ಕಳೆದ ಮೂರು ದಿನದ ಹಿಂದೆ ಸಿಬಿಐ ಅಧಿಕಾರಿಗಳು, ಮಾಜಿ ಸಚಿವರ ಅವರ ಸಹೋದರ ವಿಜಯ ಕುಲಕರ್ಣಿ ಅವರ ವಿಚಾರಣೆಯ ಬಳಿಕ ಧಾರವಾಡದಲ್ಲಿ ಸಿಬಿಐ ಅಧಿಕಾರಿಗಳು ಬೀಡು ಬಿಟ್ಟಿದ್ದಾರೆ, ಜೊತೆಗೆ ಕೆಲ ಕಾಂಗ್ರೆಸ್ ಮುಖಂಡರನ್ನ ವಿಚಾರಣೆ ಮಾಡಿದ್ದಾರೆ ಸಿಬಿಐ ಅಧಿಕಾರಿಗಳು
ಧಾರವಾಡ ಜಪಂ ಸದಸ್ಯ ಯೋಗೀಶ್ ಗೌಡ ಕೊಲೆಯ ವಿಚಾರವಾಗಿ ಇಂದು ಧಾರವಾಡದಲ್ಲಿ ಸಿಬಿಐ ಅಧಿಕಾರಿಗಳು ವಿಚಾರಣೆಯನ್ನ ಚುರುಕುಗೊಳಿಸಿದ್ದಾರೆ, ಜೊತೆಗೆ ಇಂದು ಸಹ ಸಾಕ್ಷಿ ನಾಶ ಪಡಿಸಿರುವ ವಿಚಾರವಾಗಿ ಉಪನಗರ ಪೋಲಿಸ್ ಠಾಣೆಯಲ್ಲಿ ಮೃತ ಯೋಗೀಶಗ ಗೌಡ ಪತ್ನಿ ಮಲ್ಲಮ್ಮ ಅವರನ್ನ ವಿಚಾರಣೆ ಮಾಡಿದ್ದಾರೆ..ಇನ್ನು ಧಾರವಾಡ ಜಿಪಂ ಉಪಾದ್ಯಕ್ಷ ಶಿವಾನಂದ ಕರಿಗಾರ, ಕಾಂಗ್ರೆಸ್ ಮುಖಂಡ ನಾಗರಾಜ ಗೌರಿ, ಮಲ್ಲಮ್ಮ ಸಹೋದರಿ ಸುಮಾ, ಯೋಗೀಶ ಗೌಡ ಸಹೋದರ ಗುರುನಾಥ್ ಗೌಡ , ಕಾಂಗ್ರೆಸ್ ಮುಖಂಡ ಮಹೇಶ ಶೆಟ್ಟಿ ಇವರನ್ನೆಲ್ಲ ಉಪನಗರ ಪೋಲಿಸ್ ಠಾಣೆಯಲ್ಲಿ ಸಿಬಿಐ ಅಧಿಕಾರಿಗಳು ಬೆಳಿಗ್ಗೆ 11 ಗಂಟೆಯಿಂದ ಡ್ರಿಲ್ ಮಾಡಿದ್ದಾರೆ...
ನಿನ್ನೆಯಷ್ಟೆ ಸಿಬಿಐ ಅಧಿಕಾರಿಗಳು ಧಾರವಾಡದ ಕೋರ್ಟ ನಲ್ಲಿ 195 A ಅಡಿಯಲ್ಲಿ ಸಾಕ್ಷಿ ನಾಶ ಪಡಿಸಿದ ವಿಚಾರವಾಗಿ ಅರ್ಜಿ ಸಲ್ಲಿಸಿದ್ದರು, ಜೊತೆಗೆ ನಿನ್ನೆಯಿಂದ ಮತ್ತೆ ಧಾರವಾಡದಲ್ಲಿ ಸಿಬಿಐ ಅಧಿಕಾರಿಗಳ ವಿಚಾರಣೆ ಮುಂದುವರೆದಿದೆ, ಜೊತೆಗೆ ಇಂದು ನಾಲ್ಕು ಬಾಕ್ಸ ನಲ್ಲಿ ಮಹತ್ವದ ದಾಖಲೆಗಳನ್ನ ಸಿಬಿಐ ಅಧಿಕಾರಿಗಳು ಉಪನಗರ ಪೋಲಿಸ್ ಠಾಣೆಯಲ್ಲಿ ಶಿಪ್ಟ ಮಾಡಿದ್ದಾರೆ..ಸದ್ಯ ದಿನಕ್ಕೊಂದು ತಿರುವ ಪಡೆದುಕ್ಕೊಳ್ಳುತ್ತಿರುವ ಮೃತ ಯೋಗೀಶ್ ಗೌಡ ಕೊಲೆ ಪ್ರಕರಣದ ಕೇಸ್ ಇನ್ನು ಯಾವ ಹಂತಕ್ಕೆ ಬರುತ್ತೆ ಎಂಬದನ್ನ ಸಿಬಿಐ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ,
ಒಟ್ಟಿನಲ್ಲಿ ಕಳೆದ ನಾಲ್ಕು ದಿನದಲ್ಲಿ ಮೃತ ಯೋಗೀಅಸ ಗೌಡ ಕೊಲೆ ಪ್ರಕರಣದ ಕೇಸ್ ನಲ್ಲಿ ಸಿಬಿಐ ಅಧಿಕಾರಿಗಳು ಧಾರವಾಡದಲ್ಲಿ ಮತ್ತೆ ಬೀಡು ಬಿಟ್ಟಿದ್ದಾರೆ ಜೊತೆಗೆ ಇಂದು ಕೆಲ ಕಾಂಗ್ರೆಸ್ ಮುಖಂಡರ ವಿಚಾರಣೆಯ ಯಾವೆಲ್ಲ ಮಾಹಿತಿಗಳನ್ನ ಕಲೆ ಹಾಕಿದ್ದಾರೆ ಸಿಬಿಐ ಅಧಿಕಾರಿಗಳೂ ಪ್ರಕರಣ ಸದ್ಯ ದಿನಕ್ಕೊಂದು ಚುರುಕು ಪಡೆದುಕ್ಕೊಳ್ಳುತ್ತಿರುವ ಕೇಸ್ ಯಾವ ಹಂತಕ್ಕೆ ಬರುತ್ತೆ ಎಂಬುದನ್ನ ಕಾದು ನೋಡಬೇಕಿದೆ...
ಯೋಗೀಶ್ ಗೌಡ ಕೊಲೆ ಕೇಸ್ ಹಿನ್ನೆಲೆ ಕಾಂಗ್ರೆಸ್ ನಾಯಕರಿಗೆ ಸಿಬಿಐ ನಿಂದ ಡ್ರಿಲ್ ....
Reviewed by News10Karnataka Admin
on
September 17, 2020
Rating:

No comments: