.

ಮಳೆರಾಯನ ಆರ್ಭಟಕ್ಕೆ ಕುಂದಾನಗರಿ ಬೆಳಗಾವಿ ತತ್ತರ, ದ್ರೋಣ ಕ್ಯಾಮರಾದಲ್ಲಿ ಪ್ರವಾಹದ ಚಿತ್ರಣ.

ಮಳೆರಾಯನ  ಕೋಪ ಇನ್ನು ಕಡಿಮೆ ಆಗಿಲ್ಲ ಅನ್ಸುತ್ತೆ, ಮಳೆಗೆ ಗಡಿ ಜಿಲ್ಲೆ ಬೆಳಗಾವಿ ತತ್ತರಿಸಿ ಹೋಗಿದೆ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಹಲವೆಡೆ ಮನೆಗಳು ಕುಸಿದಿವೆ, ನದಿಗಳು ಉಕ್ಕಿ ಹರಿಯುತ್ತಿವೆ, ಇದರಿಂದಾಗಿ ಹಲವು ಹಳ್ಳಿಗಳು , ಸೇತುವೆಗಳು, ರಸ್ತೆಗಳು ಜಲಾವೃತವಾಗಿದ್ದು ಸಂಪರ್ಕ ಕಡಿದುಕೊಂಡಿವೆ,

ಹೀಗೆ ನಿರ್ಗತಿಕರಾಗಿ‌ ನಿಂತಿರೋ ಜನರು, ಮತ್ತೊಂದಡೆ‌ ನಮಗೆ ಪರಿಹಾರ‌ ಕೊಡಿ‌ ಎಂದು ಶಾಸಕರನ್ನ ತರಾಡಗೆ ತೆಗೆದುಕ್ಕೊಳ್ಳುತ್ತಿರುವ ನೆರೆ ಸಂತ್ರಸ್ಥರು, ಹೌದು ಇವೆಲ್ಲ ಕಂಡುಬಂದಿದ್ದು  ಬೆಳಗಾವಿ ಜಿಲ್ಲೆಯಲ್ಲಿ ಮಳೆರಾಯನ ರುದ್ರನರ್ತನಕ್ಕೆ ಕುಂದಾನಗರಿ ಇಗ ಅಕ್ಷರಶಹ ನಡುಗಿ ಹೋಗಿದೆ, ಸಧ್ಯ ಜಿಲ್ಲೆಯಲ್ಲಿ ಕೃಷ್ಣೆ, ಘಟಪ್ರಭಾ, ಮಲಪ್ರಭೆಯ ಅವತಾರಕ್ಕೆ ಜನರು ತಮ್ಮ ತಮ್ಮ ಸೂರುಗಳನ್ನ ಕಳೆದುಕ್ಕೊಂಡಂತಾಗಿದೆ..ಇತ್ತ ಮಳೆಗೆ ಗೋಕಾಕ ಪಟ್ಟಣ, ರಾಮದುರ್ಗ ತಾಲೂಕಿನ 20 ಹಳ್ಳಿಗಳು ಪ್ರವಾಹಕ್ಕೆ ಅಕ್ಷರಶಹ ನಡುಗಿ ಹೋಗಿವೆ‌‌.. ಗ್ರಾಮಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಕೃಷಿ ಭೂಮಿ ಜಲಾವೃತಗೊಂಡಿದೆ. ನೀರು ನುಗ್ಗಿದ್ದರಿಂದ ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈಗಾಗಲೇ ರೈತರ ಬೆಳೆಗಳಾದ ಹೆಸರು, ಉದ್ದು, ತೊಗರಿ, ಮುಸುಕಿನ ಜೋಳ ಸೇರಿದಂತೆ ಹಲವು ತೋಟಗಾರಿಕೆ ಬೆಳೆಗಳು ನಾಶವಾಗಿ ಸಾವಿರಾರು ಎಕರೆ ಕೃಷಿ ಭೂಮಿ ಮುಳುಗಡೆಯಾಗಿದೆ. ಇನ್ನು ಜಲ ಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಸ್ವಕ್ಷೇತ್ರಕ್ಕೂ ಜಲ ಕಂಟಕ ವ್ಯಾಪಿಸಿದ್ದು ಗೋಕಾಕ ತಾಲೂಕಿನ ಹಲವು ಗ್ರಾಮಗಳು ಮುಳುಗಡೆ ಆಗಿವೆ ಇನ್ನು ಅಥಣಿ, ಚಿಕ್ಕೋಡಿ, ಖಾನಾಪುರ, ಬೈಲಹೊಂಗಲ, ಕಿತ್ತೂರು, ಸವದತ್ತಿ ತಾಲೂಕುಗಳು ಪ್ರವಾಹದ ಬೀತಿಯನ್ನ ಎದುರಿಸುತ್ತಿವೆ..

ಇನ್ನು ಚಿಕ್ಕೋಡಿ, ಗೋಕಾಕ, ರಾಮದುರ್ಗ ಪ್ರದೇಶಗಳಲ್ಲಿ ಜನರಿಗೆ ಮತ್ತೆ ಭೀಕರ ಪ್ರವಾಹದ ಭೀತಿ ಎದುರಾಗಿದೆ. ಹಲವು ಹಳ್ಳಿಗಳು , ಸೇತುವೆಗಳು, ರಸ್ತೆಗಳು ಜಲಾವೃತವಾಗಿದ್ದು ಸಂಪರ್ಕಗಳು ಕಡಿದುಕೊಂಡಿವೆ.  ಇದಲ್ಲದೇ ರಸ್ತೆ ಪಕ್ಕದ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಕೃಷಿ ಭೂಮಿ ಕೂಡ ಜಲಾವೃತವಾಗಿದೆ. ಈ ಗಡಿ ಜಿಲ್ಲೆಗೆ ಮತ್ತೆ ಪ್ರವಾಹದ ಭೀತಿ ಎದುರಾಗಿದೆ. ಈ ಸಂಬಂಧ ಮಾತನಾಡಿದ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ನಾವು ಮಹಾರಾಷ್ಟ್ರ ರಾಜ್ಯದ ಸತಾರ  ಜಿಲ್ಲಾಧಿಕಾರಿ ಜೊತೆಗೆ  ನಿರಂತರ ಸಂಪರ್ಕದಲ್ಲಿದ್ದೇವೆ. ಕ್ಷಣ ಕ್ಷಣದ ಮಾಹಿತಿಯನ್ನು ಪಡೆಯುತ್ತಿದ್ದೇವೆ. ಕೊಯ್ನಾದಿಂದ 56 ಸಾವಿರ ಕ್ಯೂಸೆಕ ನೀರು ಬಿಡಲಾಗಿದೆ. ಇನ್ನೂ ಚಿಕ್ಕೋಡಿ ತಾಲೂಕಿನ  ಕಲ್ಳೊಳ ಬಳಿ ಕೃಷ್ಣಾ ನದಿಗೆ 1 ಲಕ್ಷ 58 ಸಾವಿರ ಕ್ಯೂಸಕ ನೀರು ಬರುತಿದೆ. ಮುಂಜಾಗ್ರತವಾಗಿ ಚಿಕ್ಕೋಡಿ ಮತ್ತು ಅಥಣಿ ತಾಲೂಕಿನ ತೋಟದ ಜನರಿಗೆ ಸ್ಥಳಾಂತರ ಮಾಡಲಾಗಿದೆ. ಚಿಕ್ಕೋಡಿ ಯಲ್ಲಿ 1 ಎನ್ ಡಿ ಆರ್ ಎಫ್ ತಂಡ ಇದೆ. ಮುಂಜಾಗ್ರತವಾಗಿ ಧಾರವಾಡ ದಿಂದ ಒಂದು ತಂಡ ಬೆಳಗಾವಿಗೆ ಕರೆಸಲಾಗಿದೆ. ರಾಮದುರ್ಗ ತಾಲೂಕಿನಲ್ಲಿ ಸುಮಾರು 100 ಕುಟುಂಬಗಳನ್ನು ಕಾಳಜಿ ಕೇಂದ್ರಕೆ ಸ್ಥಳಾಂತರ ಮಾಡಿದ್ದೇವೆ. ಕಳೆದ ವರ್ಷ ಪ್ರವಾಹ ಎದುರಿಸಿದ ಅನುಭವ ಇದೆ ಆ ಕಾರಣಕ್ಕೆ ಯಾವುದೇ ರೀತಿಯ ತೊಂದರೆ ಇಲ್ಲ. ಮುಂಜಾಗ್ರತವಾಗಿ ಜಿಲ್ಲಾ ಆಡಳಿತ ಸಕಲ ಸಿದ್ದತೆ ಮಾಡಿ ಕೊಂಡಿದೆ. ನದಿ ತೀರದ ಜನರು ಯಾವುದೇ ಭಯ ಪಡೆಯುವ ಅಗತ್ಯ ಇಲ್ಲ ಎಲ್ಲರಿಗೂ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡುವ ಸಿದ್ಧತೆ ಜಲ್ಲಾ ಆಡಳಿತ ಮಾಡಿದೆ ಎಂದು ಎಂ.ಜಿ.ಹಿರೇಮಠ ತಿಳಿಸಿದ್ದಾರೆ..


ಬೆಳಗಾವಿ ಜಿಲ್ಲೆಯ ಬಹುತೇಕ ಎಲ್ಲಾ ನದಿಗಳು, ಉಪ ನದಿಗಳು, ಅಪಾಯದ ಮಟ್ಟ ಮೀರಿ ಹರಿಯುತ್ತಿದೆ, ಹಳ್ಳ ಕೊಳ್ಳಗಳು ನದಿಯ ಸ್ವರೂಪ ಪಡೆಯುತ್ತಿದ್ದು ಇದಕ್ಕೆ ಜಿಲ್ಲಾಡಳಿತ ಯಾವ ರೀತಿ ನಿಭಾಯಿಸುತ್ತೆ ಕಾದು ನೋಡಬೇಕು..
ಮಳೆರಾಯನ ಆರ್ಭಟಕ್ಕೆ ಕುಂದಾನಗರಿ ಬೆಳಗಾವಿ ತತ್ತರ, ದ್ರೋಣ ಕ್ಯಾಮರಾದಲ್ಲಿ ಪ್ರವಾಹದ ಚಿತ್ರಣ. ಮಳೆರಾಯನ ಆರ್ಭಟಕ್ಕೆ ಕುಂದಾನಗರಿ ಬೆಳಗಾವಿ ತತ್ತರ, ದ್ರೋಣ ಕ್ಯಾಮರಾದಲ್ಲಿ ಪ್ರವಾಹದ ಚಿತ್ರಣ. Reviewed by News10Karnataka Admin on August 19, 2020 Rating: 5

No comments:

Powered by Blogger.