.

ಸಾಹುಕಾರ ರಮೇಶ ಜಾರಕಿಹೊಳಿ ಪ್ರವಾಸಿ ಮಂದಿರದಲ್ಲಿ ಹೇಳಿದ್ದೆನು ಅಂತಿರಾ..?

ನಾಳೆ ಉತ್ತರ ಕರ್ನಾಟಕಕ್ಕೆ ಸಿ ಎಂ ಯಡಿಯೂರಪ್ಪ ಅವರು ವೈಮಾನಿಕ ಸಮೀಕ್ಷೆ ಮಾಡಲಿದ್ದಾರೆ.ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹುಣ್ಣೂರು ಪ್ರವಾಸಿ ಮಂದಿರದಲ್ಲಿ  ಸಚಿವ ರಮೇಶ ಜಾರಕಿಹೊಳಿ ಸಭೆ ನಡೆಸಿದ್ದಾರೆ. ಬಳಿಕ ಮಾದ್ಯಮದವರ ಜೊತೆ ಮಾತನಾಡಿದ ಸಚಿವರು ಬೆಳಗಾವಿ ಜಿಲ್ಲೆಯಲ್ಲಿ ನೆರೆಯಿಂದ ಈ ಬಾರಿ 972 ಕೋಟಿ ನಷ್ಟವಾಗಿದೆ, ಅದನ್ನು ಸಿ ಎಂ ಗಮನಕ್ಕೆ ತಂದು ಪರಿಹಾರ ನೀಡುತ್ತೇವೆ, ಕಳೆದ ಬಾರಿಯ ಪ್ರವಾಹದಷ್ಟು ಈ ಬಾರಿ ಹಾನಿ ಸಂಭವಿಸಿಲ್ಲ, 
ಪ್ರವಾಹವನ್ನು ಈ ಬಾರಿ ನಾವು ಸಮರ್ಥವಾಗಿ ಎದುರಿಸಿದ್ದೆವೆ, ನಿರಂತರವಾಗಿ ಮಹಾರಾಷ್ಟ್ರ,ವಿಜಯಪುರ ಅಧಿಕಾರಿಗಳ ಸಂಪರ್ಕದಿಂದ ಇದು ಸಾಧ್ಯವಾಗಿದೆ, ನಾಳೆ ಯಡಿಯೂರಪ್ಪ ಅವರು ವೈಮಾನಿಕ ಸಮೀಕ್ಷೆ ಮಾಡಲಿದ್ದಾರೆ, ಸಮೀಕ್ಷೆ ಬಳಿಕ ಪ್ರವಾಹ ಪೀಡಿತ ಜಿಲ್ಲೆಗಳ ಅಧಿಕಾರಿಗಳೊಂದಿಗೆ ಸಿ ಎಂ ಸಭೆ ಮಾಡಲಿದ್ದಾರೆ, ಪ್ರವಾಹ ಪೀಡಿತ ಜಿಲ್ಲೆಗಳ ಪರಿಸ್ಥಿತಿಯನ್ನು ಸಿ ಎಂ ಗಮನಕ್ಕೆ ತರುತ್ತೆನೆ,
ಸೂಕ್ತ ಪರಿಹಾರವನ್ನ ಕೊಡುವ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಸಾಹುಕಾರ ರಮೇಶ ಜಾರಕಿಹೊಳಿ ತಿಳಿಸಿದ್ದಾರೆ...
ಸಾಹುಕಾರ ರಮೇಶ ಜಾರಕಿಹೊಳಿ ಪ್ರವಾಸಿ ಮಂದಿರದಲ್ಲಿ ಹೇಳಿದ್ದೆನು ಅಂತಿರಾ..? ಸಾಹುಕಾರ ರಮೇಶ ಜಾರಕಿಹೊಳಿ ಪ್ರವಾಸಿ ಮಂದಿರದಲ್ಲಿ ಹೇಳಿದ್ದೆನು ಅಂತಿರಾ..? Reviewed by News10Karnataka Admin on August 24, 2020 Rating: 5

No comments:

Powered by Blogger.