ಬೆಣ್ಣಿಹಳ್ಳದಲ್ಲಿ ಕೊಚ್ಚಿ ಹೋಗುತ್ತಿರುವ ವ್ಯಕ್ತಿಯ ರಕ್ಷಣೆ|ಧಾರವಾಡ|News 10 Karnataka


ಕಳೆದ ಮೂರು ದಿನಗಳಿಂದ ಧಾರವಾಡ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರಿ ಮಳೆಗೆ ಧಾರವಾಡ ಜಿಲ್ಲೆ ತತ್ತರಿಸಿದೆ, ಧಾರವಾಡ ಜಿಲ್ಲೆಯಾದ್ಯಂತ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ, ಇಂದು ಸಹ ನೀರಿನ ಹರಿವಿ‌ನ ಪ್ರಮಾಣ ಹೆಚ್ಚಾಗುತ್ತಿದೆ, ಇಂದು ನವಲಗುಂದ ತಾಲೂಕಿನ ಮೊರ‌ಬ ಗ್ರಾಮದಲ್ಲಿರುವ ಬೆಣ್ಣಿಹಳ್ಳ ದಾಟುವಾಗ ಓರ್ವ ವ್ಯಕ್ತಿ ಕೊಚ್ಚಿಕ್ಕೊಂಡು ಹೋಗುತ್ತದಾಗ ಸ್ಥಳಿಯ ಗ್ರಾಮಸ್ಥರು ಆತನನ್ನ ರಕ್ಷಣೆ ಮಾಡಿ ಸಮಯ ಪ್ರಜ್ಞೆ ಮೆರೆದಿದ್ದಾರೆ..ಜೊತೆಗೆ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯನ್ನು ಒಂದು ಘಂಟೆಗಳ ಕಾಲ ಸ್ಥಳಿಯರೆ ರಕ್ಷಣೆ ಮಾಡಿ ಸಾವಿನ ದವಡೆಯಿಂದ ವ್ಯಕ್ತಿಯನ್ನ ಪಾರು ಮಾಡಿದ್ದಾರೆ..
ಬೆಣ್ಣಿಹಳ್ಳದಲ್ಲಿ ಕೊಚ್ಚಿ ಹೋಗುತ್ತಿರುವ ವ್ಯಕ್ತಿಯ ರಕ್ಷಣೆ|ಧಾರವಾಡ|News 10 Karnataka ಬೆಣ್ಣಿಹಳ್ಳದಲ್ಲಿ ಕೊಚ್ಚಿ ಹೋಗುತ್ತಿರುವ ವ್ಯಕ್ತಿಯ ರಕ್ಷಣೆ|ಧಾರವಾಡ|News 10 Karnataka Reviewed by News10Karnataka Admin on August 05, 2020 Rating: 5

No comments:

Powered by Blogger.