.

ಕೊರೊನಾ ಮುಕ್ತ ಧಾರವಾಡ ಅಭಿಯಾನ..


ನಗರದ ರೋಟರಿ ಕ್ಲಬ್, ಸಿವಿಲ್ ಡಿಫೆನ್ಸ್‌ ಹಾಗೂ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಇಂದು ಧಾರವಾಡದ  ಮಾರುಕಟ್ಟೆ ಪ್ರದೇಶದಲ್ಲಿ ಇ‌ಂದು ಕೊರೊನಾ ಮುಕ್ತ ಧಾರವಾಡ ಅಭಿಯಾನದ ಭಾಗವಾಗಿ ಮಾಸ್ಕ ಧರಿಸುವಿಕೆ,ಸಾಮಾಜಿಕ ಅಂತರದ ಜಾಗೃತಿ ಚಟುವಟಿಕೆಗಳು ಜರುಗಿದವು.

ಮಹಾನಗರಪಾಲಿಕೆ ವಲಯ ಸಹಾಯಕ ಆಯುಕ್ತ ಹಂಚಿನಮನಿ, ಪರಿಸರ ಇಂಜಿನಿಯರ್ ಸರೋಜಾ ಪೂಜಾರ,ಸಂಚಾರಿ ಪೊಲೀಸ್ ಠಾಣೆ ಇನ್ಸಪೆಕ್ಟರ್ ನಾಯ್ಕರ್ ಹಾಗೂ ಸಿಬ್ಬಂದಿ ಸಹಯೋಗದಲ್ಲಿ ಕಾರ್ಯಾಚರಣೆ ನಡೆಸಿ ಮಾಸ್ಕ್ ಧರಿಸಿದ ವ್ಯಕ್ತಿಗಳಿಂದ 200 ರೂ.ದಂಡ ಆಕರಿಸುವದರೊಂದಿಗೆ ಮಾಸ್ಕ್ ಗಳನ್ನೂ ಕೂಡ ವಿತರಿಸಲಾಯಿತು. ಆಟೋ ರಿಕ್ಷಾ ಹಾಗೂ ಜನನಿಬಿಡ ಸ್ಥಳಗಳಲ್ಲಿ ಪೋಸ್ಟರುಗಳನ್ನು ಅಂಟಿಸಲಾಯಿತು.

ಸಿವಿಲ್ ಡಿಫೆನ್ಸ್ ಮುಖ್ಯ ವಾರ್ಡನ್ ಡಾ.ಸತೀಶ ಇರಕಲ್, ರೋಟರಿ ಸಹಾಯಕ ಗವರ್ನರ್ ಕಿರಣ್ ಹಿರೇಮಠ ಮತ್ತಿತರರು ಇದ್ದರು.
ಕೊರೊನಾ ಮುಕ್ತ ಧಾರವಾಡ ಅಭಿಯಾನ.. ಕೊರೊನಾ ಮುಕ್ತ ಧಾರವಾಡ ಅಭಿಯಾನ.. Reviewed by News10Karnataka Admin on August 18, 2020 Rating: 5

No comments:

Powered by Blogger.