.

ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರ ಕಾರ್ಯ ಅಭಿವೃದ್ಧಿ ಪಥದತ್ತ....

ಸಮುದಾಯ ಭವನ, ರಸ್ತೆ ಕಾಮಗಾರಿಗೆ ಚಾಲನೆ..

ಬೆಳಗಾವಿ : ಹಿರೇಬಾಗೇವಾಡಿ ಗ್ರಾಮದಲ್ಲಿ  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅನುದಾನ ಹಾಗೂ ಪಂಚಾಯತ್ ರಾಜ್ ಇಂಜಿನಿಯರಿಂಗ್‌ ಇಲಾಖೆ ವತಿಯಿಂದ 10 ಲಕ್ಷ ರೂ,ಗಳ ವೆಚ್ಚದಲ್ಲಿ "ಸಾಂಸ್ಕೃತಿಕ ಸಮುದಾಯ ಭವನ" ಕಟ್ಟಡದ ಕಾಮಗಾರಿಗೆ ಮತ್ತು  ಹಿರೇಬಾಗೇವಾಡಿ ಗ್ರಾಮದ ಮುಸ್ಲಿಂ ಕಾಲೋನಿಯಲ್ಲಿ ಅಲ್ಪ ಸಂಖ್ಯಾಂತರ ಅಭಿವೃದ್ಧಿಯ ಅನುದಾನ ಹಾಗೂ ಲೋಕೋಪಯೋಗಿ ಇಲಾಖೆ ವತಿಯಿಂದ  20 ಲಕ್ಷ ರೂ.ಗಳ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆಯ ನಿರ್ಮಾಣದ ಕಾಮಗಾರಿಗಳಿಗೆ ಶುಕ್ರವಾರ ಪೂಜೆ ನೆರವೇರಿಸಲಾಯಿತು.

ಸ್ಥಳೀಯ ಜನಪ್ರತಿನಿಧಿಗಳು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ. ಸಿ. ಪಾಟೀಲ, ಚನ್ನರಾಜ ಹಟ್ಟಿಹೊಳಿ ಹಾಗೂ ಪಕ್ಷದ ಮುಖಂಡರು ಕಾಮಗಾರಿಗೆ ಆಧಿಕೃತವಾಗಿ ಚಾಲನೆ  ನೀಡಿದರು.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಸುರೇಶ ಇಟಗಿ, ಗೌಸಮೊದ್ದಿನ್ ಜಾಲಿಕೊಪ್ಪ, ಯಲ್ಲಪ್ಪ ಕೆಳಗೇರಿ, ಶಮಿನಾ ನದಾಪ್, ಮಲ್ಲಪ್ಪ ಹುಲಿಕವಿ, ಶಿವಾನಂದ ತೋಟಗಿ, ನಾಗರಾಜ ಬೆಟಗೇರಿ, ಆನಂದ ಪೊಲೆಸಿ, ಚಿನ್ನಪ್ಪ ಕೊಂಡಗೂರಿ, ಅಬ್ಬು ಟೊಕ್ಕೆದ, ರಾಜು ಪಾಟೀಲ, ಅಡಿವೆಪ್ಪ ತೊಟಗಿ, ರವಿ ಗಾನಗಿ, ಸಂತೋಷ ಮುರಗೋಡ, ಚಂದ್ರಶೇಖರ ಅಂಗಡಿ, ಶಿವನಗೌಡ ನಾಯ್ಕರ್, ಮನೋಹರ್ ದುರ್ಗಣ್ಣವರ ಹಾಗೂ ಪಕ್ಷದ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು. 
ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರ ಕಾರ್ಯ ಅಭಿವೃದ್ಧಿ ಪಥದತ್ತ.... ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರ ಕಾರ್ಯ ಅಭಿವೃದ್ಧಿ ಪಥದತ್ತ.... Reviewed by News10Karnataka Admin on September 11, 2020 Rating: 5

No comments:

Powered by Blogger.