ಕೊರೋನಾ ಗೆದ್ದ ಪೊಲೀಸ್ ಸಿಬ್ಬಂದಿಗಳಿಗೆ ದೈರ್ಯ ತುಂಬಿ ಸನ್ಮಾನಿಸಿದ ಎಸಿಪಿ ಅನುಷಾ ಮತ್ತು ಸಿಪಿಐ..
ಧಾರವಾಡದ ಶಹರ ಪೊಲೀಸ್ ಠಾಣೆಯಲ್ಲಿ ಇಂದು ಕೊರೋನಾ ಗೆದ್ದ ವಾರಿಯರ್ಸ್ ಗೆ ಎಸಿಪಿ ಅನುಷಾ ನೇತೃತ್ವದಲ್ಲಿ ಸನ್ಮಾನ ಸಮಾರಂಭವನ್ನು ಹಮ್ಮಿಕೊಳಲಾಗಿತ್ತು.. ಕೊರೋನಾ ಸಂಧರ್ಭದಲ್ಲಿ ಪ್ರಾಣವನ್ನೇ ಪಣಕ್ಕಿಟ್ಟು ಕರ್ತವ್ಯ ನಿರ್ವಹಿಸಿದ ಕೊರೋನಾ ಫ್ರೆಂಟ್ ಲೈನ್ ವಾರಿಯರ್ಸ್ ಗಳಾದ ಪೊಲೀಸ್ ಸಿಬ್ಬಂದಿಗಳಿಗೂ ಸಹ ಬಿಟ್ಟು ಬಿಡದೆ ಕಾಡಿದ ವೈರಸ್ ಅನ್ನು ಈಗಾ ಪೊಲೀಸ್ ಸಿಬ್ಬಂದಿಗಳು ಗೆದ್ದು ಬಂದಿದ್ದಾರೆ.
ಎ ಆರ್ ಕುಲಕರ್ಣಿ, ಬಿ ಎಚ್ ಶಿಂಗಣ್ಣವರ್, ಎಂ ಎಸ್ ಶಿರಗೇರಿ, ಸಿ ಡಿ ಬೆಳ್ಳಕ್ಕಿ, ಪಿ ಪಿ ಮಾಳಗಿ, ಆರ್ ಸಿ ಮುದಕನಗೌಡರ್, ಡಿ ಎ ಜಾಧವ್ ಅವರು ಕೋವಿಡ್ ನಿಂದ ಗುಣಮುಖರಾಗಿ ಬಂದಿದ್ದಕ್ಕೆ ಆತ್ಮಸ್ತೈರ್ಯ ತುಂಬಲು ಇಂದು ಎಸಿಪಿ ಅನುಷಾ ಮತ್ತು ಸಿಪಿಐ ಶ್ರೀಧರ್ ಸತಾರೆ ನೇತೃತ್ವದಲ್ಲಿ ಹೂಮಳೆಗರೆದು,
ಶಾಲು ಹೊಚ್ಚಿ ಸನ್ಮಾನಿಸಲಾಯಿತು. ಇನ್ನೂ ಇದೆ ವೇಳೆ ಪದೋನ್ನತಿ ಹೊಂದಿದ ಆರ್ ಎಚ್ ಬಿಸೆ ಮತ್ತು ಸಿ ಡಿ ಬೆಳ್ಳಕ್ಕಿ ಅವರಿಗೂ ಕೂಡಾ ಸನ್ಮಾನ ಮಾಡಲಾಯಿತು...
ಕೊರೊನಾದಿಂದ ಗುಣಮುಖರಾದವರಿಗೆ ಎಸಿಪಿ ಅನುಷಾ ಅವರು ಮಾಡಿದ್ದೆನೂ..?
Reviewed by News10Karnataka Admin
on
September 04, 2020
Rating:

No comments: