಷಗಳಿಂದ ಧಾರವಾಡದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕುಟುಂಬವೊಂದು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದೆ, ಇಷ್ಟು ವರ್ಷದ ಅವಧಿಯಲ್ಲಿ ಬಂದು ಹೋದ ಯಾವುದೇ ಸರ್ಕಾರಗಳು ಈ ಕುಟುಂಬದ ನೆರವಿಗೆ ಬರದೇ ಇರುವುದರಿಂದ ಆ ಕುಟುಂಬದ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದೆ ಯಾರೂ ನಮಗೆ ಆರ್ಥಿಕ ಸಹಾಯ ಮಾಡುವುದು ಬೇಡ. ಅನುಕಂಪದ ಆಧಾರದ ಮೇಲೆ ನೌಕರಿ ಕೊಡಿ ಎಂದು ಬಿಇಓ ಪತ್ನಿ ಅಂಗಲಾಚುತ್ತಿದ್ದಾರೆ.

ಈ ದೃಶ್ಯಗಳಲ್ಲಿ ನೀವು ನೋಡುತ್ತಿರುವ ವ್ಯಕ್ತಿಯ ಹೆಸರು. ಮಹಾದೇವ ಮಾಳಗಿ ಅಂತಾ. 1999ರ ಕೆಇಎಸ್ ಬ್ಯಾಚ್ ನವರು. ಚಿಕ್ಕೋಡಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ವೃತ್ತಿ ಪ್ರಾರಂಭಿಸಿದ್ದರು. ಆದಾದ ಮೇಲೆ ಕೊಪ್ಪಳ, ಕೊಪ್ಪಳದಿಂದ ಧಾರವಾಡ ಜಿಲ್ಲೆಯ ಕಲಘಟಗಿ ಕ್ಷೇತ್ರದ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಕೆಲಸ ಮಾಡಿದ್ದರು. ಕಲಘಟಗಿಯಿಂದ ಮತ್ತೆ ಬೆಳಗಾವಿ ಡಯಟ್ ನ ಹಿರಿಯ ಉಪನ್ಯಾಸಕರಾಗಿ ನೇಮಕಗೊಂಡಿದ್ದ ಮಾಳಗಿ ಅವರಿಗೆ ಕರ್ತವ್ಯದಲ್ಲಿರುವಾಗಲೇ ಬ್ರೇನ್ ಸ್ಟ್ರೋಕ್ ಆಗಿ ಪ್ರಜ್ಞೆ ಕಳೆದುಕೊಂಡಿದ್ದರು. ಸುಮಾರು ಐದಾರು ತಿಂಗಳು ಕೋಮಾದಲ್ಲೇ ಇದ್ದ ಮಾಳಗಿ ಅವರಿಗೆ ಪ್ರಪಂಚದ ಜ್ಞಾನವೇ ಇರಲಿಲ್ಲ. ಈಗಲೂ ಸಹ ಪ್ರಪಂಚದ ಅರಿವೇ ಇಲ್ಲದಂತೆ ಅವರು ಬದುಕು ಸಾಗಿಸುತ್ತಿದ್ದಾರೆ. ಒಬ್ಬ ಸರ್ಕಾರಿ ಅಧಿಕಾರಿಯ ನೆರವಿಗೆ ಬರಬೇಕಿದ್ದ ಸರ್ಕಾರ ಇದುವರೆಗೂ ಅವರಿಗೆ ನಿವೃತ್ತಿ ನೀಡದೇ, ಪಿಂಚಣಿಯನ್ನೂ ನೀಡದೇ ನಿರ್ಲಕ್ಷ ಮಾಡಿದೆ ಸದ್ಯ ಪ್ರಪಂಚದ ಜ್ಞಾನವಿಲ್ಲದೇ ಮನೆಯಲ್ಲಿ ಮಲಗಿದ ಜಾಗದಲ್ಲೇ ಮಲಗಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಮಹಾದೇವ ಮಾಳಗಿ ಅವರ ಕುರಿತು ಅವರ ಪತ್ನಿ ಪ್ರಭಾವತಿ ಮಾಳಗಿ ಅವರು ಸರಕಾರಕ್ಕೆ‌ ಅಂಗಲಾಚಿದ್ದಾರೆ.


2015ರಲ್ಲಿ ಸ್ಟ್ರೋಕ್ ಗೆ ಒಳಗಾದ ಮಹಾದೇವ ಮಾಳಗಿ ಅವರಿಗೆ ಸರ್ಕಾರದಿಂದ ಇದುವರೆಗೂ ಯಾವುದೇ ಸವಲತ್ತು ಸಿಕ್ಕಿಲ್ಲ. ಸ್ವಯಂ ನಿವೃತ್ತಿ ಕೂಡ ಕೊಟ್ಟಿಲ್ಲ. ಬರಬೇಕಾದ ವೇತನ ಹಾಗೂ ಪಿಂಚಣಿ ಈ ಕುಟುಂಬಕ್ಕೆ ಬರದೇ ಹೋಗಿದ್ದರಿಂದ ಈ ಕುಟುಂಬ ಅಕ್ಷರಶಃ ನರಕಯಾತನೆ ಅನುಭವಿಸಿದೆ. ಪ್ರಭಾವತಿ ಅವರು ತಮ್ಮ ಜೀವನ ಸಾಗಿಸುವುದಕ್ಕಾಗಿ ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಇರೋ ಬರೋ ವಡವೆ, ವಾಹನಗಳು ಎಲ್ಲವನ್ನೂ ಮಾರಿ ಜೀವನ ನಡೆಸುತ್ತಿದ್ದಾರೆ. ಅನುಕಂಪದ ಆಧಾರದ ಮೇಲೆ ನೌಕರಿ ಕೊಡಿ ಎಂದು ಒತ್ತಾಯಿಸುತ್ತಲೇ ಬಂದಿದ್ದಾರೆ. ಆದರೆ, ಗಂಡ ಸತ್ತು ಹೋಗಿದ್ದರೆ ಮಾತ್ರ ಅನುಕಂಪದ ಆಧಾರದ ಮೇಲೆ ನೌಕರಿ ಕೊಡಲು ಬರುತ್ತದೆ ಎಂಬ ಕಾನೂನಿನ ತೊಡಕು ಈ ಕುಟುಂಬಕ್ಕೆ ಮುಳುವಾಗಿದೆ..ಈ ವಿಷಯ ತಿಳಿದುಕೊಂಡ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶಕುಮಾರ ಅವರು ಇದೀಗ ಆ ಕುಟುಂಬದ ನೆರವಿಗೆ ಬಂದಿದ್ದಾರೆ. ಶನಿವಾರ  ಸ್ವತಃ ಸುರೇಶಕುಮಾರ ಅವರೇ ಪ್ರಭಾವತಿ ಅವರಿಗೆ ಕರೆ ಮಾಡಿ ಮಾತನಾಡಿದ್ದಾರೆ. ಅನುಕಂಪದ ಆಧಾರದ ಮೇಲೆ ನೌಕರಿ ಕೊಡುವುದಾಗಿಯೂ ಭರವಸೆ ನೀಡಿದ್ದಾರೆ. ಇಷ್ಟು ವರ್ಷಗಳಾದ ಮೇಲೆ ಇದೀಗ ಮಾಳಗಿ ಅವರ ಕುಟುಂಬಕ್ಕೆ ಸರ್ಕಾರ ನೆರವು ನೀಡಲು ಮುಂದೆ ಬಂದಿದೆ..

ಸಾಕಷ್ಟು ಓದಿ ಒಳ್ಳೆಯ ಹುದ್ದೆಯಲ್ಲಿದ್ದ ಮಹಾದೇವ ಮಾಳಗಿ ಅವರ ಕುಟುಂಬ ಜೇನಿನಗೂಡಿನಂತಿತ್ತು.  ಎಲ್ಲವೂ ಒಳ್ಳೆಯದಾಯ್ತು ಎನ್ನುವಷ್ಟರಲ್ಲಿ ವಿಧಿ ಅವರ ಬಾಳಲ್ಲಿ ಬೇರೆ ಆಟವನ್ನೇ ಆಡಿಬಿಟ್ಟಿದೆ. ಸ್ಟ್ರೋಕ್ ಗೆ ಒಳಗಾಗಿ ಪ್ರಪಂಚದ ಅರಿವೇ ಇಲ್ಲದಂತೆ ಮಹಾದೇವ ಅವರು ಹಾಸಿಗೆ ಹಿಡಿದಿದ್ದಾರೆ. ಸರ್ಕಾರ ಆದಷ್ಟು ಬೇಗ ಇದೊಂದು ವಿಶೇಷ ಪ್ರಕರಣ ಎಂದು ಪರಿಗಣಿಸಿ ಅನುಕಂಪದ ಆಧಾರದ ಮೇಲೆ ಮಹಾದೇವ ಅವರ ಪತ್ನಿಗೆ ನೌಕರಿ ಕೊಟ್ಟು ಆ ಕುಟುಂಬದ ನೆರವಿಗೆ ಬರಲಿ ಎಂಬುದೇ ನಮ್ಮ ಕಳಕಳಿ....
ಶಿಕ್ಷಕರ ದಿನಾಚರಣೆಗೆ ಈ ಶಿಕ್ಷನಿಗೆ ಕೊಟ್ಟ ಮಾತನ್ನ ಉಳಿಸಿಕೊಳ್ತಾರಾ ಶಿಕ್ಷಣ ಸಚಿವ ಸುರೇಶ ಕುಮಾರ.? ಇಲ್ಲಿದೆ ಪುಲ್ ಡಿಟೇಲ್... ಶಿಕ್ಷಕರ ದಿನಾಚರಣೆಗೆ ಈ ಶಿಕ್ಷನಿಗೆ ಕೊಟ್ಟ ಮಾತನ್ನ ಉಳಿಸಿಕೊಳ್ತಾರಾ ಶಿಕ್ಷಣ ಸಚಿವ ಸುರೇಶ ಕುಮಾರ.? ಇಲ್ಲಿದೆ ಪುಲ್ ಡಿಟೇಲ್... Reviewed by News10Karnataka Admin on September 04, 2020 Rating: 5

No comments:

Powered by Blogger.