.

ಕಿತ್ತೂರು ಕ್ಷೇತ್ರದ ಶಾಸಕರು ಕ್ಷೆತ್ರದ ಜನರಿಗೆ ಮಾಡುತ್ತಿರುವ ಅನ್ಯಾಯ ಎನೂ ಅಂತಿರಾ....?

ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ವನ್ನ ಕಿತ್ತೂರು ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಬಚ್ಚನಕೇರಿ ಗ್ರಾಮದ ಸರಕಾರಿ ಜಾಗದಲ್ಲಿ ಸ್ಥಾಪನೆ ಮಾಡಬೇಕು ಎಂದು ಕಿತ್ತೂರು ಕ್ಷೆತ್ರದ ಶಾಸಕ ಮಹಾಂತೇಶ ದೊಡ್ಡಗೌಡರ ಹಿಂದಿನ ಮೈತ್ರಿ  ಸರಕಾರದ ಉನ್ನತ ಶಿಕ್ಷಣ ಸಚಿವರಾಗಿದ್ದ ಜೆಟಿ ದೇವೆಗೌಡರಿಗೆ 06/08/2018 ರಲ್ಲಿ ಮನವಿ ಸಲ್ಲಿಸಿದ್ದರು, ಆದರೆ ಸದ್ಯ ಅದೆ ಕ್ಷೆತ್ರದ ಶಾಸಕ ಮಹಾಂತೇಶ ದೊಡಗೌಡರ ಅವರು ಬೆಳಗಾವಿ ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಅವರ ಲೆಟರ್ ಹೆಡ್ ನಲ್ಲಿ ಕಿತ್ತೂರಿಗೆ ಬೇಡ ಇದನ್ನ ಬೆಳಗಾವಿ ತಾಲೂಕಿನ ಬಾಗೆವಾಡಿ ಗ್ರಾಮದ ಬಳಿ ಸ್ಥಾಪನೆ ಮಾಡಬೇಕು ಎಂದು ಅದೆ ಶಾಸಕರ ಮಹಾಂತೇಶ ದೊಡಗೌಡರ ಸಹಿ ಹಾಕಿದ್ದಾರೆ..

ನಿಜಕ್ಕೂ ಶಾಸಕರಿಗೆ ಚನ್ನಮ್ಮ ವಿವಿ ತಮ್ಮ ಕ್ಷೆತ್ರಕ್ಕೆ ಸ್ಥಳಾಂತರ ಮಾಡಿಸಿಕ್ಕೊಳ್ಳುವ ಇಚ್ಚಾಶಕ್ತಿನೆ ಇಲ್ಲ ನೋಡಿ..ಒಂತರಾ ಶಾಸಕರು ಮಗುವನ್ನು ಚೂಟಿ ಅಳಿಸುವುದು  ಜೊತೆಗೆ ಅದೆ ಮಗುವನ್ನ ತಾವೆ ಸಮಾಧಾನ ಮಾಡೋ ಕೆಲಸವನ್ನ ಮಾಡುತ್ತಿದ್ದಾರೆ...ಇದರಿಂದ ಕಿತ್ತೂರು ಕ್ಷೆತ್ರದ ಜನರು ಬೆಚ್ಚಿಬಿದ್ದಿದ್ದಾರೆ, ..ಯಾಕೆಂದ್ರೆ ಸದ್ಯ ಶಾಸಕರು ರಾಜಿನಾಮೆಗೆ ಆಗ್ರಹಿಸಿ ಕ್ಷೆತ್ರದ ಜನರು ಪಟ್ಟು ಹಿಡದಿದ್ದಾರೆ...ಒಟ್ಟಿನಲ್ಲಿ ಕಿತ್ತೂರು ಶಾಸಕರು ಜನರ ಮುಂದೆ ಒಂದು ಸರಕಾರದ ಮುಂದೆ ಒಂದು ಕೊಟ್ಟ ಪತ್ರಗಳೆ ಅವರ ಬಣ್ಣವನ್ನ ಬಯಲಿಗೆ ಎಳದಿದೆ..

ಒಟ್ಟಿನಲ್ಲಿ ಶಾಸಕರು ಇನ್ನು ಮುಂದೆ ಯಾದರೂ ಪ್ರಾಮಾಣಿಕ ಪ್ರಯತ್ನ ಮಾಡಿ ಆದಷ್ಟೂ ಬೇಗ ರಾಣಿ ಚನ್ನಮ್ಮ ವಿವಿಯನ್ನ ಕಿತ್ತೂರು ತಾಲೂಕಿನಲ್ಲಿ ಸ್ಥಾಪಿಸಲು ಮುಂದಾಗ್ತಾರಾ ಎಂಬುದನ್ನ ಕಾದುನೋಡಬೇಕಿದೆ ಗಡಿ ನಾಡು ಸೈನ್ಯದ ಅದ್ಯಕ್ಷ ಮನ್ಸೂರ ಅಲಿಕಾನ್ ಅವರು ಶಾಸಕರಿಗೆ ಒತ್ತಾಯ ಮಾಡಿದ್ದಾರೆ.. ಸಯ್ಯದ  ಮನ್ಸೂರ್, ಗಡಿನಾಡು ಕನ್ನಡ ಸೇನೆ ಅದ್ಯಕ್ಷರು..
ಕಿತ್ತೂರು ಕ್ಷೇತ್ರದ ಶಾಸಕರು ಕ್ಷೆತ್ರದ ಜನರಿಗೆ ಮಾಡುತ್ತಿರುವ ಅನ್ಯಾಯ ಎನೂ ಅಂತಿರಾ....? ಕಿತ್ತೂರು ಕ್ಷೇತ್ರದ ಶಾಸಕರು ಕ್ಷೆತ್ರದ ಜನರಿಗೆ ಮಾಡುತ್ತಿರುವ ಅನ್ಯಾಯ ಎನೂ ಅಂತಿರಾ....? Reviewed by News10Karnataka Admin on September 21, 2020 Rating: 5

No comments:

Powered by Blogger.