.

ಮಳೆಗೆ ಉತ್ತರ ಕರ್ನಾಟಕ ತತ್ತರ..ಎಲ್ಲೆಲ್ಲೆ ಎನೇನಾಗಿದೆ ಕಂಪ್ಲೀಟ್ ಡಿಟೇಲ್ಸ ಇಲ್ಲಿದೆ ನೋಡಿ.


ಕಳೆದ ಎರಡು ದಿನಗಳಿಂದ ಭಾರಿ ಮಳೆ ಸುರಿಯುತ್ತಿರುವ ಹಿನ್ನಲೆ ಯಿಂದ‌ ಬೆಳಗಾವಿ ನಗರದಲ್ಲಿ ಮನೆ ಕುಸಿತವಾಗಿದೆ, ಮನೆಯಲ್ಲಿ ಸಿಲುಕಿಕ್ಕೊಂಡಿರುವ ನಾಲ್ವರನ್ನ ರಕ್ಷಣೆ ಮಾಡಲಾಗಿದೆ, ನಗರದ ಮಧ್ಯಭಾಗ ಗೊಂದಳಿ ಗಲ್ಲಿಯಲ್ಲಿ ನಡೆದ ಗಟನೆ ಇದಾಗಿದ್ದು ಏಕಾಏಕಿ ಗೋಡೆ ಕುಸಿದು ಬಿಳುತ್ತಿದ್ದಂತೆ ಹೊರಗೆ ಬರಲಾರದೇ ಮನೆಯಲ್ಲಿ ಸಿಲುಕಿದ್ದ ನಾಲ್ವರನ್ನು ಅಗ್ನಿ ಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಸುರಕ್ಷಿತವಾಗಿ ರಕ್ಷಣೆ ಮಾಡಿದ್ದಾರೆ...


ಕಳೆದ ಮೂರು ದಿನದಿಂದ ಪಶ್ಚಿಮಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆ ಸುರಿದ ಹಿನ್ನಲೆಯಿಂದ‌ ಬೆಳಗಾವಿಯ ಡ‌್ಯಾಂಗಳು ಭರ್ತಿಯಾಗಿದ್ದು ನವಿಲುತೀರ್ಥ ಜಲಾಶಯದಿಂದ 10 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದೆ. ನವಿಲುತೀರ್ಥ ಜಲಾಶಯದ ನಾಲ್ಕು ಕ್ರಸ್ಟ್‌ಗೇಟ್‌ಗಳ ಮೂಲಕ ನೀರನ್ನ ಹೊರಗಡೆ ಬಿಡುಗಡೆ ಮಾಡಲಾಗುತ್ತಿದ್ದು ಕೆಲಭಾಗದ ಜನರಿಗೆ ಜಿಲ್ಲಾಡಳಿತ ಹೈ ಅಲರ್ಟ ಘೋಷಣೆ ಮಾಡಿದೆ...ನೀರು ಹೆಚ್ಚಿನ ಪ್ರಮಾಣದಲ್ಲಿ ಬಿಡುತ್ತಿರುವುದರಿಂದ  ಸವದತ್ತಿ ತಾಲೂಕಿನ ಮುನವಳ್ಳಿ ಗ್ರಾಮದ ಬಳಿಯ ಹಳೆಯ ಸೇತುವೆ ಮುಳುಗಡೆ ಯಾಗಿದೆ.ಇನ್ನು ನದಿ ತೀರಕ್ಕೆ ಯಾರೂ ತೆರಳದಂತೆ ನದಿ ಪಾತ್ರದ ಗ್ರಾಮಸ್ಥರಿಗೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ..

ಧಾರವಾಡ ಜಿಲ್ಲೆಯಾದ್ಯಂತ ಕಳೆದ ಎರಡು ದಿನದಿಂದ ಭಾರಿ ಮಳೆ ಹಿನ್ನಲೆಯಿಂದ ಅಪಾರ ಪ್ರಮಾಣದ ನೀರು ಹರಿದು ಹೊಗುತ್ತಿದೆ..ಇನ್ನು ಧಾರವಾಡ_ಸವದತ್ತಿ ಮಧ್ಯ ಇರುವ ತುಪರಿ ಹಳ್ಳ ತುಂಬಿ ಹರಿಯುತ್ತಿದೆ..ಇದರಿಂದ ಸವದತ್ತಿ_ಧಾರವಾಡ ರಾಜ್ಯ ಹೆದ್ದಾರಿ ಸಂಪರ್ಕ ಮತ್ತೆ ಕಟ್ ಆಗಿದ್ದು, ಜ‌ನರ ಸಂಚಾರಕ್ಕೆ ತುಂಬಾನೆ ತೊಂದರೆಯಾಗಿದೆ. ರೈತ ಬೆಳೆದ ಬೆಳೆಗಳು ಮಾತ್ರ ನೀರು ಪಾಲಾಗಿದೆ..ಜನರ ಜೀವನ ಅಸ್ತವ್ಯಸ್ತವಾಗಿದೆ..ಮಳೆಗೆ ಉತ್ತರ ಕರ್ನಾಟಕ ತತ್ತರ..ಎಲ್ಲೆಲ್ಲೆ ಎನೇನಾಗಿದೆ ಕಂಪ್ಲೀಟ್ ಡಿಟೇಲ್ಸ ಇಲ್ಲಿದೆ ನೋಡಿ. ಮಳೆಗೆ ಉತ್ತರ ಕರ್ನಾಟಕ ತತ್ತರ..ಎಲ್ಲೆಲ್ಲೆ ಎನೇನಾಗಿದೆ ಕಂಪ್ಲೀಟ್ ಡಿಟೇಲ್ಸ ಇಲ್ಲಿದೆ ನೋಡಿ. Reviewed by News10Karnataka Admin on August 16, 2020 Rating: 5

No comments:

Powered by Blogger.