.

ಬೇಗ ಬೇಗ ಗ್ರಾಮ ಪಂಚಾಯತ್ ಚುಣಾವಣೆಗೆ ರೆಡಿಯಾಗಿ, ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು‌ ಇದೆನಾ ಚೆಕ್ ಮಾಡಿಕ್ಕೊಳ್ರಿ...

ಗ್ರಾ.ಪಂ.ಚುನಾವಣೆ ಮತದಾರರ ಪಟ್ಟಿ ಪ್ರಕಟ
ಪರಿಶೀಲಿಸಿ ಹೆಸರು ಸೇರ್ಪಡಿಸಿಕ್ಕೊಳ್ಳಿ..


2020 ನೇ ಸಾಲಿನ ಗ್ರಾಮ ಪಂಚಾಯತಿಗಳ ಸಾರ್ವತ್ರಿಕ ಚುನಾವಣೆ  ಸಂಬಂಧಿಸಿದಂತೆ ಧಾರವಾಡ ಜಿಲ್ಲೆಯ 7 ತಾಲ್ಲೂಕುಗಳ ಒಟ್ಟು 144 ಗ್ರಾಮ ಪಂಚಾಯತಿಗಳ ಪೈಕಿ  ಡಿಸೆಂಬರ 2020 ಕ್ಕೆ   136 ಗ್ರಾಮ ಪಂಚಾಯತಿಗಳ ಅವಧಿ ಮುಕ್ತಾಯವಾಗಲಿದೆ. ತಹಶೀಲ್ದಾರ ಕಾರ್ಯಾಲಯಗಳಲ್ಲಿ  ಈ ಗ್ರಾ.ಪಂ.ಗಳ ಅಂತಿಮ ಮತದಾರರ ಪಟ್ಟಿಯನ್ನು ಅಗಸ್ಟ 31 ರಂದು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿರುತ್ತದೆ. 


ಗ್ರಾಮ ಪಂಚಾಯತಿಗಳ ವ್ಯಾಪ್ತಿಯ ಮತದಾರರು ತಮ್ಮ ಹೆಸರುಗಳು ಅಂತಿಮ ಮತದಾರರ ಪಟ್ಟಿಯಲ್ಲಿ ಪ್ರಕಟವಾದ ಬಗ್ಗೆ ಪರಿಶೀಲಿಸಿಕೊಳ್ಳುಬೇಕು. ಚುನಾವಣೆ ನಡೆಯಲಿರುವ ಗ್ರಾಮೀಣ ಪ್ರದೇಶಗಳಲ್ಲಿ ಅರ್ಹತೆ ಹೊಂದಿರುವ ಮತದಾರರು ಇದ್ದಲ್ಲಿ ಅಂತಹ ಮತದಾರರು ಅಗತ್ಯ ದಾಖಲೆಗಳೊಂದಿಗೆ ಹೆಸರು ಸೇರ್ಪಡೆಗಾಗಿ ಅರ್ಜಿಗಳನ್ನು ಮತದಾರರ ನೋಂದಣಾಧಿಕಾರಿಗಳಾದ ಉಪವಿಭಾಗಾಧಿಕಾರಿಗಳು, ಹಾಗೂ ಸಹಾಯಕ ಮತದಾರರ ನೋಂದಣಾಧಿಕಾರಿಗಳಾದ ತಹಶೀಲ್ದಾರರಿಗೆ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೇಗ ಬೇಗ ಗ್ರಾಮ ಪಂಚಾಯತ್ ಚುಣಾವಣೆಗೆ ರೆಡಿಯಾಗಿ, ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು‌ ಇದೆನಾ ಚೆಕ್ ಮಾಡಿಕ್ಕೊಳ್ರಿ... ಬೇಗ ಬೇಗ ಗ್ರಾಮ ಪಂಚಾಯತ್ ಚುಣಾವಣೆಗೆ ರೆಡಿಯಾಗಿ, ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು‌ ಇದೆನಾ ಚೆಕ್ ಮಾಡಿಕ್ಕೊಳ್ರಿ... Reviewed by News10Karnataka Admin on September 01, 2020 Rating: 5

No comments:

Powered by Blogger.