ಯೂರಿಯಾ ಗೊಬ್ಬರಕ್ಕೆ ಸುತ್ತಮುತ್ತಲಿನ ಗ್ರಾಮಗಳ ರೈತರು ಸರದಿ ಸಾಲಿನಲ್ಲಿ ನಿಂತು ಕೂಪನ್ ಪಡೆದು ಕ್ಕೊಂಡಿದ್ದರು ಆದರೆ ಗೊಬ್ಬರದ ರಶೀದಿ ಮಾತ್ರ ಹರಿದಿರಲಿಲ್ಲ ಹಾಗೂ ಗೊಬ್ಬರ ಬಂದ ಮೇಲೆ ನಿಮಗೆ ನೀಡಿದ ಕೂಪನ್
ಪ್ರಕಾರ ಬಿಲ್ ಪಾವತಿ ಮಾಡಿ ನಂತರ ಅವರಿಗೆ ಪಟ್ಟಣದ ದ್ಯಾಮವ್ವನ ಗುಡಿ ಓಣಿಯಲ್ಲಿರುವ ಗೊಬ್ಬರದ ಗುದಾಮಿಗೆ ಆಗ್ರೋ ಅಂಗಡಿಯವರು ಕಳುಹಿಸಿದ್ದಾರೆ. ಇದರಿಂದ ಎರಡು ಬಾರಿ ರೈತರು ಸರದಿಯಲ್ಲಿ ನಿಂತು ಹಣ ಮತ್ತು ರಶೀದಿ ಪಡೆದಿದ್ದಲ್ಲದೇ ಮತ್ತೆ ಗೊಬ್ಬರ ಪಡೆಯಲು ಗೋದಾಮಿನ ಮುಂದೆ ಮತ್ತೊಂದು ಸರದಿ ಹಚ್ಚಬೇಕು.
ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದಲ್ಲಿ ಇಂದು ಸಂಜೆ ಗೊಬ್ಬರಕ್ಕಾಗಿ ನಿಂತುನಿಂತು ಬೆಳವಟಗಿ ಗ್ರಾಮದ ರೈತರು ಮತ್ತು ನವಲಗುಂದ ಪಟ್ಟಣದ ಹಳ್ಳದ ಓಣಿಯ ಕೆಲವೊಂದಿಷ್ಟು ರೈತರು ಸರದಿ ಸಾಲಿನಲ್ಲಿ ನಿಂತಾಗ ಒಬ್ಬರ ಮೇಲೆ ಮತ್ತೊಬ್ಬರು ಮುಗಿಬಿದ್ದಿದ್ದರಿಂದ ತಮ್ಮ ತಮ್ಮಲ್ಲಿಯೇ ಜಗಳವುಂಟಾಗಿ ಬೆಳವಟಗಿ ಗ್ರಾಮದ ರೈತನನ್ನು ಹಿಗ್ಗಾ ಮುಗ್ಗಾ ಥಳಿಸಿದ್ದಾರೆ ಸದರಿ ಗೊಬ್ಬರದ ಗೋದಾಮು ಮಾಲತೇಶ ಆಗ್ರೋ ಸೆಂಟರ್ ಹೆಸರಿಗೆ ಸೇರಿದ್ದು, ಇವರು ಪೊಲೀಸ್ರಿಗೆ ಯಾವುದೇ ಮಾಹಿತಿಯನ್ನು ತಿಳಿಸದೇ ಇದ್ದದ್ದಕಾಗಿ ಈ ಅವಘಡ ಸಂಭವಿಸಿದೆ ಹಾಗೂ ಗೊಬ್ಬರ ಒಯ್ಯಲು ನೂರಾರು ಸಂಖ್ಯೆಯಲ್ಲಿ ರೈತರು ಹಾಗೂ ಅವರುಗಳ ವಾಹನಗಳು ಜಮಾಯಿಸಿದ್ದವು. ಇದರಿಂದ ಉದ್ರಿಕ್ತ ಪರಿಸ್ಥಿತಿ ಉಂಟಾಗಿತ್ತು..
ರೈತರು ಪರಸ್ಪರ ಗೊಬ್ಬರಕ್ಕೆ ಬಡದಾಡುವಂತಹ ಪರಿಸ್ಥಿತಿಯಾಗಿದೆ. ಇದರಲ್ಲಿ ರೈತರಿಗೆ ಏನಾದರೂ ಪ್ರಾಣಿ ಹಾನಿಯಾದರೆ ಯಾರು ಹೊಣೆ? ನಂತರ ಸ್ಥಳೀಯ ರೈತರೆ ಅವರನ್ನು ಸಮಾಧಾನ ಪಡಿಸಿದ್ದಾರೆ ಎಂದು ಸ್ಥಳೀಯ ರೈತರು ಆರೋಪಿಸಿದ್ದಾರೆ
ಯೂರಿಯಾ ಗೊಬ್ಬರಕ್ಕಾಗಿ ರೈತರು ಮಾಡಿಕ್ಕೊಂಡಿದ್ದೆನೂ..ಇಲ್ಲಿದೆ ಡಿಟೇಲ್ಸ್.....
Reviewed by News10Karnataka Admin
on
August 15, 2020
Rating:

No comments: