.

ಕುಂಬದ್ರೋಣ ಮಳೆಗೆ ಬೆಳಗಾವಿ ಜಿಲ್ಲೆ ತತ್ತರ..

ಕುಂಬದ್ರೋಣ ಮಳೆಯೂ ಈ ಭಾರಿಯೂ ಭಾರಿ ಅವಾಂತರವನ್ನ ಸೃಷ್ಠಿ ಮಾಡಿದೆ, ಈ ಭಾರಿನೂ ಬೆಳಗಾವಿ ಜಿಲ್ಲೆಯಾದ್ಯಂತ ಪ್ರವಾಹದ ಬೀತಿ ಎದುರಾಗಿದೆ..ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಬಳಿ ಇರುವ 
ನವಿಲು ತೀರ್ಥ ಜಲಾಶಯದಿಂದ 25ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಿದ ಹಿನ್ನಲೆ ಯಿಂದ ಮುನವಳ್ಳಿ ಪಟ್ಟಣಕ್ಕೆ ನುಗ್ಗಿದೆ ಮಲಪ್ರಭಾ ನದಿಯ ನೀರು, ಇದರಿಂದ 
ಮುನವಳ್ಳಿಯ ಯಲಿಗಾರ ಓಣಿಯ ೧೦ಕ್ಕೂ ಮನೆಗಳು, 15 ಕ್ಕೂ ಅಧಿಕ ಅಂಗಡಿಗಳು ಜಲಾವೃತವಾಗಿವೆ, 
ಇನ್ನುಸಿಂಡಿಕೇಟ್ ಬ್ಯಾಂಕ್ ಗೂ ನೀರು ನಿಗ್ಗಿ ಹಾನಿಯನ್ನ ಮಾಡಿದೆ..ಜೊತೆಗೆ ಕಳೆದ ಬಾರಿಯಷ್ಟೇ ಪ್ರವಾಹ ಎದುರಿಸಿದ್ದ ಯಲಿಗಾರ ಓಣಿಯ ಜನ ಮತ್ತೆ ಈ ಬಾರಿ ನೂ ಪ್ರವಾಹದ ಪರಿಸ್ಥಿತಿ ಎದುರಿಸಬೇಕಿದೆ..

ರಾಮದುರ್ಗ ತಾಲೂಕಿನ 20 ಕ್ಕೂ ಹಳ್ಳಿಗಳೂ ಪ್ರವಾಹದ ಪರಿಸ್ಥಿಯನ್ನ  ಎದುರಿಸುತ್ತಿವೆ, ಮತ್ತೊಂದಡೆ ಹುಕ್ಕೇರಿ ತಾಲೂಕಿನ ಹಿಡಕಲ್ ಜಲಾಶಯದಿಂದ ಕೊಟಬಾಗಿ ಗ್ರಾಮಕ್ಕೆ ನೀರು ನುಗ್ಗಿದ ಹಿನ್ನಲೆಯಿಂದ ಜನರು ಊರನ್ನ ಬಿಡುವ ಪರಿಸ್ಥಿತಿ ಎದುರಾಗಿದೆ...
ಕುಂಬದ್ರೋಣ ಮಳೆಗೆ ಬೆಳಗಾವಿ ಜಿಲ್ಲೆ ತತ್ತರ.. ಕುಂಬದ್ರೋಣ ಮಳೆಗೆ ಬೆಳಗಾವಿ ಜಿಲ್ಲೆ ತತ್ತರ.. Reviewed by News10Karnataka Admin on August 17, 2020 Rating: 5

No comments:

Powered by Blogger.