.

ಆಪ್ತಮಿತ್ರ ನನ್ನ ನೆನೆದು ಗೋಕಾಕ ಸಾಹುಕಾರ ಕಣ್ಣೀರಿಟ್ಟಿದ್ದೇಕೆ...

ಸಾಮಾನ್ಯವಾಗಿ ಸಾವು ಎಲ್ಲರಿಗೂ ಬರುತ್ತೆ , ಆದರೆ ಅದೆ ಸಾವು ಬಂದಾಗ ಒಬ್ಬರಿಗೊಬ್ಬರು ಕಣ್ಣಿರು ಇಡುವ ಪರಿಸ್ಥಿತಿ ಯನ್ನ ನೋಡಿದರೆ ನಿಜವಾಗಲೂ ತುಂಬಾನೆ ಬೇಜಾರಾಗುತ್ತೆ, ಹೌದು ಬೆಳಗಾವಿ ಜಿಲ್ಲೆಯ ಗೋಕಾಕ ಸಾಹುಕಾರ, ರಮೇಶ ಜಾರಕಿಹೊಳಿ ಅವರು ತಮ್ಮ‌ ಬಾಲ್ಯದ ಗೆಳೆಯ ರಮೇಶ ಜಾರಕಿಹೊಳಿ ಅವರನ್ನ ನೆನೆದು ಕಣ್ಣೀರು ಹಾಕಿದ್ದಾರೆ...

ಬೆಳಗಾವಿ ಎಂದಾಕ್ಷಣ ನೆನಪಾಗುದ್ದೆ ಸಾಹುಕಾರ ಎಂಬ ಪದ ಅದೆ ಸಾಹುಕಾರನ ಬಲಗೈ ಬಂಟನಾಗಿದ್ದ ಎಸ್ ಎ ಕೊತ್ವಾಲ್ ಗೌಡರು ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ, ತಮ್ಮ‌ ಬಾಲ್ಯದ ಗೆಳೆಯ ಕೊತ್ವಾಲ್ ಸಾವನ್ನಪ್ಪಿರುವ ಘಟನೆಯನ್ನ ನೆನೆದು ಸಾಹುಕಾರ್ ರಮೇಶ ಜಾರಕಿಹೊಳಿ ಅವರು ಗಳಗಳನೆ ಅತ್ತಿದ್ದಾರೆ..ಇನ್ನು ಸಂಜೆ ಸ್ವಗ್ರಾಮಕ್ಕೆ ಕೊತ್ವಾಲ್ ಅವರ ಮೃತ ದೇಹ ಗೋಕಾಕ ಗೆ ಆಗಮಿಸುತ್ತಿದ್ದಂತೆ ಇಡಿ ಗೋಕಾಕ ಪಟ್ಟಣವೇ ಕಂಬನಿ ಮಿಡಿದಿತ್ತು...ಪ್ರತಿ ಚುಣಾವಣೆಯಲ್ಲಿ ರಮೇಶ ಜಾರಕಿಹೊಳಿ ಅವರಿಗೆ   ಬೆನ್ನಲುಬಾಗಿ ನಿಲ್ಲುತ್ತಿದ್ದ ಕೊತ್ವಾಲ್ ಆದ್ರೆ ಇಂದು ಕೊತ್ವಾಲ್ ಅವರನ್ನ ನೆನೆದು ಇಡಿ  ಗೋಕಾಕ ಪಟ್ಟಣವೇ ಕಣ್ಣಿರು ಇಡುತ್ತಿತ್ತು..ಮತ್ತೊಂದಡೆ ಸಾಹುಕಾರನಿಗೆ ತನ್ನ ಜೀವದ ಕುಚುಕು ಗೆಳೆಯನನ್ನ ಕಳೆದುಕ್ಕೊಂಡು ಕಣ್ಣಿರು ಹಾಕಿದ್ದಾರೆ...

ಇನ್ನು ಕೊತ್ವಾಲ್ ಇಡಿ ಗೋಕಾಕ ನಲ್ಲಿ ಚಿರಪರಿಚಿತ ಮತ್ತು ಗೋಕಾಕ ನಗರಸಭೆಯ ಸದಸ್ಯನಾಗಿ 6 ಭಾರಿ ಆಯ್ಕೆ ಆಗಿ ಹಲವಾರು ಅಭಿವೃದ್ಧಿ ಕೆಲಸಗಳನ್ನ ಮಾಡುವುದರ ಹೆಸರು ವಾಸಿಯಾಗಿದ್ದರು...ಇಂದು ಕೊತ್ವಾಲ್ ಅವರನ್ನ ನೆನೆದು ಇಡಿ ಗೋಕಾಕ ಪಟ್ಟಣ ಕಣ್ಣೀರು ಇಡುತ್ತಿದೆ...ಇನ್ನ ಮುಂದೆ ಸಾಹುಕಾರ ರಮೇಶ ಜಾರಕಿಹೊಳಿ ಮತ್ತು ಗೋಕಾಕ ಜನರಿಗೆ ಕೊತ್ವಾಲ್ ನೆನಪು ಮಾತ್ರ...
ಆಪ್ತಮಿತ್ರ ನನ್ನ ನೆನೆದು ಗೋಕಾಕ ಸಾಹುಕಾರ ಕಣ್ಣೀರಿಟ್ಟಿದ್ದೇಕೆ... ಆಪ್ತಮಿತ್ರ ನನ್ನ ನೆನೆದು ಗೋಕಾಕ  ಸಾಹುಕಾರ ಕಣ್ಣೀರಿಟ್ಟಿದ್ದೇಕೆ... Reviewed by News10Karnataka Admin on August 09, 2020 Rating: 5

No comments:

Powered by Blogger.