.

ಕಾಳಸಂತೆಯಲ್ಲಿ ಯೂರಿಯಾ ಗೊಬ್ಬರ ಮಾರಾಟ, ಅಧಿಕಾರಿಗಳು ಮಾಡಿದ್ದೇನೂ..?

ರಸಗೊಬ್ಬರ ನಿಯಂತ್ರಣ ಕಾಯ್ದೆ ಉಲ್ಲಂಘನೆ:  ಮತ್ತೋರ್ವ ಮಾರಾಟಗಾರರ ಪರವಾನಗಿ ಅಮಾನತ್ತು..

ರಸಗೊಬ್ಬರ ಮಾರಾಟ ಪರವಾನಗಿ ಹೊಂದಿದ ಕೆಲವು ವಿತರಕರು ರಸಗೊಬ್ಬರ ನಿಯಂತ್ರಣ ಕಾಯ್ದೆ 1985 ರ ಉಲ್ಲಂಘನೆ ಮಾಡಿ   ರೈತರ ಹೆಸರಿಲ್ಲಿ ಅವರು  ಹೊಂದಿದ ಜಮೀನಿನ ಪ್ರಮಾಣಕ್ಕಿಂತಲೂ ಅಧಿಕ ರಸಗೊಬ್ಬರ ಮಾರಾಟ ಮಾಡಿರುವ ಅಂಶ ಕಂಡು ಬಂದ ಹಿನ್ನೆಲೆಯಲ್ಲಿ  ಧಾರವಾಡದ ಕೃಪಾ ಅಗ್ರೋ ಇಂಡಸ್ಟ್ರೀಸ್ ಕಾರ್ಪೊರೇಷನ್ ಅವರ ರಸಗೊಬ್ಬರ ವಿತರಕರ ಮಾರಾಟ ಪರವಾನಿಗೆಯನ್ನು  ತಕ್ಷಣದಿಂದಲೇ ಅಮಾನತ್ತುಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಕೆ.ಪಾಟೀಲ ತಿಳಿಸಿದ್ದಾರೆ.

ಕಾಳಸಂತೆಯಲ್ಲಿ ಯೂರಿಯಾ ಮಾರಾಟವಾಗುವುದನ್ನು ತಡೆಯಲು ಜಿಲ್ಲಾಡಳಿತ ಹಾಗೂ ಕೃಷಿ ಇಲಾಖೆಯು ರಸಗೊಬ್ಬರ  ವಿತರಕರು ,ಚಿಲ್ಲರೆ ಮಾರಾಟಗಾರರ ಮೇಲೆ ಕಣ್ಗಾವಲಿರಿಸಿದೆ. ಕೃಷಿ ಇಲಾಖೆಯ ಪರಿವೀಕ್ಷಕರ ತಂಡಗಳು ಹಾಗೂ ತಹಶಿಲ್ದಾರ್‌ಗಳು ಜಂಟಿಯಾಗಿ ಪರಿವೀಕ್ಷಣೆ ನಡೆಸಿ ಅತೀಹೆಚ್ಚು ಯೂರಿಯಾ ರಸಗೊಬ್ಬರ ಖರೀದಿಮಾಡಿದ ರೈತರನ್ನು ಗುರುತಿಸಿದೆ.ರೈತರು ಹೊಂದಿರುವ ಭೂಮಿಗಿಂತ ಹೆಚ್ಚು ಯೂರಿಯಾವನ್ನು ವಿತರಕರು ಮಾರಾಟ ಮಾಡಿದ್ದು ಕಂಡುಬಂದ ಹಿನ್ನೆಲೆಯಲ್ಲಿ  ಅಮಾನತುಗೊಳಿಸಲಾಗಿದೆ.  ನಿನ್ನೆ ಹತ್ತು ಮಾರಾಟಗಾರರ ಪರವಾನಗಿ ಅಮಾನತ್ತುಗೊಳಿಸಲಾಗಿತ್ತು.ಇಂದು ಮತ್ತೊಂದು ಪರವಾನಿಗೆ ಅಮಾನತ್ತಾಗಿದೆ

 ಕೃಷಿ ಇಲಾಖೆಯ ಪರಿವೀಕ್ಷಕರ ತಂಡ ಜಿಲ್ಲೆಯ ಎಲ್ಲ  ರಸಗೊಬ್ಬರ ಮಳಿಗೆಗಳಿಗೆ ಭೇಟಿ ನೀಡಿ ಪರಿಶೀಲಿಸುವ ಕಾರ್ಯ ಮುಂದುವರೆಸಲಿದೆ. ತಪ್ಪಿತಸ್ಥರ ವಿರುದ್ಧ ರಸಗೊಬ್ಬರ ನಿಯಂತ್ರಣ ಕಾಯ್ದೆಯಡಿ ಸೂಕ್ತ ಕಾನೂನಿನ ಕ್ರಮ ಕೈಗೊಳ್ಳಲಿದೆ .
ಕಾಳಸಂತೆಯಲ್ಲಿ ಯೂರಿಯಾ ಗೊಬ್ಬರ ಮಾರಾಟ, ಅಧಿಕಾರಿಗಳು ಮಾಡಿದ್ದೇನೂ..? ಕಾಳಸಂತೆಯಲ್ಲಿ ಯೂರಿಯಾ ಗೊಬ್ಬರ ಮಾರಾಟ, ಅಧಿಕಾರಿಗಳು ಮಾಡಿದ್ದೇನೂ..? Reviewed by News10Karnataka Admin on August 16, 2020 Rating: 5

No comments:

Powered by Blogger.