.

ಪ್ರಾಣಿಸಂಕುಲದಲ್ಲೇ ಗಂಡು‌ಗರ್ಭಧರಿಸುವ ಜೀವಿ ಯಾವುದು ಗೊತ್ತಾ?

ಸಮುದ್ರ ಕುದುರೆಗಳಲ್ಲಿ ಗಂಡು ಗರ್ಭ ಧರಿಸುವುದೇ ವಿಶೇಷತೇ..        ಸ್ನೇಹಿತರೇ, ಭೂಮಿಯೆಲ್ಲಿ ಎಷ್ಟು ಜೀವ ವೈವಿಧ್ಯತೆ ಇದೆಯೋ ಅದಕ್ಕೂ ಹೆಚ್ಚು ವೈವಿಧ್ಯತೆ ಇರುವುದು ಸಾಗರಗಳಲ್ಲಿ. ಇಂತಹ ಅಗಾಧ ಸಾಗರ ಜೀವಿಗಳಲ್ಲಿ ಒಂದು ವಿಶೇಷ ಜೀವಿ ಸಮುದ್ರ ಕುದುರೆ,ನೋಡಲು ಇದರ ಮುಖ ನಮ್ಮ ಕುದುರೆಯೇಂತೆಯೇ ಹೋಲುತ್ತೆ ಅದಕ್ಕೇ ಈ ಹೆಸರು. ಹಿಡಿಕೆಯಾಗಿಯೂ ಉಪಯೋಗಿಸಬಲ್ಲ ಪ್ರವರ್ಧಮಾನ ಬಾಲ. 
ಸ್ಟ್ರಾ ತರಹ ಆಹಾರವನ್ನು ಜಗ್ಗುವ ಕೊಳುವೆಯಂತಹ ಬಾಯಿ ಇದರ ಆಕೃತಿಯ ಮತ್ತೊಂದು ವಿಶೇಷ. ಯಾವಾಗ ಇವುಗಳ ಸಂಭೋಗವಾಗುತ್ತದೆಯೋ ಗರ್ಭಿಣಿಯಾಗುವುದು ಗಂಡು. ಹೌದು, ಯೌವನಕ್ಕೆ ಬಂದ ಗಂಡು - ಹೆಣ್ಣುಗಳು ಮೊದಲು ತಮ್ಮ ಕಣ್ಣ ನೋಟಗಳಿಂದ ಆಕರ್ಷಣೆಗೊಳ್ಳುತ್ತವೆ. ನಂತರ ತಮ್ಮ ಬಾಲಗಳನ್ನು ಒಂದೊಕ್ಕೊಂದು ಬೆಸೆದು ಹಲವು ದಿನಗಳ ಕಾಲ ನ್ರತ್ಯದ ಭಂಗಿಯೆಲ್ಲಿ ಅಪ್ಪಿಕೊಂಡಿರುತ್ತವೆ. ಈ ಸಮಯದಲ್ಲಿ ಒಂದಕ್ಕೊಂದು ಹೆಚ್ಚು ಆಕರ್ಷಣೆಯಾಗಲು ತಮ್ಮ ಮೈ ಬಣ್ಣಗಳನ್ನೂ ಹಲವು ಬಾರಿ ಬದಲಿಸುತ್ತವೆ. 

ಈ ಬೆಸುಗೆ ಅನ್ನ್ಯೋನ್ನತೆಯ ಸಂಕೇತವಷ್ಟೇ ಅಲ್ಲ ಸಂತಾನೋತ್ಪತ್ತಿಯ ಕ್ಷಮತೆಯೆನ್ನೂ  ಧೃಢಪಡಿಸಿಕೊಳ್ಳುವ ಒಂದು ಪ್ರಕ್ರಿಯೆ. ನಂತರ ಗಂಡು ತನ್ನ ಹೊಟ್ಟೆಯ ಭಾಗದಲ್ಲಿರುವ ವಿಶೇಷ ಸಂಸಾರ ಹೊರುವ ಚೀಲವನ್ನು ಹೆಣ್ಣಿನ ದೇಹಕ್ಕೇ ತಾಗಿಸಿ ಮುಂದಿನ ಕ್ರಿಯೆಗೆ ಆಹ್ವಾನಿಸುತ್ತದೆ. ನಂತರ ಹೆಣ್ಣು ತನ್ನ ಹೊಟ್ಟೆಯ ಕೆಳಬಾಗವನ್ನು ಹೊರಚಾಚಿ ತನ್ನ ಅಂಡಾಣು ಚೀಲದಿಂದ ಗಂಡಿನ ಚೀಲಕ್ಕೆ ತನ್ನ ಮೊಟ್ಟೆಗಳನ್ನು ವರ್ಗಾಯಿಸುತ್ತದೆ. ಯಾವಾಗ ಮೊಟ್ಟೆಗಳು ಗಂಡಿನ ಸಂಸಾರ ಚೀಲಕ್ಕೆ ಬಂದು ಸೇರುತ್ತವೆಯೋ ನಂತರ ಗಂಡು ತನ್ನ ವೀರ್ಯವನ್ನು ಬಿಡುಗಡೆಗೊಳಿಸಿ ಮೊಟ್ಟೆಗಳನ್ನು ಸಂಸ್ಕಾರಗೊಳಿಸಿ ತಂದೆಯ ಅಧಿಕೃತ ಮುದ್ರಣ ನೀಡುತ್ತದೆ. 


ಈ ಗರ್ಭವಸ್ಥೆಯೆಲ್ಲಿ ಗಂಡು ತನ್ನ ಭ್ರೂಣಕ್ಕೇ ಅವಶ್ಯವಾದ ರಕ್ತ ಸಂಚಲನ, ಪೋಷಕಾಂಶ ಹಾಗೂ ಆಮ್ಲಜನಕವನ್ನು ಒದಗಿಸಿ  ಮುಂಬರುವ ಮರಿಗಳಿಗೆ ಅವಶ್ಯಕತೆ ಇರುವ ಲವಣಂಶ ಮತ್ತೂ ಸಮರ್ಪಕ ವಾತಾವರಣವನ್ನು ಪೂರೈಸುತ್ತದೆ. ಹಲವು ದಿನಗಳ ಈ ಕ್ರಿಯೇಯ ನಂತರ, ಯಾವಾಗ ಮರಿಗಳಿಗೆ ಜನ್ಮ ನೀಡುವ ಸಮಯ ಬರುತ್ತದೆಯೋ ಜೋರಾಗಿ ತನ್ನ ಸಂಸಾರ ಚೀಲದಿಂದ ನಾವು ಮಾನವರು ಕಪಾಲಿಭಾತಿ ಯೋಗ ಕ್ರಿಯೇಯೆಲ್ಲಿ ಶ್ವಾಸವನ್ನು ಒಳಗಿಂದ  ಹೊರಗೆ ಜೋರಾಗಿ ಹೊಟ್ಟೆಯ ಶಕ್ತಿಯಿಂದ ಹೊರಹಾಕುತ್ತೇವೆಯೋ  ಹಾಗೆಯೇ ಇದೂ ಸಹಿತ ತನ್ನ ಮರಿಗಳನ್ನು ಹೊರಹಾಕುತ್ತದೆ. ಈ ಹೊರ ಬಂದ ನವಜಾತ ಮರಿಗಳನ್ನು ಫ್ರೈ ಎಂದು ಕರೆಯುತ್ತಾರೆ. 


ಒಂದು ಬಾರಿ ಜನ್ಮ ನೀಡಿದರೆ ಅಂದಾಜು 2000 ಫ್ರೈಗಳು ಹೊರಗೆ ಬರುತ್ತವೆ. ಆದರೇ, ಇವು ಹೊರಗೆ ಬಂದೊಡನೆ ಪಾಲಕರ ಸಂರಕ್ಷಣೆ ಇಲ್ಲದೇ ಸ್ವತಂತ್ರವಾಗಿ ಬಿಡುತ್ತವೆ. ಇಂತಹ ಸಮಯದಲ್ಲಿ ಇವುಗಳು ಸಾಮಾನ್ಯವಾಗಿ ಪರಭಕ್ಷಕ ಜೀವಿಗಳಿಗೇ ಆಹಾರವಾಗಿ ಬಿಡುತ್ತವೆ. ಒಂದು ಅಂದಾಜಿನ ಪ್ರಕಾರ 1000 ಫ್ರೈಗಳಲ್ಲಿ ಬದುಕುವ ಭಾಗ್ಯ ಪ್ರಾಪ್ತಿಯಾಗುವುದು ಕೇವಲ 5-8 ಫ್ರೈಗಳು ಮಾತ್ರ. ಹೀಗಾಗಿ ಗಂಡು ಸಮುದ್ರ ಕುದರೆ ಒಂದು ಗರ್ಭಧಾರಣೆಯ ನಂತರ ಮತ್ತೇ ಹೆಣ್ಣು ಸಮುದ್ರ ಕುದರೆಯೊಂದಿಗೆ ಸೇರಿ ಗರ್ಭಧರಿಸಿಕೊಳ್ಳುವ ಕ್ರಿಯೆಯೆಲ್ಲಿ ತಲ್ಲೀನವಾಗಿಬಿಡುತ್ತದೆ.
ಪ್ರಾಣಿಸಂಕುಲದಲ್ಲೇ ಗಂಡು‌ಗರ್ಭಧರಿಸುವ ಜೀವಿ ಯಾವುದು ಗೊತ್ತಾ? ಪ್ರಾಣಿಸಂಕುಲದಲ್ಲೇ ಗಂಡು‌ಗರ್ಭಧರಿಸುವ ಜೀವಿ ಯಾವುದು ಗೊತ್ತಾ? Reviewed by News10Karnataka Admin on September 01, 2020 Rating: 5

No comments:

Powered by Blogger.