ಸಾರ್ವಜನಿಕ ಗಣಪತಿ ಕೂಡಿಸಲು ಸರಕಾರ ಅನುಮತಿ ಕೊಡಬೇಕು ಎಂದು ಶ್ರಿರಾಮ ಸೇನಾ ಸಂಸ್ಥಾಪಕ ಪ್ರಮೋದ ಮುತಾಲಿಕ ಸರಕಾರಕ್ಕೆ 24 ಗಂಟೆ ಗಡುವು ಕೊಟ್ಟಿದ್ದಾರೆ..ಇಂದು ಧಾರವಾಡದಲ್ಲಿ ಜಿಲ್ಲಾಧಿಕಾರಿ ಗಳ ಕಚೇರಿ ಎದುರು ಪ್ರತಿಬಟನೆ ನಡೆಸಿ ಸರಕಾರದ ವಿರುದ್ದ ಹರಿಹಾಯ್ದಿದ್ದಾರೆ.
ಸರಕಾರದ ಚರ್ಮ ದಪ್ಪ ಇದೆ, ಗಣೇಶೋತ್ಸವ ಕ್ಕೆ ಬಿಜೆಪಿ ಸರಕಾರದವರು ಆಚರಣೆಗೆ ನಿರಾಕರಣೆ ಮಾಡಿದ್ದಾರೆ ಇಂತಹ ಸರಕಾರ ಕ್ಕೆ ನಾನು ದಿಕ್ಕಾರ ಹೇಳುತ್ತೆನೆ . ಮಹಾರಾಷ್ಟ್ರ ಸರಕಾರ ಜೂನ್ ನಲ್ಲೆ ಅನುಮತಿ ಕೊಟ್ಟಿದೆ, ಇವರಿಗೆನೂ ದಾಡಿ ಎಂದು ಮುತಾಲಿಕ ಅವರು ನಾನು ಜೈಲಿಗೆ ಹೋಗಲು ಸಿದ್ದ ಗಣಪತಿ ಸಮೇತ ನಮ್ಮನ್ನು ಜೈಲಿಗೆ ಹಾಕಲಿ, ಸಾರ್ವಜನಿಕ ಗಣಪತಿಗಳನ್ನು ಪ್ರತಿಷ್ಠಾಪನೆ ಮಾಡಿಯೇ ಸಿದ್ದರಿದ್ದೆವೆ, ಗಣಪತಿ ಕೂಡಿಸಲು ಕೊಡೊಲ್ಲಾ ಅಂದ್ರೆ ಹೆಂಗೆ ಸರ್ಕಾರ ನಡೆಸುವರು ಏನು ಶಗಣಿ ತಿಂತಾರಾ,
ಸರಕಾರದವರು ಬಾರ ಗಳಿಗೆ ಪರಮಿಶನ್ ಕೊಡ್ತಿರಿ ಆದ್ರೆ ಗಣಪತಿ ಹಬ್ಬ ಆಚರಣೆಗೆ ಬ್ರೆಕ್ ಹಾಕ್ತಿರಾ ಇಂದಿನಿಂದ ಸರಕಾರಕ್ಕೆ 24 ಗಂಟೆ ಕೊಡ್ತಾ ಇದೆನಿ, ಪರಮಿಶನ್ ಕೊಡಲೇಬೇಕು ಎಂದು ಗಡುವು ಕೊಟ್ಟಿದ್ದಾರೆ ಪ್ರಮೋದ ಮುತಾಲಿಕ್..
ಸರಕಾರಕ್ಕೆ ಪ್ರಮೋದ ಮುತಾಲಿಕ್ 24 ಗಂಟೆ ಗಡುವು ಕೊಟ್ಟಿದ್ದೆಕೆ..?
Reviewed by News10Karnataka Admin
on
August 17, 2020
Rating:

No comments: