.

ಕೊಪ್ಪಳದ ಆಧುನಿಕ ಶಹಜಾಹನ್,ಜಗತ್ತಿನಲ್ಲಿ ಪ್ರೀತಿಗೆ ಅದರದ್ದೇ ಆದ ಪ್ರಾಮುಖ್ಯತೆ ಇದೆ, ಪ್ರೀತಿ ಇದ್ದರೆ ಜಗವೆಲ್ಲ ,ಪ್ರೀತಿ ಇಲ್ಲದೆ ಏನಿಲ್ಲ ಅಂತ ಕೇಳಿದ್ದೇವೆ, ಅಂತಹ ಪ್ರೀತಿಗೆ ಶರಣಾದೊರೆ ಇಲ್ಲ, ಜಗತ್ತಿನಲ್ಲಿ ಪ್ರೀತಿಯ ಸಂಕೇತ ನಮ್ಮ ತಾಜ್ ಮಹಲ್ ಎಂದು ಹೇಳುತ್ತೇವೆ, ಶಹಜಹಾನ್ ತನ್ನ ಪ್ರೀತಿಯ ಮಡದಿಗಾಗಿ ಅವಳ ನೆನೆಪಿಗಾಗಿ ತಾಜ್ ಮಹಲ್ ಕಟ್ಟಿ ಇಡೀ ವಿಶ್ವಕ್ಕೆ ಪ್ರೀತಿ ಅಂದ್ರೆ ಏನು ಎಂದು ಹೇಳಿಕೊಟ್ಟ,ಅಂತದ್ದೇ ಪ್ರೀತಿಯ ಸಂಕೇತವಾಗಿ ಇಲ್ಲೊಬ್ಬ ಉದ್ದಿಮೆದಾರರೊಬ್ಬರು ತಮ್ಮಿಂದ ಅಗಲಿಹೋದ ಪತ್ನಿಯ ನೆನಪಿಗಾಗಿ ಎನು ಮಾಡಿದ್ದಾರಾ ಗೊತ್ತಾ...ಈ ಸ್ಟೋರಿ ನೋಡಿದ್ರೆ ನೀವು ದಂಗಾಗ್ತಿರಾ,


ಹೀಗೆ ಕುಳಿತು ಕ್ಕೊಂಡಿರುವ ವಿಡಿಯೋವನ್ನ ನಿವೊಮ್ಮೆ ಕಣ್ಣು ಪಿಳಕಿಸದೆ ನೋಡಿ ಬೀಡಿ, ಯಾಕೇಂದ್ರೆ ಅವರು , ಅವರು ಕುಳಿತುಕ್ಕೊಂಡು ರೀತಿಯನ್ನ ನೋಡಿದ್ರೆ ಇವರೆನೂ   ಜಿವಂತ ಇದಾರಾ, ಅಥವಾ ಇಲ್ವಾ ಅನ್ನೋ ಗೊಂದಲಕ್ಕೆ‌ ನಾವು ಒಳಗಾಗೋದು ಗ್ಯಾರಂಟಿ,.. ಹೌದು ಕೊಪ್ಪಳದ ಭಾಗ್ಯನಗರದ ಉದ್ಯಮಿಯಾದ  ಶ್ರೀನಿವಾಸ್ ಗುಪ್ತಾ ಜಿಲ್ಲೆಯ ಪ್ರಖ್ಯಾತ ಉದ್ಯಮಿ ಜಿಲ್ಲೆಗೆ ಉದ್ಯಮವನ್ನ ಪರಿಚಯಿಸಿದ ಖ್ಯಾತಿ ಶ್ರೀನಿವಾಸ್ ಗುಪ್ತಾರವರಿಗೆ ಸಲ್ಲುತ್ತದೆ ಶ್ರೀನಿವಾಸ್ ಗುಪ್ತಾರವರು ಅತಿ ಹೆಚ್ಚು ಪ್ರೀತಿಮಾಡುತ್ತಿದ್ದ ತಮ್ಮ ಮಡದಿ ಮಾದವಿ ಎಂಬುವರನ್ನ ಕಳೆದಯಕೊಳ್ಳುತ್ತಾರೆ. ಕಳೆದ ಮೂರು ವರ್ಷಗಳ ಹಿಂದೇ ರಸ್ತೇ ಅಪಘಾತ ದಲ್ಲಿ ಶ್ರೀನಿವಾಸ್ ಗುಪ್ತಾರವರು ತಮ್ಮ ಧರ್ಮ ಪತ್ನಿಯನ್ನ ಕಳೆದುಕೊಳ್ಳುತ್ತಾರೆ.ಪತ್ನಿಯ ಅಗಲಿಕೆತಿಂದ ದುಃಖದಲ್ಲಿದ್ದ ಗುಪ್ತಾರವರು  ತಮ್ಮ ಧರ್ಮಪತ್ನಿದ ಮಹದಾಸೆಯಂತೆ ತಮ್ಮ ಗುಪ್ತಾ ಅಪಾರ್ಟ್ಮೆಂಟ್ ನಲ್ಲಿ ಮನೆ ಕಟ್ಟಿದ್ದರು ತಮ್ಮ ಮನೆ ದೇವರಾದ  ತಿರುಪತಿ ತಿಮ್ಮಪ್ಪನ ದರ್ಶನಕ್ಕೆ‌ಹೋದಾಗ ರಸ್ತೇ ಅಪಘಾತ ದಲ್ಲಿ ಗುಪ್ತಾರವರು ತಮ್ಮ ಧರ್ಮಪತ್ನಿಯನ್ನ ಕಳೆದುಕೊಳ್ಳುತ್ತಾರೆ.
ಮನೆಯಲ್ಲಿ ಪತ್ನಿಯೆ ಇಲ್ಲದೆ ಹೋದ್ರೆ ಹೇಗೆ  ಎಂದು ಯೋಚಿಸಿದ ಗುಪ್ತಾರವರು ತಮ್ಮ ಪತ್ನಿಯ ಮೂರ್ತಿ ನಿರ್ಮಾಣ ಮಾಡಬೇಕು ಎಂದು ಯೋಚಿಸಿದಾಗ,ತಮ್ಮ ಆಪ್ತರಲ್ಲಿ ಈ ವಿಷಯ ಹೇಳಿಕೊಂಡಾಗ,ವ್ಯಾಕ್ಸ ಮೂರ್ತಿ ಮಾಡಿಸಬಹುದು ಎಂದು ಸಲಹೆ ಪಡೆದ ಶ್ರೀನಿವಾಸ್ ಗುಪ್ತಾರವರು.ವ್ಯಾಕ್ಸ ಮೂರ್ತಿ ನಿರ್ಮಿಸುವ ಬೆಂಗಳೂರಿನ ಗೊಂಬೆ ಮನೆ ,ಶ್ರೀನಿವಾಸ್ ಗುಪ್ತಾರವರ ಆಶೆಯದಂತೆ ತದ್ರೂಪಿ ಅವರ ಧರ್ಮಪತ್ನಿಯಂತೆ ಮೂರ್ತಿ ಮೂಡಿಬಂದಿದ್ದು ತಮ್ಮ ಮನೆಯ ಗೃಹಪ್ರವೇಶಕ್ಕೆ ತಮ್ಮ ಪತ್ನಿಯನ್ನ ಕರೆದುಕೊಂಡು ಬಂದು ಗೃಹ ಪ್ರವೇಶ ನಿರ್ವಹಿಸಿದ್ದಾರೆ ಗುಪ್ತಾರವರ ಗೃಹ ಪ್ರವೇಶಕ್ಕೆ ಬಂದ ಪ್ರತಿಯೊಬ್ಬರು ಅಮ್ಮಾ ಮಾದವಿ ರವರೆ ಮನೆಗೆ ಬಂದಿದ್ದಾರೆ ಎಂದು ಹೇಳುತ್ತಿದ್ದರು.ಒಟ್ಟಿನಲ್ಲಿ ಗುಪ್ತಾ ಅವರು ಪುತ್ತಳಿ ನಿರ್ಮಾಣಿಸಿ ಸ್ವತಃ ಜೀವಂತ ಗುಪ್ತಾರವರ ಪತ್ನಿ ರವರೆ ಬಂದು ಕೂತಂಗೆ ಕಾಣುತ್ತಿತ್ತು,ಮುಟ್ಟಿದ್ರೆ ಜೀವಂತ ಮನುಷ್ಯರಿಗೆ ಮುಟ್ಟಿದಂಗೆ ಭಾಸವಾಗುವ ರೀತಿಯಲ್ಲಿ ಮೂರ್ತಿ ನಿರ್ಮಾಣವಾಗಿತ್ತು ಪತ್ನಿಯನ್ನು ಕಳೆದುಕೊಂಡ ದುಃಖತಪ್ತರಾಗಿದ್ದ ಗುಪ್ತಾರವರು ತಮ್ಮ ಪತ್ನಿಯನ್ನೆ ಮನೆಗೆ ಕರೆದಯಕೊಂಡು ಬಂದು ಗೃಹ ಪ್ರವೇಶ ಮಾಡಿದಂಗಿದೆ...ಇನ್ನು‌ ಕೊಪ್ಪಳ ಜಿಲ್ಲೆಯಾದ್ಯಂತ ಶ್ರಿನಿವಾಸ ಗುಪ್ತಾ ಅವರನ್ನ ಆಧುನಿಕ ಶಹಜಾಹನಗ ಎಂದು ಹೆದರು ವಾಸಿಯಾಗಿದ್ದಾರೆ..
ಕೊಪ್ಪಳದ ಆಧುನಿಕ ಶಹಜಾಹನ್, ಕೊಪ್ಪಳದ ಆಧುನಿಕ ಶಹಜಾಹನ್, Reviewed by News10Karnataka Admin on August 11, 2020 Rating: 5

No comments:

Powered by Blogger.