.

ಮೆಚ್ಚಿನ ಶಿಕ್ಷನಿಗೆ ವಿದ್ಯಾರ್ಥಿಗಳು ಕೊಟ್ಟ ಉಡುಗರೆ ಎನೂ ಅಂತಿರಾ..ಇಲ್ಲಿದೆ ಪುಲ್ ಡಿಟೆಲ್ಸ್......

ಮೆಚ್ಚಿನ ಶಿಕ್ಷಕನಿಗೆ ಬೈಕ್ ಗುರುದಕ್ಷಿಣೆ...
 
ಗುರು ಬ್ರಹ್ಮ, ಗುರು ವಿಷ್ಣು, ಗುರುದೇವೋ ಮಹೇಶ್ವರ, ಗುರು ಸಾಕ್ಷಾತ್ ಪರಬ್ರಹ್ಮ’ ಎಂದು ಗುರುವನ್ನು ದೇವರಿಗೆ ಹೋಲಿಕೆ ಮಾಡಿ ಹೇಳುವ ಸಾತ್ವಿಕ ವಿಚಾರ ಭಾರತೀಯರಲ್ಲಿದೆ. ‘ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕ್ತಿ’ ಎಂದು ದಾಸರು ಹಾಡಿದ್ದಾರೆ. ‘ಗುರು ದೃಷ್ಟಿ, ಶಿಷ್ಯ ಸೃಷ್ಟಿ’ ಎಂದೂ ಹೇಳಲಾಗುತ್ತದೆ.ಬೆಳಗಾವಿ ಜಿಲ್ಲೆಯ ಕಿತ್ತೂರು ನಾಡಿನ ಶಿಷ್ಯರ ಬಳಗವು ಸಾಕ್ಷಿಯಾಗಿದೆ, ಹೊಸ ಸೇರ್ಪಡೆಯೆಂಬಂತೆ ಹೊಸದೊಂದು ರೀತಿಯ ಸಾಹಸ ಮಾಡಿ ಗುರುದಕ್ಷಿಣೆಯ ಪರಂಪರೆಗೆ ಹೊಸಭಾಷ್ಯ ಬರೆದಿದ್ದಾರೆ.

ಗುರು ನಿವೃತ್ತಿಯಾದ ದಿನದಂದು ಇಲ್ಲಿಯ ಶಿಷ್ಯ ಬಳಗವು ಬುಲೆಟ್ ಬೈಕ್ ಕೊಡಿಸಿ ತಮ್ಮ ಪ್ರೀತಿಯನ್ನು ತೋರ್ಪಡಿಸಿದ್ದಾರೆ. ಇಂಥ ಪ್ರೀತಿಗೆ ಒಳಗಾದವರು ಇತ್ತೀಚೆಗೆ ಪ್ರಧಾನಗುರುವಾಗಿ ನಿವೃತ್ತರಾದ ಎಂ. ಎಫ್. ಜಕಾತಿ ಅವರು ಸುಮಾರು ಮೂರು ದಶಕಗಳ ಕಾಲ ಶಿಕ್ಷಕ ವೃತ್ತಿಯನ್ನು ಮನಸಾರೆ ಪ್ರೀತಿಸಿದ, ಶಿಕ್ಷಕರ ಸಂಘಟನೆಯನ್ನು ಎತ್ತರಕ್ಕೆ ಕೊಂಡೊಯ್ದ, ತಾವು ಸೇವೆ ಮಾಡಿದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸಿದ ಪ್ರಶಂಸೆಗೆ ಅವರು ಪಾತ್ರರಾಗಿದ್ದಾರೆ.
ಕಾಲವೂ ಬದಲಾಗಿದೆ. ಮಲಪ್ರಭಾ ನದಿಯಲ್ಲಿ ಸಾಕಷ್ಟು ಹೊಸ ನೀರು ಹರಿದು ಬಂದಿದೆ. ಗುರು-ಶಿಷ್ಯ ಸಂಬಂಧಗಳಲ್ಲಿ ಬಾರಿ ಬದಲಾವಣೆಯನ್ನೂ ಕಾಣುತ್ತಿದ್ದೇವೆ. ಆಧುನಿಕ ಯುಗಕ್ಕೆ ತಕ್ಕಂತೆ ಅವರ ಸಂಬಂಧದ ಹೊಸ ಭಾಷ್ಯವೂ ಬರೆದಾಗಿದೆ. ಗುರುವಿಗೆ ಕೈ ಮುಗಿಯುವುದು ಇರಲಿ, ಶಿಷ್ಯರಿಗೆ ನಮಿಸಿ ಪಾಠ ಮಾಡಬೇಕಾದ ಹೊಣೆಗಾರಿಕೆ ಇಂದಿನ ಶಿಕ್ಷಕರ ಮೇಲಿದೆ. ಇಂತಹ ಕಠಿಣ ಸಂದರ್ಭದಲ್ಲಿ ವಿದ್ಯಾರ್ಥಿಗಳ ಪ್ರೀತಿ, ಗೌರವಕ್ಕೆ ಪಾತ್ರರಾಗಿದ್ದಾರೆ ಜಕಾತಿ ಅವರು. ಅಷ್ಟೆ ಅಲ್ಲ, ಪ್ರೀತಿಯ ಶಿಷ್ಯರಿಂದ ಹೊಸ ಎನ್‍ಪೀಲ್ಡ್ ಬೈಕ್ ಅನ್ನು ಕಾಣಿಕೆ ಪಡೆದಿದ್ದಾರೆ ಎಂದರೆ ಅವರ ಶಿಷ್ಯ ಪ್ರೀತಿಯನ್ನು ಹೊಗಳಿದಷ್ಟು ಕಡಿಮೆಯೇ.


ಅಂದ ಹಾಗೆ ಅವರ ನಿವೃತ್ತಿ ಜೀವನ ಸುಖಕರವಾಗಲಿ. ಆರೋಗ್ಯವಿದೆ, ಆರ್ಥಿಕ ಸದೃಢತೆಯಿದೆ. ಹೊಸ ದಾರಿಯತ್ತ ಅವರ ಪಯಣ ಸಾಗಲಿ. ಸಮಾಜಮುಖಿ ಕೆಲಸಗಳು ಅವರಿಂದ ಸಾಗಲಿ ಎಂದು ಅವರ ಶಿಷ್ಯಬಳಗವು  ಶುಭ ಹಾರೈಸಿದೆ.
ಮೆಚ್ಚಿನ ಶಿಕ್ಷನಿಗೆ ವಿದ್ಯಾರ್ಥಿಗಳು ಕೊಟ್ಟ ಉಡುಗರೆ ಎನೂ ಅಂತಿರಾ..ಇಲ್ಲಿದೆ ಪುಲ್ ಡಿಟೆಲ್ಸ್...... ಮೆಚ್ಚಿನ ಶಿಕ್ಷನಿಗೆ ವಿದ್ಯಾರ್ಥಿಗಳು ಕೊಟ್ಟ ಉಡುಗರೆ ಎನೂ ಅಂತಿರಾ..ಇಲ್ಲಿದೆ ಪುಲ್ ಡಿಟೆಲ್ಸ್...... Reviewed by News10Karnataka Admin on September 01, 2020 Rating: 5

No comments:

Powered by Blogger.