.

ಸರಕಾರ ಅನ್ನದಾತರನ್ನ ರಕ್ಷಣೆ ಮಾಡಲಿ ಧಾರವಾಡ ಎಪಿಎಂಸಿ ಅದ್ಯಕ್ಷರ ಒತ್ತಾಯ..

ಹೆಸರುಕಾಳು ಖರೀದಿ ಕೇಂದ್ರ ಸ್ಥಾಪಿಸುವಂತೆ ಎಪಿಎಂಸಿ ಸದ್ಯಸರಿಂದ ಜಿಲ್ಲಾಧಿಕಾರಿ ಗಳಿಗೆ ಮನವಿ..


ಧಾರವಾಡ : ಜಿಲ್ಲೆಯಲ್ಲಿ ಹೆಸರು ಖರೀದಿ ಕೇಂದ್ರವನ್ನು ಪ್ರಾರಂಭಿಸುವಂತೆ ನಗರದ ಜಿಲ್ಲಾಧಿಕಾರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸದಸ್ಯರು ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಜಿಲ್ಲೆಯಲ್ಲಿ46283 ಹೆಕ್ಟೇರ್ ಕೃಷಿ ಭೂಮಿಯಲ್ಲಿ ಈ ಭಾರಿ ರೈತರು ಹೆಸರು ಬೆಳೆ ಬೆಳೆದಿದ್ದಾರೆ. ಈಗ ಬೆಳೆಯು ಕಟಾವಗೆ ಬಂದಿದೆ. ಸುಮಾರು 3.47 ಲಕ್ಷ ಕ್ವಿಂಟಲ್ ಬೆಳೆ ಬರುವ ನಿರೀಕ್ಷೆ ಇದೆ. ಈಗಾಗಲೇ ಕೇಂದ್ರ ಸರ್ಕಾರ 7196 ರೂಪಾಯಿ ಬೆಂಬಲ ಬೆಲೆ ಘೋಷಣೆ ಮಾಡಿದೆ. ಹಾಗಾಗಿ ಬೆಂಬಲ ಬೆಲೆಯಡ್ಡಿಯಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಜಿಲ್ಲೆಯ ತಾಲೂಕಿನ ಅಣ್ಣಿಗೇರಿ,ನವಲಗುಂದ ತಾಲೂಕಿನ ಮೊರಬ ಮತ್ತು ಹೆಬ್ಬಾಳದಲ್ಲಿ  ಹೆಸರುಕಾಳು ಖರೀದಿ ಕೇಂದ್ರವನ್ನು ಪ್ರಾರಂಭಿಸುವಂತೆ ಆಗ್ರಹಿಸಿದರು.


ಈ ವೇಳೆ ಧಾರವಾಡ ಎಪಿಎಂಸಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಸದ್ಯಸರುಗಳು ಸೇರಿದಂತೆ ಇತರರು ಇದ್ದರು.
ಸರಕಾರ ಅನ್ನದಾತರನ್ನ ರಕ್ಷಣೆ ಮಾಡಲಿ ಧಾರವಾಡ ಎಪಿಎಂಸಿ ಅದ್ಯಕ್ಷರ ಒತ್ತಾಯ.. ಸರಕಾರ ಅನ್ನದಾತರನ್ನ ರಕ್ಷಣೆ ಮಾಡಲಿ ಧಾರವಾಡ ಎಪಿಎಂಸಿ ಅದ್ಯಕ್ಷರ ಒತ್ತಾಯ.. Reviewed by News10Karnataka Admin on August 28, 2020 Rating: 5

No comments:

Powered by Blogger.