ಮಹಾಮಾರಿ ಕೊರೊನಾದಿಂದ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆಂಬ ಸುದ್ಧಿ ಹಬ್ಬಿದ ಹಿನ್ನಲ್ಲೆಯಲ್ಲಿ ಅವನ ಅಂತ್ಯಕ್ರಿಯೆಗೆ ಸೈಕಲ್ ಮೇಲೆ ಸಾಗಿಸಿದ ಅಮಾನವೀಯ ಘಟನೆಯೊಂದ ಕಿತ್ತೂರುತಾಲೂಕಿನ ಎಂ.ಕೆ.ಹುಬ್ಬಳ್ಳಿ ಪಟ್ಟಣದಲ್ಲಿ ನಡೆದಿದೆ.
ಎಂ.ಕೆ.ಹುಬ್ಬಳ್ಳಿ ಪಟ್ಟಣದ 2ನೇ ವಾರ್ಡಿನಲ್ಲಿ ಇಂತಹ ಘಟನೆ ನಡೆದಿದ್ದು ಸಂಬಂಧಿಸಿದ ಇಲಾಖೆಯ ವಿರುದ್ಧ ಸ್ಥಳಿಯರು ಆಕ್ರೋಷ ವ್ಯಕ್ತಪಡಿಸಿದ್ದಾರೆ,
ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ಧನೋರ್ವನು ಚಿಕಿತ್ಸೆಗೆಂದು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ತೆರಳಿದ್ದ ಅಲ್ಲದೆ ಅಲ್ಲಿ ಚಿಕಿತ್ಸೆಯನ್ನು ಪಡೆದುಕೊಂಡಿದ್ದ. ನಂತರ ಈ ವೃದ್ಧನಿಗೆ ಕೊರೋನ ಸೊಂಕಿನ ಗುಣಲಕ್ಷಣಗಳಿದ್ದು ತಪಾಸಣೆ ಮಾಡಿಸುವಂತೆ ಅಲ್ಲಿಯ ವೈಧ್ಯರು ಸೂಚಿಸಿದ್ದರು.
ಇದರಿಂದ ಆ ವ್ಯಕ್ತಿ ಆಂತಕಕ್ಕೊಳಗಾಗಿ ವೃದ್ಧ ಮನೆಗೆ ಬಂದಿದ್ದ ನಂತರ ಈ ವೃದ್ಧ ಮೃತಪಟ್ಟಿದ್ದಾನೆ. ಆದರೆ ಈ ವೃದ್ಧನಿಗೆ ಕೊರೊನಾ ಸೊಂಕು ತಗುಲಿದೆಯೋ ಅಥವಾ ಇಲ್ಲವೋ ಎನ್ನುವುದು ಯಾರೊಬ್ಬರಿಗೂ ಖಚಿತವಾಗಿಲ್ಲ. ಪರಿಣಾಮ ಈ ವೃದ್ದ ಮೃತ ಪಟ್ಟ ನಂತರ ಕೊರೊನಾ ಸೊಂಕಿನ ಆತಂಕದಿಂದ ಯಾರೊಬ್ಬರು ಸಮೀಪ ಬರಲಿಲ್ಲ.ಈ ಕುರಿತು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೂ ತಿಳಿಸಿದರೂ ಸಹ ಸ್ಪಂದಿಸಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಅಲ್ಲದೆ, ವೃದ್ಧನಲ್ಲಿ ಕೊರೊನಾ ಸೊಂಕು ದೃಡಪಡದಿದ್ದರೂ ಪಟ್ಟಣದಲ್ಲೆಡೆ ವೃದ್ಧ ಕೊರೊನಾದಿಂದ ಮೃತಪಟ್ಟಿದ್ದಾನೆಂಬ ಸುದ್ಧಿ ಹಬ್ಬಿದ್ದರಿಂದ ಶವ ಸಂಸ್ಕಾರಕ್ಕೆ ಸಾರ್ವಜನಿಕರಾಗಲಿ ಹಾಗೂ ಖಾಸಗಿ ವಾಹನಗಳಾಗಲಿ ಬರಲಿಲ್ಲ, ಅನಿವಾರ್ಯವಾಗಿ ಮನೆಯಲ್ಲಿಯೇ ಶವ ಇಟ್ಟುಕೊಂಡು ಕುಟುಂಬಸ್ಥರು ಕಣ್ಣಿರು ಹಾಕುವ ಪರಿಸ್ಥಿತಿ ಸೃಷ್ಠಿಯಾಯಿತು.
ಈ ಬಗ್ಗೆ ಸಂಬಂಧಿಸಿದ ಇಲಾಖೆಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗದ್ದರಿಂದ ಬೇಸತ್ತ ಸ್ಥಳಿಯರು ಹಾಗೂ ಕುಟುಂಬಸ್ಥರು ಸೈಕಲ್ ಮೇಲೆ ವೃದ್ಧನ ಶವವಿಟ್ಟುಕೊಂಡು ಧಾರಕಾರವಾಗಿ ಸುರಿಯುತ್ತಿರುವ ಮಳೆಯಲ್ಲಿಯೇ ಸ್ಮಶಾನದತ್ತ ಹೆಜ್ಜೆ ಹಾಕಿದ್ದಾರೆ...
ಕೊರೊನಾ ಎಂದು ಭಾವಿಸಿ ಅಂತ್ಯಕ್ರಿಯೇಗೆ ಬಾರದ ಜನ ಎಲ್ಲಿ ಹೊಯ್ತು ಮಾನವೀಯತೆ..?
Reviewed by News10Karnataka Admin
on
August 16, 2020
Rating:

No comments: