ಹುಬ್ಬಳ್ಳಿಯಲ್ಲಿ ರೌಡಿಶೀಟರ್ ಮೇಲೆ ಗುಂಡಿನ ದಾಳಿ ನಡೆದಿದೆ ಕುಖ್ಯಾತ ರೌಡಿ ಫ್ರುಟ್ ಇರ್ಪಾನ್ ಮೇಲೆ ಫೈರಿಂಗ್ ಮಾಡಲಾಗಿದೆ , ಬೈಕ್ ಮೇಲೆ ಬಂದಿದ್ದ ಮೂವರು ವ್ಯಕ್ತಿಗಳು ಗುಂಡಿನ ಮಳೆಗೆಯ್ದು ಪರಾರಿಯಾಗಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಗಾಯಾಳು ಫ್ರೂಟ್ ಇರ್ಫಾನ್ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದು ಕೊಲೆಗಡುಕರ ಪತ್ತೆಗೆ ಬಲೆ ಬೀಸಿದ್ದಾರೆ. ಕಲಘಟಗಿ ರಸ್ತೆಯ ದುರ್ಗಾ ಬಾರ್ ಮುಂಭಾಗದಲ್ಲಿ ಘಟನೆ ನಡೆದಿದ್ದು, ಮದುವೆ ಕಾರ್ಯಕ್ರಮಕ್ಕೆಂದು ಹುಬ್ಬಳ್ಳಿಗೆ ಬಂದಿದ್ದ ಫ್ರೂಟ್ ಇರ್ಫಾನ್ ಧಾರವಾಡಕ್ಕೆ ಮರಳುತ್ತಿದ್ದಾಗ ಫೈರಿಂಗ್ ನಡೆದಿದೆ. ಕಪ್ಪು ಬಟ್ಟೆ ಧರಿಸಿದ್ದ ಮೂವರು ಹೊಂಚು ಹಾಕಿ ಕೃತ್ಯ ನಡೆಸಿದ್ದಾರೆ. ಇಬ್ಬರು ಬೈಕ್ ಮೇಲೆ ಬಂದರೆ, ಓರ್ವ ನಡೆದುಕೊಂಡು ಬಂದು ಗುಂಡಿನ ದಾಳಿ ನಡೆಸಿದ್ದಾನೆ. ಫ್ರೂಟ್ ಇರ್ಫಾನ್ ನೆಲಕ್ಕೆ ಕುಸಿಯುತ್ತಿದ್ದಂತೆ ಮೂವರು ಒಂದೇ ಬೈಕ್ನಲ್ಲಿ ಪರಾರಿಯಾಗಿದ್ದಾರೆ. ಫೈರಿಂಗ್ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಘಟನಾ ಸ್ಥಳಕ್ಕೆ ಹುಬ್ಬಳ್ಳಿ ಧಾರವಾಡ ಪೊಲೀಸ ಕಮಿಷನರ್ ಆರ್. ದಿಲೀಪ್ ಭೇಟಿ ನೀಡಿ ಪರಿಶಿಲನೆ ನಡೆಸುತ್ತಿದ್ದಾರೆ...
ನಿಂತಿದ್ದ ವ್ಯಕ್ತಿಗೆ ಗುಂಡು ಹಾರಿಸಿದ ಮೂವರು ಅಪರಿಚಿತರು|ಹುಬ್ಬಳ್ಳಿ|NEWS 10 KARNATAK
Reviewed by News10Karnataka Admin
on
August 07, 2020
Rating: 5
No comments: